Viral: ಕರ್ಕಶ ಹಾರ್ನ್ ಹಾಕಿ ಕಿರಿಕಿರಿ ಮಾಡ್ತಿದ್ದ ವಾಹನ ಚಾಲಕರಿಗೆ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಕೊಟ್ಟ ಶಿಕ್ಷೆ ಎಂಥದ್ದು ನೋಡಿ…
ಕೆಲ ವಾಹನ ಚಾಲಕರು ಪದೇ ಪದೇ ಕರ್ಕಶ ಹಾರ್ನ್ ಹಾಕುವ ಮೂಲಕ ಸಾರ್ವಜನಿಕರಿಗೆ ತೊಂದರೆಯನ್ನು ನೀಡುತ್ತಿರುತ್ತಾರೆ. ಇಂತಹವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ಇಲ್ಲೊಬ್ರು ಟ್ರಾಫಿಕ್ ಪೊಲೀಸ್ ವಿನೂತನ ಪ್ರಯತ್ನವೊಂದನ್ನು ಮಾಡಿದ್ದು, ಕರ್ಕಶ ಹಾರ್ನ್ ಹಾಕಿ ತೊಂದರೆ ನೀಡುವ ಚಾಲಕರಿಗೆ ಅದೇ ಹಾರ್ನ್ ಸದ್ದನ್ನು ಕೇಳಿಸುವ ಮೂಲಕ ವಿನೂತನ ಶಿಕ್ಷೆ ನೀಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕೆಲ ವಾಹನ ಚಾಲಕರು ತಮ್ಮ ಕ್ರೇಜ್‌ಗಾಗಿ ಶಬ್ಧ ಮಾಲಿನ್ಯವನ್ನು ಉಂಟು ಮಾಡುವ ಕರ್ಕಶ ಹಾರ್ನ್‌ಗಳನ್ನೇ ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳುತ್ತಾರೆ. ಈಗಂತೂ ಕರ್ಕಶ ಹಾರ್ನ್ ಹಾಕುವ ಪ್ರವೃತ್ತಿ ವಾಹನ ಚಾಲಕರಲ್ಲಿ ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ಜೋರು ಹಾರ್ನ್ ಹಾಕಿಯೇ ವಾಹನಗಳನ್ನು ಓಡಿಸುತ್ತಿರುತ್ತಾರೆ. ಇದು ಶಬ್ಧ ಮಾಲಿನ್ಯವನ್ನು ಉಂಟು ಮಾಡುವುದು ಮಾತ್ರವಲ್ಲದೆ ಸಾರ್ವಜನಿಕರಿಗೆ ಕಿರಿಕಿರಿಯನ್ನು ಸಹ ಉಂಟು ಮಾಡುತ್ತದೆ. ಹೀಗೆ ಪದೇ ಪದೇ ಕರ್ಕಶ ಹಾರ್ನ್ ಹಾಕುವ ಮೂಲಕ ಜನರಿಗೆ ತೊಂದರೆಯನ್ನು ನೀಡುವ ವಾಹನ ಚಾಲಕರಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ಇಲ್ಲೊಬ್ರು ಟ್ರಾಫಿಕ್ ಪೊಲೀಸ್ ವಿನೂತನ ಪ್ರಯತ್ನವೊಂದನ್ನು ಮಾಡಿದ್ದು, ಕರ್ಕಶ ಹಾರ್ನ್ ಹಾಕಿ ತೊಂದರೆ ನೀಡುವ ಚಾಲಕರಿಗೆ ಅದೇ ಹಾರ್ನ್ ಸದ್ದನ್ನು ಕೇಳಿಸುವ ಮೂಲಕ ವಿನೂತನ ಶಿಕ್ಷೆ ನೀಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಶಿವಮೊಗ್ಗದ ಟ್ರಾಪಿಕ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕರ್ಕಶ ಹಾರ್ನ್ ಹಾಕುವ ವಾಹನ ಚಾಲಕರಿಗೆ ಈ ವಿನೂತನ ಶಿಕ್ಷೆಯನ್ನು ನೀಡಿದ್ದಾರೆ. ಹೌದು ಭಾನುವಾರ (ಜನವರಿ 19) ಪಿಎಸ್‌ಐ ತಿರುಮಲೇಶ್ ಕರ್ಕಶ ಹಾರ್ನ್ ಹಾಕುವ ವಾಹನ ಚಾಲಕರನ್ನು ತಡೆದು ನಿಲ್ಲಿಸಿ, ಅದೇ ವಾಹನದ ಹಾರ್ನ್ ಸದ್ದನ್ನು ಅವರಿಗೆ ಕೇಳಿಸುವ ಮೂಲಕ ವಿನೂತನ ಶಿಕ್ಷೆ ನೀಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Traffice police gives a perfect treatment for honking.pic.twitter.com/vdzvwj8Dtd
— Vije (@vijeshetty) January 20, 2025
ಈ ಕುರಿತ ವಿಡಿಯೋವನ್ನು vijeshetty ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಕರ್ಕಶ ಶಬ್ಧ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ವಾಹನ ಚಾಲಕರಿಗೆ ತಮ್ಮದೇ ಶೈಲಿಯಲ್ಲಿ ಟ್ರಾಫಿಕ್ ಪೊಲೀಸರಿಂದ ಶಿಕ್ಷೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕರ್ಕಶ ಹಾರ್ನ್ ಹಾಕುವಂತಹ ಚಾಲಕರನ್ನು ಗಾಡಿಯಿಂದ ಕೆಳಗಿಳಿಸಿ, ಅದೇ ಹಾರ್ನ್ ಸದ್ದನ್ನು ಅವರಿಗೆ ಕೇಳಿಸುವ ಮೂಲಕ, ಕಿರಿಕಿರಿ ಆಗ್ತಿದೆ ಅಲ್ವಾ, ಮತ್ತೆ ಯಾಕೆ ಈ ಹಾರ್ನ್ ಬೇಕಿತ್ತು ಎಂದು ವಿನೂತನ ರೀತಿಯಲ್ಲಿ ಶಿಕ್ಷೆ ನೀಡಿದಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಪಬ್ಲಿಕ್‌ನಲ್ಲಿಯೇ ಮುದ್ದಿನ ಹೆಂಡ್ತಿಗಾಗಿ ಗಂಡನ ರೊಮ್ಯಾಂಟಿಕ್ ಡ್ಯಾನ್ಸ್; ವೈರಲ್ ಆಯ್ತು ವಿಡಿಯೋ
ಜನವರಿ 20 ರಂದು ಶೇರ್ ಮಾಡಲಾದ ಈ ವಿಡಿಯೋ 3.2 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹೀಗೆ ಕರ್ಕಶ ಹಾರ್ನ್ ಹಾಕುವವರಿಗೆ ದಂಡ ವಿಧಿಸುವುದು ಮಾತ್ರವಲ್ಲದೆ ಅವರ ಲೈಸನ್ಸ್ ರದ್ದು ಮಾಡ್ಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಉತ್ತಮ ರೀತಿಯಲ್ಲಿ ಪಾಠ ಕಲಿಸಿದ್ದೀರಿ ಸರ್ʼ ಎಂದು ಟ್ರಾಫಿಕ್ ಪೊಲೀಸರ ಕೆಲಸವನ್ನು ಶ್ಲಾಘಿಸಿದ್ದಾರೆ. ಇನ್ನೂ ಅನೇಕರು ಟ್ರಾಫಿಕ್ ಪೊಲೀಸರ ಈ ವಿನೂತನ ಪ್ರಯತ್ನಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ