Viral: ಹಿಮದ ರಾಶಿಯ ನಡುವೆ ಸಿಲುಕಿದ ಜಿಂಕೆಗೆ ಕಾಡಿಗೆ ಹೋಗಲು ದಾರಿ ಮಾಡಿಕೊಟ್ಟ ಸಹೃದಯಿ; ವಿಡಿಯೋ ವೈರಲ್
ಕೆಲವೊಮ್ಮೆ ನಾವು ಮಾಡುವ ಸಣ್ಣ ಸಹಾಯ ಕೂಡಾ ಇನ್ನೊಬ್ಬರ ಬಾಳಿಗೆ ಬೆಳಕನ್ನೇ ನೀಡಿದಂತಾಗುತ್ತದೆ. ಇದಕ್ಕೆ ಉತ್ತಮ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ವ್ಯಕ್ತಿಯೊಬ್ಬರು ಸಣ್ಣ ಸಹಾಯ ಮಾಡುವ ಮೂಲಕ ಜಿಂಕೆಯ ರಕ್ಷಣೆ ಮಾಡಿದ್ದಾರೆ. ಹೌದು ಹಿಮದ ರಾಶಿಯ ನಡುವೆ ಸಿಲುಕಿ ಒದ್ದಾಡುತ್ತಿದ್ದ ಆ ಮುಗ್ಧ ಜೀವಕ್ಕೆ ಕಾಡಿಗೆ ಹೋಗಲು ದಾರಿ ಮಾಡಿ ಕೊಡುವ ಮೂಲಕ ಮಾನವೀಯತೆಯನ್ನು ಮರೆದಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ.
ಇಂದಿನ ಕಾಲದಲ್ಲಿ ಮನುಷ್ಯನಲ್ಲಿ ಮಾನವೀಯತೆಯೇ ಮರೆಯಾಗಿದೆ ಅಂತ ಹೆಚ್ಚಿನವರು ಹೇಳುತ್ತಿರುತ್ತಾರೆ. ಇತತರ ಗೋಳು ನಮಗ್ಯಾಕೆ ಎಂದು ಸ್ವಾರ್ಥ ಜೀವನವನ್ನೇ ನಡೆಸುವ ಜನಗಳ ನಡುವೆ ಒಂದಷ್ಟು ಮಾನವೀಯತೆ, ದಯಾ ಮನೋಭಾವವನ್ನು ಮೈಗೂಡಿಸಿಕೊಂಡವರು ಇತತರ ಕಷ್ಟಕ್ಕೆ ಸಹಾಯ ಮಾಡುವ ಒಳ್ಳೆಯ ಮನಸ್ಸಿನ ಜನರೂ ಇದ್ದಾರೆ. ಹೀಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಸಹೃದಯಿಗಳಿಗೆ ಸಂಬಮಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲೂ ಕೂಡಾ ಕಾಣ ಸಿಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ವ್ಯಕ್ತಿಯೊಬ್ಬರು ಸಣ್ಣ ಸಹಾಯ ಮಾಡುವ ಮೂಲಕ ಜಿಂಕೆಯ ರಕ್ಷಣೆ ಮಾಡಿದ್ದಾರೆ. ಹೌದು ಹಿಮದ ರಾಶಿಯ ನಡುವೆ ಸಿಲುಕಿ ಒದ್ದಾಡುತ್ತಿದ್ದ ಆ ಮುಗ್ಧ ಜೀವಕ್ಕೆ ಕಾಡಿಗೆ ಹೋಗಲು ದಾರಿ ಮಾಡಿ ಕೊಡುವ ಮೂಲಕ ಮಾನವೀಯತೆಯನ್ನು ಮರೆದಿದ್ದಾರೆ. ಇವರ ಈ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಹಿಮದ ರಾಶಿಯ ನಡುವೆ ಸಿಲುಕಿ ಪ್ರಾಣ ರಕ್ಷಣೆಗಾಗಿ ಒದ್ದಾಡುತ್ತಿದ್ದ ಜಿಂಕೆಯನ್ನು ಕಂಡ ವ್ಯಕ್ತಿಯೊಬ್ಬರು, ಕೊರೆಯುವ ಚಳಿಯ ಮಧ್ಯೆಯೂ ಕಾರಿನಿಂದ ಇಳಿದು ಹಿಮ ರಾಶಿಯ ನಡುವೆ ಸಣ್ಣ ಕಾಲು ದಾರಿಯನ್ನು ಮಾಡಿ ಕೊಡುವ ಮೂಲಕ, ಜಿಂಕೆ ಕಾಡಿಗೆ ಸುರಕ್ಷಿತವಾಗಿ ತಲುಪುವಂತೆ ಮಾಡಿದ್ದಾರೆ.
This man cleared a path through deep snow to guide a deer back into the forest. pic.twitter.com/lIPfjFXszR
— Nature is Amazing ☘️ (@AMAZlNGNATURE) January 20, 2025
AMAZINGNATURE ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಜಿಂಕೆಯೊಂದು ಹಿಮದ ರಾಶಿಯ ನಡುವೆ ಸಿಲುಕಿ ಪ್ರಾಣ ರಕ್ಷಣೆಗಾಗಿ ಒದ್ದಾಡುತ್ತಿರುವ ದೃಶ್ಯವನ್ನು ಕಾಣಬಹುದು. ತಕ್ಷಣ ರಕ್ಷಣೆಗೆ ಧಾವಿಸಿದ ವ್ಯಕ್ತಿಯೊಬ್ಬರು ಹಿಮದದಲ್ಲಿ ಕಾಲು ದಾರಿಯನ್ನು ನಿರ್ಮಿಸಿಕೊಡುವ ಮೂಲಕ ಜಿಂಕೆ ಸುರಕ್ಷಿತವಾಗಿ ಕಾಡಿಗೆ ಹೋಗುವಂತೆ ಮಾಡಿದ್ದಾರೆ.
ಇದನ್ನೂ ಓದಿ: ಪಬ್ಲಿಕ್‌ನಲ್ಲಿಯೇ ಮುದ್ದಿನ ಹೆಂಡ್ತಿಗಾಗಿ ಗಂಡನ ರೊಮ್ಯಾಂಟಿಕ್ ಡ್ಯಾನ್ಸ್; ವೈರಲ್ ಆಯ್ತು ವಿಡಿಯೋ
ಜನವರಿ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜಕ್ಕೂ ಈ ವ್ಯಕ್ತಿ ಸಹೃದಯಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮನುಷ್ಯ ಪ್ರಕೃತಿಗೆ ಒಳ್ಳೆಯದನ್ನು ಮಾಡುವುದನ್ನು ನೋಡುವುದು ಅದ್ಭುತವಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಆ ವ್ಯಕ್ತಿಯ ಮಾನವೀಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ