ಇಂದಿನ ಯುವಯುವತಿಯರು ಪಾರ್ಟಿ ಮೋಜು ಮಸ್ತಿಯೆಂದು ಈ ಮದ್ಯಪಾನದ ದಾಸರಾಗಿದ್ದಾರೆ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯು ಕುಡಿತಕ್ಕೆ ದಾಸನಾಗಿ ಬಿಟ್ಟಿದ್ದರೆ ಕುಟುಂಬ ಸದಸ್ಯರು ಕಣ್ಣೀರಲ್ಲೇ ಕೈತೊಳೆಯಬೇಕಾಗುತ್ತದೆ. ಅದಲ್ಲದೇ ಈ ಮದ್ಯವನ್ನು ಸೇವಿಸುವುದು ಆರೋಗ್ಯಕ್ಕೆ ನಾನಾ ರೀತಿಯ ಸಮಸ್ಯೆಗಳನ್ನು ತಂದೊಡ್ದುತ್ತದೆ. ಇದರಿಂದ ಯಾವುದೇ ರೀತಿಯ ಪೋಷಕಾಂಶಗಳು ಇಲ್ಲದಿರುವುದರಿಂದ, ದೇಹವು ಪೋಷಕಾಂಶಗಳ ಕೊರತೆಯನ್ನು ಎದುರಿಸಬಹುದು. ಅದಲ್ಲದೇ ಲಿವರ್ ಸೇರಿದಂತೆ ದೇಹದ ಪ್ರಮುಖ ಅಂಗಗಳಿಗೆ ಹಾನಿಯಾಗುವ ಸಾಧ್ಯತೆಯು ಹೆಚ್ಚಾಗಿದೆ.
ಈ ಪಾನೀಯ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನ
* ನೀರು
* ಕಪ್ಪು ಉಪ್ಪು
* ಜೇನು ತುಪ್ಪ
ಇದನ್ನೂ ಓದಿ: ಮೆಣಸಿನ ಖಾರಕ್ಕೆ ಕೈ ಉರಿದ್ರೆ ಈ ಸರಳ ಮನೆ ಮದ್ದು ಬಳಸಿ
* ಒಂದು ಲೋಟ ಬಿಸಿ ನೀರಿಗೆ ಕಪ್ಪು ಉಪ್ಪು ಹಾಗೂ ಜೇನು ತುಪ್ಪ ಬೆರೆಸಿದರೆ ಈ ಪಾನೀಯ ಸಿದ್ಧವಾಗುತ್ತದೆ. ಇದನ್ನು ಕುಡಿತದ ಚಟವಿರುವವರಿಗೆ ದಿನನಿತ್ಯ ಕುಡಿಯಲು ನೀಡಿದರೆ ಈ ಚಟವನ್ನು ಸುಲಭವಾಗಿ ಬಿಡಿಸಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ