Kitchen Tips in Kannada : ಮೆಣಸಿನ ಖಾರಕ್ಕೆ ಕೈ ಉರಿದ್ರೆ ಈ ಸರಳ ಮನೆ ಮದ್ದು ಬಳಸಿ

ಉಪ್ಪು, ಹುಳಿ ಹಾಗೂ ಖಾರವಿದ್ದಾಗಲೇ ಆ ಅಡುಗೆಯು ರುಚಿಸುವುದು. ಕೆಲವರಿಗೆ ಅಡುಗೆಯು ಖಾರವಾಗಿ ಇರಲೇಬೇಕು, ಸ್ವಲ್ಪ ಖಾರ ಕಡಿಮೆಯಾದರೂ ಆಹಾರವು ಬಾಯಿಗೆ ಹಿಡಿಸುವುದೇ ಇಲ್ಲ. ಎಲ್ಲರಿಗೂ ಅಡುಗೆಯು ಖಾರವಾಗಿರಲೆಂದು ಮೆಣಸಿನಕಾಯಿಯನ್ನು ಬಳಸುತ್ತೇವೆ. ಆದರೆ ಈ ಮೆಣಸಿನಕಾಯಿ ಕತ್ತರಿಸಿದ ಬಳಿಕ ಕೈ ಸುಡುವಂತಹ ಅನುಭವವು ಬಹುತೇಕರಿಗೆ ಆಗಿರಬಹುದು. ಮೆಣಸಿನಕಾಯಿ ಕತ್ತರಿಸಿದ ನಂತರ ಕೈ ಉರಿಯುತ್ತಿದ್ದರೆ ಮನೆಯಲ್ಲೇ ಈ ಮನೆ ಮದ್ದನ್ನು ಮಾಡಿದರೆ ಉರಿಯೆಲ್ಲವು ಮಾಯಾವಾಗುತ್ತದೆ.

Kitchen Tips in Kannada : ಮೆಣಸಿನ ಖಾರಕ್ಕೆ ಕೈ ಉರಿದ್ರೆ ಈ ಸರಳ ಮನೆ ಮದ್ದು ಬಳಸಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: May 07, 2024 | 12:54 PM

ಖಾರವಾದ ಪದಾರ್ಥವನ್ನು ತಿಂದ ನಂತರ ಬಾಯಿ ಹೇಗೆ ಉರಿಯುತ್ತದೆಯೋ ಅದೇ ರೀತಿ ಮೆಣಸಿನಕಾಯಿಯನ್ನು ಕತ್ತರಿಸಿದ ಬಳಿಕ ಕೈ ಕೂಡ ಕೆಂಡದಂತೆ ಸುಡಲು ಪ್ರಾರಂಭವಾಗುತ್ತದೆ. ಕೈಯನ್ನು ತಣ್ಣನೆಯ ನೀರಿನಲ್ಲಿ ಎಷ್ಟೇ ಕೈ ತೊಳೆದರೂ ಕೈ ಉರಿ ಮಾತ್ರ ಕಡಿಮೆಯಾಗುವುದಿಲ್ಲ. ಮೆಣಸಿನ ಕಾಯಿಯಲ್ಲಿ ಕ್ಯಾಪ್ಸೈಸಿನ್ ಅಂಶವಿದ್ದು, ಇದು ಚರ್ಮಕ್ಕೆ ತಾಗಿದಾಗ ಸುಡುವ ಅನುಭವವಾಗುತ್ತದೆ. ಹೀಗಾದಾಗ ಮನೆಯಲ್ಲಿರುವ ಈ ಕೆಲವು ಪದಾರ್ಥಗಳೇ ರಾಮಬಾಣವಾಗಿ ಕೆಲಸ ಮಾಡುತ್ತದೆ.

* ಕೈಗಳು ಉರಿಯುತ್ತಿದ್ದರೆ ಕೈಗಳಿಗೆ ಐಸ್ ನಿಂದ ಮಸಾಜ್ ಮಾಡಿದರೆ ಉರಿ ಕಡಿಮೆಯಾಗುತ್ತದೆ.

* ಮೆಣಸಿನ ಕಾಯಿ ಕತ್ತರಿಸಿ ನಂತರ ಕೈಗಳು ಉರಿಯುತ್ತಿದ್ದರೆ ಕೈಗಳಿಗೆ ಅಲೊವೆರಾ ಜೆಲ್ ಅನ್ನು ಹಚ್ಚಿ ಸ್ವಲ್ಪ ಹೊತ್ತು ಹಾಗೆ ಬಿಡುವುದರಿಂದ ಉರಿಯು ನಿವಾರಣೆಯಾಗುತ್ತದೆ.

* ನಿಂಬೆಯನ್ನು ಕೈಗಳ ಮೇಲೆ ತಿಕ್ಕಿ ಕೊಳ್ಳುವುದರಿಂದಲೂ ಉರಿಯು ಕಡಿಮೆಯಾಗುತ್ತದೆ..

* ಮೆಣಸಿನ ಕಾಯಿಯನ್ನು ಕತ್ತರಿಸಿದ ಬಳಿಕ ಕೈಗಳಲ್ಲಿ ಉರಿ ಹಾಗೂ ಸುಡುವ ಅನುಭವವಾದರೆ ಕೈಗಳಿಗೆ ಹಿಟ್ಟನ್ನು ಬೆರೆಸುವುದರಿಂದ ಈ ಉರಿ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಎಳನೀರು ಕುಡಿಯುವವರ ಗಮನಕ್ಕೆ, ಈ ವಿಚಾರ ನಿಮಗೆ ತಿಳಿದಿರಲೇಬೇಕು

* ತಣ್ಣನೆಯ ಹಾಲು ಅಥವಾ ಮೊಸರನ್ನು ಕೈಗಳಿಗೆ ಹಚ್ಚುವುದರಿಂದ ಉರಿಯು ಶಮನವಾಗುತ್ತದೆ.

* ಬೇಕಿಂಗ್ ಪೌಡರನ್ನು ನೀರಿನೊಂದಿಗೆ ಬೆರೆಸಿ ಕೈಗಳಿಗೆ ಹಚ್ಚುವುದು ಕೂಡ ಪರಿಣಾಮಕಾರಿಯಾಗಿದೆ.

* ಕೈ ಸುಡುವ ಅನುಭವವಾಗುತ್ತಿದ್ದರೆ ವ್ಯಾಸ್ಲಿನ್‌ ಅಥವಾ ಆಲಿವ್ ಎಣ್ಣೆ ಹಚ್ಚುವುದು ಕೂಡ ಪರಿಣಾಮಕಾರಿಯಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ