World Asthma Day 2024 : ಅಸ್ತಮಾ ಕಾಯಿಲೆಯ ನಿರ್ಲಕ್ಷ್ಯ ಜೀವಕ್ಕೆ ಅಪಾಯ ಖಂಡಿತ
ಇತೀಚಿನ ದಿನಗಳಲ್ಲಿ ಬಹುತೇಕರನ್ನು ಈ ಅಸ್ತಮಾ ಕಾಯಿಲೆಯು ಕಾಡುತ್ತಿದೆ. ಅಪಾಯಕಾರಿಯಾಗಿ ಕಾಯಿಲೆಯಾಗಿರುವ ಅಸ್ತಮಾವನ್ನು ನಿರ್ಲಕ್ಷ್ಯ ವಹಿಸಿದರೆ ಆರೋಗ್ಯವು ಹಾಳಾಗಬಹುದು. ಈ ಬಾರಿ ಮೇ 7 ರಂದು ವಿಶ್ವ ಅಸ್ತಮಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಹಾಗಾದ್ರೆ ವಿಶ್ವ ಅಸ್ತಮಾ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿಯು ಇಲ್ಲಿದೆ.
ಯಾವುದೇ ಕಾಯಿಲೆ ಬಂದಾಗ ದೇಹದಲ್ಲಿ ಬದಲಾವಣೆ ಆಗಿರುವುದರ ಕುರಿತು ಕಾಳಜಿ ವಹಿಸಬೇಕು. ಪ್ರಾರಂಭದಲ್ಲಿಯೇ ನಿರ್ಲಕ್ಷ್ಯ ವಹಿಸಿದರೆ ಅಸ್ತಮಾ ಬರುವ ಸಾಧ್ಯತೆಯು ಅಧಿಕವಾಗಿರುತ್ತದೆ. ಅನುವಂಶಿಕತೆ, ಆರೋಗ್ಯ ಸಮಸ್ಯೆಗಳು, ಅಲರ್ಜಿ, ಸೋಂಕು ಹಾಗೂ ಹವಾಮಾನದಲ್ಲಾಗುವ ಬದಲಾವಣೆಯಿಂದ ಈ ಆರೋಗ್ಯ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ. ಪ್ರಾರಂಭದಲ್ಲಿ ಇದಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಂಡರೆ ಈ ಅಪಾಯಕಾರಿ ಕಾಯಿಲೆಯಿಂದ ಪಾರಾಗಬಹುದು. ಅಸ್ತಮಾದಂತಹ ಅಪಾಯಕಾರಿಯ ಕಾಯಿಲೆಯ ನಿರ್ಮೂಲನೆಗಾಗಿ ವಿಶ್ವ ಅಸ್ತಮಾ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
ವಿಶ್ವ ಅಸ್ತಮಾ ದಿನದ ಇತಿಹಾಸ ಹಾಗೂ ಮಹತ್ವ
ವಿಶ್ವ ಅಸ್ತಮಾ ದಿನವನ್ನು ಮೊದಲ ಬಾರಿಗೆ 1998ರಲ್ಲಿ ಆಚರಿಸಲಾಯಿತು. ಅಸ್ತಮಾ ದಿನವನ್ನು ಮೇ ತಿಂಗಳ ಮೊದಲ ಮಂಗಳವಾರ ಆಚರಿಸಲಾಗುತ್ತದೆ. ಈ ದಿನದ ಮುಖ ಉದ್ದೇಶವೇ ಅಸ್ತಮಾ ಕಾಯಿಲೆಯ ಬಗ್ಗೆ ಅರಿವು ಮೂಡಿಸುವುದು ಹಾಗೂ ರೋಗಿಗಳನ್ನು ಆರೈಕೆ ಮಾಡುವ ಮೂಲಕ ಆರೋಗ್ಯ ಸುಧಾರಿಸುವುದಾಗಿದೆ. ಗ್ಲೋಬಲ್ ಇನಿಶಿಯೇಟಿವ್ ಫಾರ್ ಅಸ್ತಮಾ ಎಂಬ ಸಂಸ್ಥೆ ವಾರ್ಷಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಅಸ್ತಮಾ ರೋಗ ಎಂದರೇನು?
ದೇಹದ ವಾಯುಮಾರ್ಗಗಳ ಸುತ್ತ ಸ್ನಾಯುಗಳನ್ನು ಬಿಗಿಗೊಳಿಸುವುದರಿಂದ ಈ ಅಸ್ತಮಾವು ಉಂಟಾಗುತ್ತದೆ. ಈ ವಾಯುಮಾರ್ಗಗಳ ಒಳಪದರವು ಊದಿಕೊಳ್ಳುತ್ತದೆ ಇಲ್ಲದಿದ್ದರೆ ಉರಿಯುತ್ತದೆ.
ಅಸ್ತಮಾದ ಲಕ್ಷಣಗಳು ಹಾಗೂ ಚಿಕಿತ್ಸೆ ಹೇಗೆ?
* ಉಸಿರಾಟದ ತೊಂದರೆ
* ವಿಪರೀತ ಕೆಮ್ಮು ಮತ್ತು ದೀರ್ಘಕಾಲದ ಶೀತದಂತಹ ಲಕ್ಷಣಗಳು
* ವಿಪರೀತ ಎದೆ ನೋವು
* ನಿದ್ರಿಸಲು ಆಗದಿರುವುದು
ಇದನ್ನೂ ಓದಿ: ಎಳನೀರು ಕುಡಿಯುವವರ ಗಮನಕ್ಕೆ, ಈ ವಿಚಾರ ನಿಮಗೆ ತಿಳಿದಿರಲೇಬೇಕು
ಅಸ್ತಮಾ ಕಾಯಿಲೆಯು ಆರಂಭವಾದ ಕೂಡಲೇ ಇನ್ಹಲೇಷನ್ ಚಿಕಿತ್ಸೆ ಪಡೆದುಕೊಂಡರೆ ಪರಿಣಾಮಕಾರಿಯಾಗಿ ಗುಣವಾಗುತ್ತದೆ. ಸರಿಯಾದ ಸಮಯಕ್ಕೆ ಔಷಧವನ್ನು ಸೇವಿಸಿ, ವೈದ್ಯರ ಸೂಚನೆಯಂತೆ ಜೀವನಶೈಲಿ ಹಾಗೂ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡರೆ ಈ ಕಾಯಿಲೆಯಿಂದ ಗುಣಮುಖರಾಗಬಹುದು. ಅದಲ್ಲದೇ ರೋಗಿಗಳು ವೈದ್ಯಕೀಯ ಸಲಹೆಯಿಲ್ಲದೆ ತೀವ್ರ ಒತ್ತಡದ ವ್ಯಾಯಾಮಗಳನ್ನು ಮಾಡುವಂತಿಲ್ಲ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ