AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Red Cross Day 2024 : ಸ್ವಾರ್ಥ ಮರೆತು ಮಾನವ ಕುಲದ ಸೇವೆಗಾಗಿ ಕೈ ಜೋಡಿಸೋಣ!

ಅಂತರಾಷ್ಟ್ರೀಯ ರೆಡ್‌ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಚಳವಳಿಯ ನಂಬಿಕೆಗಳು ಹಾಗೂ ತತ್ವಗಳ ಕುರಿತು ತಿಳಿಸುವ ಸಲುವಾಗಿ ಪ್ರತಿ ವರ್ಷ ಮೇ 8 ರಂದು ‘ವಿಶ್ವ ರೆಡ್​ ಕ್ರಾಸ್ ದಿನ’ ಈ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಆಚರಣೆಯ ಹಿಂದಿನ ಇತಿಹಾಸದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

World Red Cross Day 2024 : ಸ್ವಾರ್ಥ ಮರೆತು ಮಾನವ ಕುಲದ ಸೇವೆಗಾಗಿ ಕೈ ಜೋಡಿಸೋಣ!
World Red Cross Day 2024
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ|

Updated on: May 07, 2024 | 8:28 PM

Share

ಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಾ ಬಂದಿರುವ ಸಂಸ್ಥೆಯೇ ರೆಡ್ ಕ್ರಾಸ್. ಯಾವುದೇ ತಾರತಮ್ಯವಿಲ್ಲದೆ ಜನರಿಗೆ ಸಹಾಯ ಮಾಡುವುದೇ ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಅಂತರಾಷ್ಟ್ರೀಯ ರೆಡ್‌ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಚಳವಳಿಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ವಿಶ್ವ ರೆಡ್ ಕ್ರಾಸ್ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ರೆಡ್ ಕ್ರಾಸ್ ದಿನದ ಇತಿಹಾಸ:

1948 ರಲ್ಲಿ ಮೊದಲ ಬಾರಿಗೆ ವಿಶ್ವ ರೆಡ್ ಕ್ರಾಸ್ ದಿನ’ವನ್ನು ಆಚರಿಸಲಾಯಿತು. ಈ ದಿನವನ್ನು ‘ರೆಡ್ ಕ್ರೆಸೆಂಟ್ ಡೇ’ ಎಂದೂ ಕೂಡ ಕರೆಯಲಾಗುತ್ತದೆ. 1828ರ ಮೇ 8ರಂದು ಇಂಟರ್ನ್ಯಾಷನಲ್ ಕಮಿಟಿ ಆಫ್ ದಿ ರೆಡ್‌ಕ್ರಾಸ್‌ನ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ ಜನಿಸಿದ್ದರು. ವಿಶ್ವ ರೆಡ್​ ಕ್ರಾಸ್ ಸಂಸ್ಥೆಯನ್ನು 1863ರಲ್ಲಿ ಪ್ರಾರಂಭಿಸಿದ್ದರು. ಹೆನ್ರಿ ಡ್ಯೂನಾಂಟ್ ಜನ್ಮದಿನದಂದು ವಿಶ್ವ ರೆಡ್ ಕ್ರಾಸ್ ದಿನವನ್ನು ಆಚರಿಸಲಾಗುತ್ತಿದೆ.

ಇದನ್ನೂ ಓದಿ: ಮೆಣಸಿನ ಖಾರಕ್ಕೆ ಕೈ ಉರಿದ್ರೆ ಈ ಸರಳ ಮನೆ ಮದ್ದು ಬಳಸಿ

ವಿಶ್ವ ರೆಡ್ ಕ್ರಾಸ್ ದಿನದ ಮಹತ್ವ:

ಯುದ್ಧ ಸೇರಿದಂತೆ ಕಷ್ಟದ ಸಂದರ್ಭಗಳಲ್ಲಿ ಅಗತ್ಯವಿರುವವರಿಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡುವುದು ಈ ದಿನದ ಮೂಲ ಉದ್ದೇಶವಾಗಿದೆ. ಅಂತರರಾಷ್ಟ್ರೀಯ ರೆಡ್‌ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಚಳುವಳಿಯ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ. ನಿಸ್ವಾರ್ಥದಿಂದ ಕೆಲಸ ಮಾಡುವ ಸ್ವಯಂಸೇವಕರು ಮತ್ತು ಕಾರ್ಮಿಕರ ಕೊಡುಗೆಯನ್ನು ಈ ದಿನದಂದು ಸ್ಮರಿಸುವ ಕೆಲಸವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ