Alcohol Drinking Habits : ನಿಮ್ಮ ಮನೆಯಲ್ಲಿ ಯಾರಾದರೂ ಕುಡಿತದ ಚಟಕ್ಕೆ ದಾಸರಾಗಿದ್ದಾರಾ? ಇದನ್ನು ಕುಡಿಸಿ ಸಾಕು

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದ್ದಿದರೂ ಕುಡಿಯುವವರ ಸಂಖ್ಯೆಯು ಕಡಿಮೆಯಾಗಿಲ್ಲ. ಬೆಳಗ್ಗೆ ಎದ್ದ ಕೂಡಲೇ ಮದ್ಯಪಾನದಲ್ಲೇ ಮುಳುಗಿಯುವವರು ಇದ್ದು ಬಿಟ್ಟರೆ ಮನೆ ಹಾಗೂ ಕುಟುಂಬದವರ ನೆಮ್ಮದಿಯೇ ಹಾಳು. ಒಂದು ವೇಳೆ ನಿಮ್ಮ ಮನೆಯಲ್ಲಿ ಯಾರದರೂ ಕುಡಿತದ ಚಟಕ್ಕೆ ದಾಸರಾಗಿದ್ದರೆ ಈ ಪಾನೀಯವನ್ನು ಮಾಡಿ ಕುಡಿಸಿದರೆ ಈ ಚಟದಿಂದ ಹೊರಬರುವಂತೆ ಮಾಡಬಹುದು.

Alcohol Drinking Habits : ನಿಮ್ಮ ಮನೆಯಲ್ಲಿ ಯಾರಾದರೂ ಕುಡಿತದ ಚಟಕ್ಕೆ ದಾಸರಾಗಿದ್ದಾರಾ? ಇದನ್ನು ಕುಡಿಸಿ ಸಾಕು
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: May 07, 2024 | 4:11 PM

ಇಂದಿನ ಯುವಯುವತಿಯರು ಪಾರ್ಟಿ ಮೋಜು ಮಸ್ತಿಯೆಂದು ಈ ಮದ್ಯಪಾನದ ದಾಸರಾಗಿದ್ದಾರೆ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯು ಕುಡಿತಕ್ಕೆ ದಾಸನಾಗಿ ಬಿಟ್ಟಿದ್ದರೆ ಕುಟುಂಬ ಸದಸ್ಯರು ಕಣ್ಣೀರಲ್ಲೇ ಕೈತೊಳೆಯಬೇಕಾಗುತ್ತದೆ. ಅದಲ್ಲದೇ ಈ ಮದ್ಯವನ್ನು ಸೇವಿಸುವುದು ಆರೋಗ್ಯಕ್ಕೆ ನಾನಾ ರೀತಿಯ ಸಮಸ್ಯೆಗಳನ್ನು ತಂದೊಡ್ದುತ್ತದೆ. ಇದರಿಂದ ಯಾವುದೇ ರೀತಿಯ ಪೋಷಕಾಂಶಗಳು ಇಲ್ಲದಿರುವುದರಿಂದ, ದೇಹವು ಪೋಷಕಾಂಶಗಳ ಕೊರತೆಯನ್ನು ಎದುರಿಸಬಹುದು. ಅದಲ್ಲದೇ ಲಿವರ್ ಸೇರಿದಂತೆ ದೇಹದ ಪ್ರಮುಖ ಅಂಗಗಳಿಗೆ ಹಾನಿಯಾಗುವ ಸಾಧ್ಯತೆಯು ಹೆಚ್ಚಾಗಿದೆ.

ಈ ಪಾನೀಯ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನ

* ನೀರು

* ಕಪ್ಪು ಉಪ್ಪು

* ಜೇನು ತುಪ್ಪ

ಇದನ್ನೂ ಓದಿ: ಮೆಣಸಿನ ಖಾರಕ್ಕೆ ಕೈ ಉರಿದ್ರೆ ಈ ಸರಳ ಮನೆ ಮದ್ದು ಬಳಸಿ

* ಒಂದು ಲೋಟ ಬಿಸಿ ನೀರಿಗೆ ಕಪ್ಪು ಉಪ್ಪು ಹಾಗೂ ಜೇನು ತುಪ್ಪ ಬೆರೆಸಿದರೆ ಈ ಪಾನೀಯ ಸಿದ್ಧವಾಗುತ್ತದೆ. ಇದನ್ನು ಕುಡಿತದ ಚಟವಿರುವವರಿಗೆ ದಿನನಿತ್ಯ ಕುಡಿಯಲು ನೀಡಿದರೆ ಈ ಚಟವನ್ನು ಸುಲಭವಾಗಿ ಬಿಡಿಸಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ