Aloe Vera for Your Hair: ಕೂದಲಿನ ಎಲ್ಲಾ ಸಮಸ್ಯೆಗೂ ಅಲೋವೆರಾದಲ್ಲಿದೆ ಪರಿಹಾರ
ಅಲೋವೆರಾದ ವಿಶಿಷ್ಟ ಗುಣಲಕ್ಷಣಗಳಿಂದಾಗಿ ಶತಮಾನಗಳಿಂದ ಬಳಸಲಾಗುತ್ತಿದೆ. ಇದನ್ನು ಸೌಂದರ್ಯ ವರ್ಧಕ ಹಾಗೂ ಚಿಕಿತ್ಸಕ ಉತ್ಪನ್ನವಾಗಿ ಬಳಸಲಾಗುತ್ತದೆ. ಇದರಲ್ಲಿ ಇರುವ ಪೋಷಕಾಂಶಗಳು ಹಾಗೂ ಔಷಧೀಯ ಗುಣಗಳು ಚರ್ಮ, ಕೇಶರಾಶಿ ಹಾಗೂ ಇತರ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. ಜೊತೆಗೆ ನಿಮ್ಮ ಕೂದಲು ಒರಟಾಗಿದೆ, ಬಣ್ಣ ಕಳೆದುಕೊಂಡಿದೆ, ಶುಷ್ಕತೆಯಿಂದ ಕಳೆಗುಂದಿದೆ ಎನ್ನುವ ಬೇಸರದಲ್ಲಿ ಇದ್ದರೆ ಅಲೋವೆರಾ ಜೊತೆಗೆ ಅಕ್ಕಿಹಿಟ್ಟನ್ನು ಬಳಸಿ ಬದಲಾವಣೆಯನ್ನು ಗಮನಿಸಬಹುದು.
ಅಲೋವೆರಾ ನೈಸರ್ಗಿಕವಾಗಿ ದೊರೆಯುವ ದಿವ್ಯ ಔಷಧ. ಇದರಲ್ಲಿರುವ ವಿಶಿಷ್ಟ ಗುಣಲಕ್ಷಣಗಳಿಂದಾಗಿ ಶತಮಾನಗಳಿಂದ ಬಳಸಲಾಗುತ್ತಿದೆ. ಇದನ್ನು ಸೌಂದರ್ಯ ವರ್ಧಕ ಹಾಗೂ ಚಿಕಿತ್ಸಕ ಉತ್ಪನ್ನವಾಗಿ ಬಳಸಲಾಗುತ್ತದೆ. ಇದರಲ್ಲಿ ಇರುವ ಪೋಷಕಾಂಶಗಳು ಹಾಗೂ ಔಷಧೀಯ ಗುಣಗಳು ಚರ್ಮ, ಕೇಶರಾಶಿ ಹಾಗೂ ಇತರ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. ಜೊತೆಗೆ ನಿಮ್ಮ ಕೂದಲು ಒರಟಾಗಿದೆ, ಬಣ್ಣ ಕಳೆದುಕೊಂಡಿದೆ, ಶುಷ್ಕತೆಯಿಂದ ಕಳೆಗುಂದಿದೆ ಎನ್ನುವ ಬೇಸರದಲ್ಲಿ ಇದ್ದರೆ ಅಲೋವೆರಾ ಜೊತೆಗೆ ಅಕ್ಕಿಹಿಟ್ಟನ್ನು ಬಳಸಿ ಬದಲಾವಣೆಯನ್ನು ಗಮನಿಸಬಹುದು.
ಅಲೋವೆರಾ ಜೆಲ್ನಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು ಇದರ ಔಷಧೀಯ ಗುಣಗಳು ಕಬ್ಬಿಣಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತವೆ. ಚರ್ಮ ಮತ್ತು ಕೇಶರಾಶಿಗಳಿಗೆ ಮಾಯ್ಚುರೈಸ್ ನಂತೆ ಆರೈಕೆ ಮಾಡುತ್ತದೆ ಜೊತೆಗೆ ನೆತ್ತಿಯಲ್ಲಿ ತುರಿಕೆ, ತಲೆಹೊಟ್ಟು ಇನ್ನಿತರ ಸಮಸ್ಯೆಗಳಿದ್ದರೆ ಇದು ಪರಿಹಾರ ನೀಡುತ್ತದೆ ಅದರ ಜೊತೆಗೆ ಅಕ್ಕಿ ಹಿಟ್ಟು ಕೂಡ ನಿಮ್ಮ ಕೂದಲಿಗೆ ತುಂಬಾ ಒಳ್ಳೆಯದು. ನಿಮ್ಮ ಕೂದಲನ್ನು ಇದರಲ್ಲಿ ಸ್ವಚ್ಛ ಮಾಡಿದಲ್ಲಿ ಕೂದಲು ಒಡೆಯುವುದು ಮತ್ತು ಉದುರುವುದು ಕಡಿಮೆಯಾಗುತ್ತದೆ. ಜೊತೆಗೆ ಕೂದಲು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಥೈರಾಯ್ಡ್ ಸಮಸ್ಯೆ ಇರುವವರು ಈ ಆಹಾರಗಳನ್ನು ಸೇವನೆ ಮಾಡಬೇಡಿ
ಹೇಗೆ ಬಳಸಬೇಕು?
ಅಲೋವೆರಾವನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಅದರಲ್ಲಿರುವ ಜೆಲ್ ಅನ್ನು ಒಂದು ಬುಟ್ಟಿಗೆ ಹಾಕಿ ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸಿಯಲ್ಲಿ ಬಿಸಿಕೊಳ್ಳಿ. ಬಳಿಕ ಇದಕ್ಕೆ ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಿಕೊಂಡು ಅದನ್ನು ಕೂದಲಿಗೆ ಹಚ್ಚಿ. ಬಳಿಕ 30 ರಿಂದ 40 ನಿಮಿಷ ಬಿಟ್ಟು ಕೂದಲನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಈ ರೀತಿ ತಿಂಗಳಿಗೆ ಎರಡು ಬಾರಿ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗಿ ಸೊಂಪಾಗಿ ಬೆಳೆಯುತ್ತದೆ. ನೆತ್ತಿ ತಂಪಾಗುತ್ತದೆ, ಕೂದಲು ಒರಟಾಗುವುದಿಲ್ಲ.
ಅಲೋವೆರಾ ಜೆಲ್ ಬಳಸುವಾಗ ಸ್ವಲ್ಪ ಎಚ್ಚರವಿರಲಿ ಏಕೆಂದರೆ ಕೆಲವರಿಗೆ ಇದರಿಂದ ಅಲರ್ಜಿಯಾಗುತ್ತದೆ ಹಾಗಾಗಿ ಬಳಸುವ ಮೊದಲು, ಪ್ಯಾಚ್ ಟೆಸ್ಟ್ ಮಾಡಿಕೊಳ್ಳಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ