Coconut Fiber: ಬಿಳಿ ಕೂದಲ ಸಮಸ್ಯೆಗೆ ತೆಂಗಿನ ಕಾಯಿಯ ನಾರು ಉತ್ತಮ ಔಷಧಿ; ಹೇಗೆ ಗೊತ್ತಾ?

|

Updated on: Nov 18, 2023 | 3:18 PM

ಇನ್ನು ಮುಂದೆ ತೆಂಗಿನ ಕಾಯಿ ತಂದ ನಂತರ ಅದರ ನಾರನ್ನು ಕಸದ ತೊಟ್ಟಿಗೆ ಎಸೆಯಬೇಡಿ. ಬದಲಾಗಿ ಅವುಗಳನ್ನು ಕೂಡ ಬಳಸಿಕೊಳ್ಳಬಹುದು.ಆದ್ದರಿಂದ ತೆಂಗಿನ ಕಾಯಿಯ ನಾರಿನಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Coconut Fiber: ಬಿಳಿ ಕೂದಲ ಸಮಸ್ಯೆಗೆ ತೆಂಗಿನ ಕಾಯಿಯ ನಾರು ಉತ್ತಮ ಔಷಧಿ; ಹೇಗೆ ಗೊತ್ತಾ?
Coconut Fibre
Follow us on

ತೆಂಗಿನ ಕಾಯಿಯನ್ನು ಶುಭ ಕಾರ್ಯದಿಂದ ಹಿಡಿದು ಪಾಕವಿಧಾನಗಳ ವರೆಗೆ ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಜೊತೆಗೆ ತೆಂಗಿನ ಕಾಯಿಯನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಆದರೆ ತೆಂಗಿನಕಾಯಿಯ ಹೊರತಾಗಿ ತೆಂಗಿನಕಾಯಿನ ನಾರಿನಿಂದಲೂ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಇನ್ನು ಮುಂದೆ ತೆಂಗಿನ ಕಾಯಿ ತಂದ ನಂತರ ಅದರ ನಾರನ್ನು ಕಸದ ತೊಟ್ಟಿಗೆ ಎಸೆಯಬೇಡಿ. ಬದಲಾಗಿ ಅವುಗಳನ್ನು ಕೂಡ ಬಳಸಿಕೊಳ್ಳಬಹುದು.ಆದ್ದರಿಂದ ತೆಂಗಿನ ಕಾಯಿಯ ನಾರಿನಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ತೆಂಗಿನ ಕಾಯಿಯ ನಾರಿನ ಪ್ರಯೋಜನಗಳು:

ಕೂದಲನ್ನು ಕಪ್ಪಾಗಿಸುತ್ತದೆ:

ಮೊದಲು ಬಾಣಲೆಯಲ್ಲಿ ತೆಂಗಿನ ನಾರು ಹಾಕಿ ಕಪ್ಪಾಗುವವರೆಗೆ ಹುರಿಯಿರಿ. ತಣ್ಣಗಾದ ನಂತರ ಪುಡಿ ಮಾಡಿ. ಅದಕ್ಕೆ ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಕೂದಲಿಗೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಿದರೆ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲ.

ಸಂಧಿವಾತ ನಿವಾರಣೆ:

ಸಂಧಿವಾತದಿಂದ ಬಳಲುತ್ತಿರುವವರಿಗೆ ತೆಂಗಿನ ನಾರು ಉತ್ತಮ ಔಷಧಿ ಎಂದು ಹೇಳಬಹುದು. ತೆಂಗಿನ ನಾರಿನಿಂದ ತಯಾರಿಸಿದ ಚಹಾವನ್ನು ಕುಡಿಯಿರಿ. ತೆಂಗಿನ ಸಿಪ್ಪೆಯು ಉತ್ತಮ ಉರಿಯೂತದ ಗುಣಗಳನ್ನು ಹೊಂದಿದೆ. ಇವು ಸಂಧಿವಾತ ನೋವನ್ನು ನಿವಾರಿಸುವಲ್ಲಿ ಸಹಾಯಕವಾಗಿದೆ.

ಇದನ್ನೂ ಓದಿ:  ಚಳಿಗಾಲದಲ್ಲಿ ಕಾಡುವ ಗಂಟಲು ನೋವು, ಕೆಮ್ಮಿನಿಂದ ಮುಕ್ತಿ ಪಡೆಯಲು ಮನೆಯಲ್ಲೇ ಈ ಸೂಪರ್​​​​ ಸೂಪ್​ ತಯಾರಿಸಿ

ಅಡುಗೆ ಪಾತ್ರೆಗಳನ್ನು ಸ್ವಚ್ಛಗೊಳಿಸಬಹುದು:

ಈಗ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಸ್ಕ್ರಬ್‌ಗಳನ್ನು ಬಳಸುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ತೆಂಗಿನ ಕಾಯಿಯ ನಾರಿನಿಂದ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತಿದ್ದರು.ಇದು ಪರಿಸರಕ್ಕೂ ಒಳ್ಳೆಯದು. ಇದಲ್ಲದೆ, ವೆಚ್ಚವೂ ಕಡಿಮೆಯಾಗುತ್ತದೆ. ತೆಂಗಿನ ನಾರು ಮತ್ತು ನಿಂಬೆ ರಸದಿಂದ ಪಾತ್ರೆಗಳನ್ನು ಸ್ವಚ್ಛಗೊಳಿಸಿದರೆ ಯಾವುದೇ ಕೊಳಕು ವಾಸನೆಯಿಲ್ಲದೆ ಪಾತ್ರೆಗಳು ಹೊಳೆಯುತ್ತದೆ.

ಹಲ್ಲುಗಳು ಬಿಳಿಯಾಗುತ್ತವೆ:

ಹಳದಿ ಹಲ್ಲುಗಳ ಸಮಸ್ಯೆಯನ್ನು ಹೊಂದಿರುವವರಿಗೂ ತೆಂಗಿನ ಕಾಯಿಯ ನಾರು ಉತ್ತಮ ಆಯ್ಕೆಯಾಗಿದೆ. ಒಂದು ಫ್ಯಾನ್ ನಲ್ಲಿ ತೆಂಗಿನ ನಾರು ಹುರಿದುಕೊಳ್ಳಿ. ನಂತರ ಚೆನ್ನಾಗಿ ಪುಡಿ ಮಾಡಿ. ಈ ಪುಡಿಯಿಂದ ಹಲ್ಲುಜ್ಜಿದರೆ ಹಲ್ಲು ಮುತ್ತಿನಂತೆ ಬೆಳ್ಳಗಾಗುವುದು ಮಾತ್ರವಲ್ಲದೆ ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ನಾಶವಾಗುತ್ತದೆ. ಇದಲ್ಲದೇ ಈ ಪುಡಿಗೆ ನಿಂಬೆ ರಸದ ಕೂಡ ಸೇರಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:16 pm, Sat, 18 November 23