Health Tips: ತೆಂಗಿನ ಕಾಯಿಯ ಪ್ರಯೋಜನಗಳನ್ನು ತಿಳಿದರೆ ಒಂದು ಚೂರನ್ನೂ ಬಿಸಾಡಲು ಮನಸ್ಸೇ ಬರುವುದಿಲ್ಲ!

Coconut Benefits: ಒಣ ಚರ್ಮ ಮತ್ತು ಕೂದಲು ಉದುರುವುದು, ಕೂದಲ ತುದಿ ಬಿರುಕು ಬಿಡುವಂತಹ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಚರ್ಮದಲ್ಲಿನ ತೇವಾಂಶ ಹೆಚ್ಚಿಸಲು ಸಹಾಯ ಮಾಡುತ್ತದೆ. ಚರ್ಮದ ಸೌಂದರ್ಯವನ್ನು ಸುಧಾರಿಸುತ್ತದೆ.

Health Tips: ತೆಂಗಿನ ಕಾಯಿಯ ಪ್ರಯೋಜನಗಳನ್ನು ತಿಳಿದರೆ ಒಂದು ಚೂರನ್ನೂ ಬಿಸಾಡಲು ಮನಸ್ಸೇ ಬರುವುದಿಲ್ಲ!
ತೆಂಗಿನ ಕಾಯಿ
Follow us
| Updated By: ಆಯೇಷಾ ಬಾನು

Updated on: Jun 21, 2021 | 7:38 AM

ಎಳನೀರು ಅಥವಾ ತೆಂಗಿನ ಕಾಯಿಯ ನೀರು ಕುಡಿದ ನಂತರದಲ್ಲಿ ಒಳಗಿನ ತಿರುಳನ್ನು ಕೆಲವರು ಇಷ್ಟಪಡುವುದಿಲ್ಲ. ದೇವಸ್ಥಾನಗಳಲ್ಲಿ ತೆಂಗಿನ ಕಾಯಿಯನ್ನು ಒಡೆಸುತ್ತೇವೆ. ನಂತರ ಅದರಲ್ಲಿ ಕಾಯಿ ಚೂರನ್ನು ತಿನ್ನಲು ನಿರ್ಲಕ್ಷ್ಯ ತೋರುತ್ತೇವೆ. ಆದರೆ ತೆಂಗಿನ ಕಾಯಿಯ ಪ್ರಯೋಜನ ತಿಳಿದರೆ ಒಂದು ಚೂರನ್ನೂ ಸಹ ಬಿಸಾಡಲು ಮನಸ್ಸೇ ಬರುವುದಿಲ್ಲ.

ತೆಂಗಿನ ಕಾಯಿ ತುರಿಯನ್ನು ಅಡುಗೆಯಲ್ಲಿ ಬಳಸುವುದು ಸಾಮಾನ್ಯ. ತೆಂಗಿನ ಕಾಯಿಯ ಹಸಿ ಚೂರನ್ನು ತಿನ್ನುವುದು ಕೆಲವರಿಗೆ ಇಷ್ಟವಾಗುವುದಿಲ್ಲ. ಆದರೆ, ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜಗಳಿದ್ದಾಗ ಮನೆಯಲ್ಲಿಯೇ ಸಿಗುವ ಆಹಾರ ಪದಾರ್ಥಗಳಿಂದ ಪ್ರಯೋಜನ ಪಡೆದುಕೊಳ್ಳಬೇಕು. ಹಾಗಿದ್ದರೆ ತೆಂಗಿನ ಕಾಯಿಯ ತಿರುಳಿನಿಂದ ಎಷ್ಟೆಲ್ಲಾ ಪ್ರಯೋಜನಗಳಿದೆ ಎಂಬುದರ ಮಾಹಿತಿ ಇಲ್ಲಿದೆ.

*ತೆಂಗಿನಕಾಯಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಸ್​ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಜತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥವಾಗಿದೆ. ಗಂಟಲು ನೋವಿಗೆ ತೆಂಗಿನಕಾಯಿ ಚೂರು ಸೇವಿಸುವುದು ಉತ್ತಮ ಪರಿಹಾರವಾಗಿದೆ.

*ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ತೆಂಗಿನಕಾಯಿ ಸೇವನೆ ಉತ್ತಮವಾಗಿದೆ.

*ತೆಂಗಿನಕಾಯಿಯಲ್ಲಿ ನಾರಿನಾಂಶವಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ತೆಂಗಿನ ಕಾಯಿ ಸೇವನೆಯು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

*ಒಣ ಚರ್ಮ ಮತ್ತು ಕೂದಲು ಉದುರುವುದು, ಕೂದಲ ತುದಿ ಬಿರುಕು ಬಿಡುವಂತಹ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಚರ್ಮದಲ್ಲಿನ ತೇವಾಂಶ ಹೆಚ್ಚಿಸಲು ಸಹಾಯ ಮಾಡುತ್ತದೆ. ಚರ್ಮದ ಸೌಂದರ್ಯವನ್ನು ಸುಧಾರಿಸುತ್ತದೆ.

*ತೆಂಗಿನಕಾಯಿ ಸೇವನೆಯು ದೇಹದಲ್ಲಿನ ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆ ಮಾಡುತ್ತದೆ. ನಮ್ಮ ದೇಹದಲ್ಲಿನ ಅತಿಯಾದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:

Karnataka Lockdown: ನೆಪ ಹೇಳಿದ ತಪ್ಪಿಗೆ ಒಂದು ಗೊನೆ ಬಾಳೆಹಣ್ಣು ತೆಗೆದುಕೊಂಡು ಹೋದ ಚಿಕ್ಕಮಗಳೂರು ವ್ಯಕ್ತಿ

Health Tips: ಕೊರೊನಾ ಸೋಂಕಿನ ಮಧ್ಯೆ ಮತ್ತೆ ನೆನಪಾಯಿತು ಈ ಗಿಡ! ‘ನೆಲನೆಲ್ಲಿ’ ಸಸ್ಯದಲ್ಲಿ ಅಡಗಿದೆ ಔಷಧೀಯ ಗುಣ