Karnataka Lockdown: ನೆಪ ಹೇಳಿದ ತಪ್ಪಿಗೆ ಒಂದು ಗೊನೆ ಬಾಳೆಹಣ್ಣು ತೆಗೆದುಕೊಂಡು ಹೋದ ಚಿಕ್ಕಮಗಳೂರು ವ್ಯಕ್ತಿ

ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ವಿಧಿಸಿದ ಲಾಕ್​ಡೌನ್​ ನಮಗೆ ಅನ್ವಯಿಸಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಹೀಗೆ ಬೇಕಾಬಿಟ್ಟಿಯಾಗಿ ಓಡಾಡಿದ ವ್ಯಕ್ತಿಯೊಬ್ಬರನ್ನು ಪೊಲೀಸ್ ತಡೆಹಿಡಿದು ಪ್ರಶ್ನಿಸಿದ್ದಾರೆ.

Karnataka Lockdown: ನೆಪ ಹೇಳಿದ ತಪ್ಪಿಗೆ ಒಂದು ಗೊನೆ ಬಾಳೆಹಣ್ಣು ತೆಗೆದುಕೊಂಡು ಹೋದ ಚಿಕ್ಕಮಗಳೂರು ವ್ಯಕ್ತಿ
ಬಾಳೆಹಣ್ಣನ್ನು ಹೊತ್ತೊಯ್ಯುತ್ತಿರುವ ವ್ಯಕ್ತಿ
Follow us
sandhya thejappa
|

Updated on: May 10, 2021 | 8:44 AM

ಚಿಕ್ಕಮಗಳೂರು: ರಾಜ್ಯದಲ್ಲಿ ಕೊರೊನಾ ಗಣನೀಯವಾಗಿ ಏರಿಯಾಗುತ್ತಿರುವ ಕಾರಣ ರಾಜ್ಯ ಸರ್ಕಾರ ಇಂದಿನಿಂದ (ಮೇ 10) ಲಾಕ್​ಡೌನ್​ ಜಾರಿಗೊಳಿಸಿದೆ. ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕೆಂದು ಸರ್ಕಾರ ತಿಳಿಸಿದೆ. ಆದರೆ ಜನರಿಗೆ ಮಾತ್ರ ಕೊರೊನಾ ಬಗ್ಗೆ ಇನ್ನೂ ನಿರ್ಲಕ್ಷ್ಯ ಮನೋಭಾವವನ್ನೆ ಹೊಂದಿದ್ದಾರೆ. ಬೇಕಾ ಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ವಿಧಿಸಿದ ಲಾಕ್​ಡೌನ್​ ನಮಗೆ ಅನ್ವಯಿಸಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಹೀಗೆ ಬೇಕಾಬಿಟ್ಟಿಯಾಗಿ ಓಡಾಡಿದ ವ್ಯಕ್ತಿಯೊಬ್ಬರನ್ನು ಪೊಲೀಸ್ ತಡೆಹಿಡಿದು ಪ್ರಶ್ನಿಸಿದ್ದಾರೆ.

ಕಾಫಿನಾಡು ಚಿಕ್ಕಮಗಳೂರಿನಲ್ಲಿ ವ್ಯಕ್ತಿಯೊಬ್ಬರು ಬೈಕ್ನಲ್ಲಿ ಓಡಾಡುತ್ತಿದ್ದರು. ಈ ವೇಳೆ ಪೊಲೀಸರು ತಡೆದು ಪ್ರಶ್ನಿಸಿದಾಗ ವ್ಯಕ್ತಿ ಬಾಳೆಹಣ್ಣು ತರಬೇಕೆಂದು ನೆಪ ಹೇಳಿ ಪೇಚಿಗೆ ಸಿಲುಕಿದ್ದರು. ಒಂದೆರಡು ಬಾಳೆಹಣ್ಣು ತರಲು ಬೈಕಲ್ಲಿ ಬಂದಿದ್ದೀರಾ ಎಂದು ಪೊಲೀಸರು ಕೇಳಿದಾಗ ,ಇಲ್ಲ ಸರ್.. 1 ಕೆಜಿ ಬಾಳೆಹಣ್ಣು ಬೇಕಿತ್ತು ಎಂದ ವ್ಯಕ್ತಿ ಹೇಳಿದ್ದಾರೆ. 1 ಕೆಜಿ ಬಾಳೆಹಣ್ಣಿಗೆ ಬೈಕ್ ಏನಕ್ಕೆ ತಂದಿದ್ದೀರಿ ಎಂದು ಪೊಲೀಸರು ಗದರಿದರು. ಆ ಬಳಿಕ ಒಂದು ಗೊನೆ ಬಾಳೆಹಣ್ಣು ಬೇಕಿತ್ತು ಎಂದು ವ್ಯಕ್ತಿ ನೆಪ ಹೇಳಿದ್ದಾರೆ.

ನೆಂಟರ ಮನೆಗೆ ಹೋಗುವುದಕ್ಕೆ ಬಂದಿದ್ದ ವ್ಯಕ್ತಿ ಲಾಕ್ ಬೆಂಗಳೂರು: ರಾಜ್ಯದಲ್ಲಿ ಬಿಗಿ ಲಾಕ್​ಡೌನ್​ ಇದ್ದರೂ ವ್ಯಕ್ತಿ ತನ್ನ ಇಬ್ಬರು ಮಕ್ಕಳೊಂದಿಗೆ ನೆಂಟರ ಮನೆಗೆ ಹೋಗುವುದಕ್ಕೆ ರಾಮನಗರದಿಂದ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ವ್ಯಕ್ತಿಯನ್ನು ನೈಸ್ ಜಂಕ್ಷನ್ ಬಳಿ ಪೊಲೀಸರು ತಡೆದಿದ್ದಾರೆ. ನೀವೂ ಹೀಗೆ ಮನೆಯಿಂದ ಬೇಕಾಬಿಟ್ಟಿ ಬಂದರೆ ಅತ್ತ ಇಲ್ಲ ಇತ್ತ ಇಲ್ಲ ಆಗುತ್ತೀರಾ ಹುಷಾರ್ ಎಂದು ಪೊಲೀಸರು ಎಚ್ಚರಿಕೆ ನೀಡಿ ವ್ಯಕ್ತಿಯನ್ನು ರಾಮನಗರಕ್ಕೆ ವಾಪಾಸ್ ಕಳುಹಿಸಿದ್ದಾರೆ.

ಇದನ್ನೂ ಓದಿ

ಹೋಂ ಐಸೋಲೇಶನ್​ನಲ್ಲಿ ಇರುವವರು ಮತ್ತು ಅವರ ಮನೆಯವರು ಹೇಗಿರಬೇಕು? ಇಲ್ಲಿದೆ ಮಾರ್ಗಸೂಚಿ

ಇಂದಿನಿಂದ 14 ದಿನ ವಾಹನಗಳು ರಸ್ತೆಗಿಳಿಯುವಂತಿಲ್ಲ; ಲಸಿಕೆ ತೆಗೆದುಕೊಳ್ಳಲು ಹೋಗುವವರು ಮೆಸೇಜ್​ ತೋರಿಸಿದರೆ ಅನುಮತಿ

(Chikmagalur person is walking between lockdown and Police prevented man from walking)