Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೀಮಾತೀರದಲ್ಲಿ ನೆತ್ತರು; ತಲೆ ಜಜ್ಜಿ ಪೌರ ಕಾರ್ಮಿಕನ ಬರ್ಬರ ಕೊಲೆ

ವಿಜಯಪುರ ಜಿಲ್ಲೆ ಆಲಮೇಲ ಬಸ್ ನಿಲ್ದಾಣದ ಬಳಿ ಕಲ್ಲಿನಿಂದ ತಲೆಗೆ ಜಜ್ಜಿ ಪೌರ ಕಾರ್ಮಿಕನ ಬರ್ಬರ ಕೊಲೆ ಮಾಡಲಾಗಿದೆ. ಪೌರ ಕಾರ್ಮಿಕ ರಮೇಶ್ ಬೇವಿನಮರದ(38) ಕೊಲೆಯಾದ ವ್ಯಕ್ತಿ.

ಭೀಮಾತೀರದಲ್ಲಿ ನೆತ್ತರು; ತಲೆ ಜಜ್ಜಿ ಪೌರ ಕಾರ್ಮಿಕನ ಬರ್ಬರ ಕೊಲೆ
ಮೃತನ ಕುಟುಂಬಸ್ಥರ ಆಕ್ರಂದನ
Follow us
ಆಯೇಷಾ ಬಾನು
|

Updated on:May 10, 2021 | 8:10 AM

ವಿಜಯಪುರ: ಕೊರೊನಾ ಲಾಕ್ಡೌನ್ ಮಧ್ಯೆ ಭೀಮಾತೀರದಲ್ಲಿ ನೆತ್ತರು ಹರಿದಿದೆ. ವಿಜಯಪುರ ಜಿಲ್ಲೆ ಆಲಮೇಲ ಬಸ್ ನಿಲ್ದಾಣದ ಬಳಿ ಕಲ್ಲಿನಿಂದ ತಲೆಗೆ ಜಜ್ಜಿ ಪೌರ ಕಾರ್ಮಿಕನ ಬರ್ಬರ ಕೊಲೆ ಮಾಡಲಾಗಿದೆ. ಪೌರ ಕಾರ್ಮಿಕ ರಮೇಶ್ ಬೇವಿನಮರದ(38) ಕೊಲೆಯಾದ ವ್ಯಕ್ತಿ.

ಅಪರಿಚಿತರಿಂದ ಈ ಕೃತ್ಯ ನಡೆದಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಿರೋ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲಾ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಭದ್ರಾ ಕಾಲುವೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ ಇನ್ನು ಮತ್ತೊಂದು ಕಡೆ ಭದ್ರಾ ಕಾಲುವೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ದಾವಣಗೆರೆ ಹೊರವಲಯದ ನಾಗಮ್ಮ ಕೇಶವಮೂರ್ತಿ ನಗರದ ಬಳಿಯ ಕಾಲುವೆಯಲ್ಲಿ ಕೊಳೆತಸ್ಥಿತಿಯಲ್ಲಿ ಶವ ಸಿಕ್ಕಿದೆ.

ಸುಮಾರು 45 ರಿಂದ 50 ವರ್ಷದೊಳಗಿನ ವಯಸ್ಸಿನ ಪರುಷನ ಶವ ಎಂದು ಶಂಕಿಸಲಾಗಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದ್ರೆ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಶವ ಮತ್ತೆ ಮುಂದೇ ಹರಿದುಕೊಂಡು ಹೋಗಿದೆ.

ಇದನ್ನೂ ಓದಿ; ಭೀಮಾತೀರದ ಕುಖ್ಯಾತ ಬಾಗಪ್ಪ ಹರಿಜನ್​ನನ್ನು ಮತ್ತೆ ‌ಕಂಬಿ ಹಿಂದೆ ಹಾಕಿದ ಖಾಕಿ ಪಡೆ

ಕೊರೊನಾ ಭೀತಿಯ ನಡುವೆಯೂ ಬರ್ತ್​ ಡೇ ಆಚರಿಸಿದ ಭೀಮಾತೀರದ Don!

Published On - 7:52 am, Mon, 10 May 21