Anti-Aging : ಸಣ್ಣ ವಯಸ್ಸಿನಲ್ಲಿ ನಿಮ್ಮ ಸೌಂದರ್ಯ ಮಾಸುತ್ತಿದೆಯೇ? ಹಾಗಿದ್ರೆ ಅಭ್ಯಾಸಗಳಿಂದ ದೂರವಿರಿ

| Updated By: ಅಕ್ಷತಾ ವರ್ಕಾಡಿ

Updated on: Apr 12, 2024 | 6:33 PM

ವಯಸ್ಸನ್ನು ಮರೆಮಾಚಲು ಸಾಧ್ಯವಿಲ್ಲ. ವರ್ಷಗಳು ಉರುಳುತ್ತ ಹೋಗುತ್ತಿದ್ದಂತೆ ವಯಸ್ಸು ಆಗುತ್ತಾ ಹೋಗುತ್ತದೆ ಅದಲ್ಲದೇ, ನಮ್ಮ ದೈನಂದಿನ ಜೀವನದಲ್ಲಿ ನಾವು ಮಾಡುವ ಸಣ್ಣ ತಪ್ಪುಗಳಿಂದಾಗಿ, ವಯಸ್ಸು 30 ದಾಟಿಲ್ಲವಾದರೂ, ವಯಸ್ಸಾದವರಂತೆ ಕಾಣುತ್ತೇವೆ. ಸಣ್ಣ ವಯಸ್ಸಿನಲ್ಲೇ ಸೌಂದರ್ಯವು ಮಾಸುತ್ತದೆ. ಅತಿ ಸಣ್ಣ ವಯಸ್ಸಿನಲ್ಲಿ ವಯಸ್ಸಾದಂತೆ ಕಾಣಲು ಈ ಕೆಲವು ಅಭ್ಯಾಸಗಳು ಕಾರಣವಾಗಿರಬಹುದು.

Anti-Aging : ಸಣ್ಣ ವಯಸ್ಸಿನಲ್ಲಿ  ನಿಮ್ಮ ಸೌಂದರ್ಯ ಮಾಸುತ್ತಿದೆಯೇ? ಹಾಗಿದ್ರೆ ಅಭ್ಯಾಸಗಳಿಂದ ದೂರವಿರಿ
Anti-Aging
Follow us on

ಯಾರಿಗೆ ತಾನೇ ತಾನು ಸುಂದರವಾಗಿ ಕಾಣಬೇಕು ಎಂಬುದಿರುವುದಿಲ್ಲ. ಮಹಿಳೆಯರಂತೂ ವಯಸ್ಸು ಏರಿದರೂ ಚಿರಯುವತಿಯಂತೆ ಇರಬೇಕು ಎಂದುಕೊಳ್ಳುತ್ತಾರೆ. ಆದರೆ ಕೆಲವರಿಗೆ ಅದು ಸಾಧ್ಯವಾಗುವುದೇ ಇಲ್ಲ. ಸಣ್ಣ ವಯಸ್ಸಿನಲ್ಲಿಯೇ ವಯಸ್ಸಾಗುವ ಚಿಹ್ನೆಗಳು ಕಾಣಿಸಿಕೊಂಡು ಮುಜುಗರವನ್ನುಂಟು ಮಾಡುತ್ತದೆ. ಹೀಗಾದಾಗ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಂಡರೆ ಉತ್ತಮ.

ಸಣ್ಣ ವಯಸ್ಸಿನಲ್ಲಿ ವಯಸ್ಸಾದಂತೆ ಕಾಣಲು ಈ ಅಭ್ಯಾಸಗಳೇ ಕಾರಣ:

  1. ಸನ್‌ಸ್ಕ್ರೀನ್ ಬಳಸದೇ ಬಿಸಿಲಿನಲ್ಲಿ ಹೋಗುವುದು. ಇದರಿಂದಾಗಿ ಯುವಿ ಕಿರಣಗಳು ಚರ್ಮದ ವೇಗವರ್ಧಿತ ವಯಸ್ಸನ್ನು ಉಂಟುಮಾಡುತ್ತವೆ. ಪಿಗ್ಮೆಂಟೇಶನ್ ಮತ್ತು ಸುಕ್ಕುಗಳ ಸಮಸ್ಯೆಗಳಿಗೂ ಕಾರಣವಾಗುವುದಿದೆ.
  2. ಎಲ್ಲರೂ ದೈನಂದಿನ ಜೀವನದಲ್ಲಿ ಒತ್ತಡವನ್ನು ಅನುಭವಿಸುತ್ತಾರೆ. ಒತ್ತಡವು ಹೆಚ್ಚಾದಾಗ ಹಾರ್ಮೋನ್ ಅಸಮತೋಲನ ಉಂಟಾಗಿ, ಇದು ಚರ್ಮದ ಮೇಲೂ ಪರಿಣಾಮ ಬೀರಿ, ನಿರ್ಜೀವವಾಗಿ ಕಾಣುವಂತೆ ಮಾಡುತ್ತದೆ. ಚರ್ಮದ ಕಾಂತಿಯು ಕುಂದುತ್ತದೆ.
  3. ಒಣ ಚರ್ಮವು ವಯಸ್ಸಾಗಿರುವಂತೆ ಕಾಣಿಸುತ್ತದೆ. ದೇಹದಲ್ಲಿರುವ ಚರ್ಮವು ತೇವಾಂಶವನ್ನು ಕಳೆದುಕೊಳ್ಳುವುದರಿಂದ ಚರ್ಮ ಸುಕ್ಕುಗಟ್ಟುತ್ತದೆ. ಹೆಚ್ಚು ನೀರು ಕುಡಿಯುವ ಮೂಲಕ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
  4. ಸರಿಯಾಗಿ ನಿದ್ದೆ ಮಾಡದೇ ಇರುವುದು ಇಲ್ಲವಾದರೆ ರಾತ್ರಿ ತಡವಾಗಿ ಮಲಗುವುದು. ಈ ಅಭ್ಯಾಸವು ಚರ್ಮದ ಮೇಲೆ ಒತ್ತಡವನ್ನು ಉಂಟುಮಾಡಿ, ಸುಕ್ಕುಗಳು ಹಾಗೂ ಕಣ್ಣಿನ ಸುತ್ತ ಕಪ್ಪು ವರ್ತುಲಗಳಿಗೂ ಕಾರಣವಾಗುತ್ತದೆ. ಹೀಗಾಗಿ ನಿದ್ದೆಯನ್ನು ಸರಿಯಾಗಿ ಮಾಡುವುದು ಒಳಿತು.
  5. ಮದ್ಯಪಾನ ಮತ್ತು ಧೂಮಪಾನದಂತಹ ಕೆಟ್ಟ ಅಭ್ಯಾಸಗಳು ಚರ್ಮಕ್ಕೆ ಗಂಭೀರ ಹಾನಿಯನ್ನುಂಟುಟು ಮಾಡುವ ಸಾಧ್ಯತೆಯೇ ಹೆಚ್ಚು.
  6. ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳನ್ನು ಅತಿಯಾದ ಬಳಕೆ ಮಾಡುವುದರಿಂದಲೂ ಚರ್ಮದ ಆರೋಗ್ಯವು ಹಾಳಾಗುತ್ತದೆ. ಕೆಲವರಿಗೆ ಅಲರ್ಜಿ ಹಾಗೂ ತುರಿಕೆಯಂತಹ ಸಮಸ್ಯೆಗಳುಗಳು ಉಂಟಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ