ಮನೆಯಲ್ಲಿ ಇರುವೆಗಳ ಸಮಸ್ಯೆ ಕಾಡುತ್ತಿದೆಯೇ? ರಾಸಾಯನಿಕಗಳ ಬಳಕೆ ಮಾಡದೆ ಸುಲಭವಾಗಿ ಅವುಗಳನ್ನು ಓಡಿಸಿ

ಬಿಳಿ ವಿನೆಗರ್ ಅನ್ನು ಇರುವೆಗಳಿರುವಲ್ಲಿ ಸಿಂಪಡಿಸಬಹುದು ಮತ್ತು ಉತ್ತಮ ಫಲಿತಾಂಶವನ್ನು ಕಾಣಬಹುದು.

ಮನೆಯಲ್ಲಿ ಇರುವೆಗಳ ಸಮಸ್ಯೆ ಕಾಡುತ್ತಿದೆಯೇ? ರಾಸಾಯನಿಕಗಳ ಬಳಕೆ ಮಾಡದೆ ಸುಲಭವಾಗಿ ಅವುಗಳನ್ನು ಓಡಿಸಿ
ಮನೆಯಲ್ಲಿ ಇರುವೆಗಳ ಸಮಸ್ಯೆ ಕಾಡುತ್ತಿದೆಯೇ?
Follow us
ಸಾಧು ಶ್ರೀನಾಥ್​
|

Updated on:May 15, 2023 | 10:49 AM

ಇರುವೆಗಳಿಗೆ ಪರಿಹಾರಗಳು: ಅನೇಕ ಮನೆಗಳಲ್ಲಿ, ಅಡುಗೆಮನೆ ಅಥವಾ ಆಹಾರವನ್ನು ಸಂಗ್ರಹಿಸುವ ಪ್ರದೇಶವು ಸೋಂಕಿತ ಪ್ರದೇಶವಾಗಿರುತ್ತದೆ. ಈ ಇರುವೆಗಳ ಹಿಡಿತದಿಂದ ಪಾರಾಗಲು (Ants Problem) ಹಲವು ರೀತಿಯ ಸ್ಪ್ರೇಗಳನ್ನು ಬಳಸಲಾಗುತ್ತದೆ. ಆದರೆ ಯಾವುದೇ ಫಲಿತಾಂಶವಿಲ್ಲದೆ ಗೃಹಿಣಿಯರು ಹತಾಶರಾಗುತ್ತಾರೆ. ಅಂತಹವರಿಗಾಗಿ ಇರುವೆಗಳ ಹಿಡಿತದಿಂದ ಪಾರಾಗಲು ಬೆಸ್ಟ್ ಟಿಪ್ಸ್ ತಂದಿದ್ದೇವೆ. ಈ ಟಿಪ್ಸ್ ಪ್ರಕಾರ ಯಾವುದೇ ಕೆಮಿಕಲ್ (chemicals) ಬಳಸಬೇಕಿಲ್ಲ.. ಅಡುಗೆ ಮನೆಯ ಸಾಮಾಗ್ರಿಗಳನ್ನು ಸಮಂಜಸವಾಗಿ ಬಳಸಿದರೆ ಸಾಕು (kicthen hacks).

ಕರಿಮೆಣಸು ಇರುವೆಗಳನ್ನು ಹಿಮ್ಮೆಟ್ಟಿಸಲು ಉತ್ತಮವಾಗಿ ಸಹಾಯ ಮಾಡುತ್ತದೆ. ಹೌದು, ಕಾಳುಮೆಣಸಿನ ಕಾಟಕ್ಕೆ ಇರುವೆಗಳು ಓಡಿಹೋಗುವುದು ಖಚಿತ. ಅದಕ್ಕಾಗಿ ಅಡುಗೆ ಮನೆಯಲ್ಲಿ ಇರುವೆ ಸ್ಪ್ರೇ ಬದಲು ಅಲ್ಲೊಂದು ಇಲ್ಲೊಂದು ಕಾಳುಮೆಣಸನ್ನು ಹಾಕಿದರೆ ಪರವಾಗಿಲ್ಲ.

ಇರುವೆಗಳನ್ನು ತೊಡೆದುಹಾಕಲು, ಒಂದು ಬಾಟಲಿಯಲ್ಲಿ ಎರಡು ಕಪ್ ನೀರಿನಲ್ಲಿ ಸ್ವಲ್ಪ ಪುದೀನಾ ಎಣ್ಣೆಯನ್ನು ಸೇರಿಸಿ ಮತ್ತು ಇರುವೆ ಇರುವಲ್ಲಿ ಸಿಂಪಡಿಸಿ. ಸಿಂಪಡಿಸುವಾಗ ಸಾಕುಪ್ರಾಣಿಗಳನ್ನು ಅವುಗಳಿಂದ ದೂರವಿರಿಸಲು ಮರೆಯಬೇಡಿ.

ಹಾಗೆಯೇ ಎರಡು ಲೋಟ ನೀರಿನಲ್ಲಿ ಟ್ರೀ ಆಯಿಲ್ ಸೇರಿಸಿ ಚಿಮುಕಿಸಿ, ಈ ನೀರಿನಲ್ಲಿ ಹತ್ತಿ ಉಂಡೆಗಳನ್ನು ಅದ್ದಿ ಅಡುಗೆ ಮನೆಯಲ್ಲಿಟ್ಟರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

ದಾಲ್ಚಿನ್ನಿ ಇರುವೆಗಳನ್ನು ತೊಡೆದುಹಾಕಲು ಸಹ ಸಹಾಯ ಮಾಡುತ್ತದೆ. ಹತ್ತಿಯ ಉಂಡೆಗಳನ್ನು ದಾಲ್ಚಿನ್ನಿ ಎಣ್ಣೆಯಲ್ಲಿ ಅದ್ದಿ ಇರುವೆಗಳು ಓಡಾಡುವ ಸ್ಥಳಗಳಲ್ಲಿ ಇಟ್ಟರೆ ಅವು ಬರದಂತೆ ತಡೆಯುತ್ತವೆ.

ಬಿಳಿ ವಿನೆಗರ್ ಅನ್ನು ಇರುವೆಗಳಿರುವಲ್ಲಿ ಸಿಂಪಡಿಸಬಹುದು ಮತ್ತು ಉತ್ತಮ ಫಲಿತಾಂಶವನ್ನು ಕಾಣಬಹುದು.

ಹಾಗೆಯೇ ಎರಡು ಲೋಟ ನೀರಿಗೆ ಬೇವಿನ ಎಣ್ಣೆ ಹಾಕಿ ಬಾಟಲಿಯಲ್ಲಿ ಸ್ಪ್ರೇ ಮಾಡಿದರೆ ಇರುವೆಗಳು ನಿಮ್ಮ ಬರುವುದಿಲ್ಲ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:48 am, Mon, 15 May 23

‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್