APJ Abdul Kalam Birth Anniversary: ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮದಿನ; ಕುತೂಹಲಕಾರಿ ಸಂಗತಿಗಳು ಇಲ್ಲಿವೆ
ಭಾರತದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನದಂದು ಪ್ರತಿ ವರ್ಷ ಅಕ್ಟೋಬರ್ 15 ರಂದು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಣದ ಕಡೆಗೆ ಅವರ ಪ್ರಯತ್ನಗಳನ್ನು ಗುರುತಿಸಲು ಈ ದಿನವನ್ನು ಗುರುತಿಸಲಾಗಿದೆ.
ಪ್ರಸಿದ್ಧ ಏರೋಸ್ಪೇಸ್ ವಿಜ್ಞಾನಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ (Dr. A.P.J Abdul Kalam ) ಅವರ ಜನ್ಮದಿನ ಇಂದು. ಈ ದಿನದಂದು ಕಲಾಂ ಅವರ ನೆನಪಿಗಾಗಿ ಪ್ರತಿ ವರ್ಷ ಅಕ್ಟೋಬರ್ 15 ರಂದು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ನಿಮಗೆ ತಿಳಿದಂತೆ ಕಲಾಂ ಅವರಿಗೆ ಮಕ್ಕಳೆಂದರೆ ಪ್ರೀತಿ. ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಹೆಚ್ಚು ಒಲವನ್ನು ಹೊಂದಿದ್ದರು. ಇದೇ ಕಾರಣಕ್ಕೆ ಮಕ್ಕಳು ಕಲಾಂರನ್ನು ಆರಾಧಿಸುತ್ತಾರೆ. ವಿದ್ಯಾರ್ಥಿಗಳು ಮತ್ತು ಶಿಕ್ಷಣದ ಕಡೆಗೆ ಅವರ ಪ್ರಯತ್ನಗಳನ್ನು ಗುರುತಿಸಲು ವಿಶ್ವ ವಿದ್ಯಾರ್ಥಿಗಳ ದಿನವನ್ನು ಗುರುತಿಸಲಾಗಿದೆ. ಕಲಾಂ ಅವರು ರಾಜಕಾರಣಿ ಮತ್ತು ಬಾಹ್ಯಾಕಾಶ ವಿಜ್ಞಾನಿ ಮಾತ್ರವಲ್ಲದೆ ಶಿಕ್ಷಕರೂ ಆಗಿದ್ದರು. ಭಾರತಕ್ಕೆ ಅಪಾರ ಕೊಡುಗೆ ನೀಡಿದ ಈ ಮಹಾನ್ ವ್ಯಕ್ತಿಯ ಕೆಲವೊಂದು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
- ಎಜೆಪಿ ಅಬ್ದುಲ್ ಕಲಾಂ ಅವರು 1931ರ ಅಕ್ಟೋಬರ್ 15ರಂದು ಜನಿಸಿದರು. ಅವರು 2002 ರಿಂದ 2007 ರವರೆಗೆ ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು.
- ಅಬ್ದುಲ್ ಕಲಾಂ ಅವರು 2002 ರಿಂದ 2007 ರವರೆಗೆ ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಭೌತಶಾಸ್ತ್ರ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ಅಧ್ಯಯನ ಮಾಡಿದರು.
- ಅವರು ಭಾರತದ ಮೊದಲ ಬ್ಯಾಚುಲರ್ (ಮದುವೆಯಾಗದ) ರಾಷ್ಟ್ರಪತಿ ಆಗಿದ್ದಾರೆ. ಅಬ್ದುಲ್ ಕಲಾಂ ಅವರು ಧರ್ಮದಿಂದ ಮುಸಲ್ಮಾನನಾಗಿದ್ದರೂ ಶುದ್ಧ ಸಸ್ಯಾಹಾರಿಯಾಗಿದ್ದರು.
- ಅಬ್ದುಲ್ ಕಲಾಂ ಅವರಿಗೆ 48 ಡಾಕ್ಟರೇಟ್‌ಗಳಿದ್ದವು ಎಂದರೆ ಆಶ್ಚರ್ಯವಾಗುತ್ತದೆ. ಅವರು ಭಾರತ ಮತ್ತು ವಿದೇಶಗಳ 48 ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದಿದ್ದರು.
- ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ಅಭಿವೃದ್ಧಿ ಮತ್ತು ಕಾರ್ಯಾಚರಣೆಯ ಜವಾಬ್ದಾರಿಯನ್ನು ಹೊಂದಿದ್ದಕ್ಕೆ ಜನರು ಅವರನ್ನು ಭಾರತದ ಮಿಸೈಲ್ ಮ್ಯಾನ್ (ಕ್ಷಿಪಣಿ ಮನುಷ್ಯ) ಎಂದು ಕರೆಯುತ್ತಾರೆ. ಅಧಿಕಾರವು ಗೌರವವನ್ನು ನೀಡುತ್ತದೆ ಎಂದು ಅವರು ಯಾವಾಗಲೂ ಹೇಳುತ್ತಿದ್ದರು ಮತ್ತು ನಾವು ಶಕ್ತಿಯುತವಾಗಿದ್ದರೆ ಮಾತ್ರ ಇತರ ರಾಷ್ಟ್ರಗಳು ಭಾರತವನ್ನು ಗೌರವಿಸುತ್ತವೆ ಎಂದು ನಂಬಿದ್ದರು.
- ಕಲಾಂ ಅವರು ಭಾರತದ 11ನೇ ರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದರು. ಭಾರತದ ಕ್ಷಿಪಣಿ ಅಭಿವೃದ್ಧಿಯ ಹಿಂದಿನ ಪ್ರೇರಕ ಶಕ್ತಿಯಾಗಿರುವುದರಿಂದ ಡಾ ಕಲಾಂ ಅವರು ತಮ್ಮ ನಮ್ರತೆ ಮತ್ತು ಉನ್ನತ ಚಿಂತನೆಗಾಗಿ “ಜನರ ರಾಷ್ಟ್ರಪತಿ” ಎಂದು ಕರೆಯಲ್ಪಟ್ಟರು.
- 1981 ರಲ್ಲಿ ಪದ್ಮಭೂಷಣ, 1990ರಲ್ಲಿ ಪದ್ಮ ವಿಭೂಷಣ ಮುಂತಾದ ಪ್ರಶಸ್ತಿಗಳನ್ನು ಹೊಂದಿದ್ದರು ಮತ್ತು 1997ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದರು.
- ಇಬ್ಬರು ನಾಯಕರು ಭಾರತೀಯ ಮಕ್ಕಳಿಗೆ ಅಚ್ಚುಮೆಚ್ಚಿನವರು ಎಂದು ಹೇಳಲಾಗುತ್ತದೆ. ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ನಂತರ ಕಲಾಂ ಅವರು ಮಕ್ಕಳ ಸಮುದಾಯದಲ್ಲಿ ಪ್ರಸಿದ್ಧರಾಗಿದ್ದರು. ಮಕ್ಕಳು ಎಪಿಜೆ ಅಬ್ದುಲ್ ಕಲಾಂ ಅವರನ್ನು ಆರಾಧಿಸುತ್ತಿದ್ದರು ಮತ್ತು ಅವರ ನಡುವೆ ತಮ್ಮ ಸಮಯವನ್ನು ಕಳೆಯಲು ಅವರು ಇಷ್ಟಪಟ್ಟರು. ಉತ್ತಮ ಭಾರತವನ್ನು ನಿರ್ಮಿಸಲು ಯುವಕರನ್ನು ಬೆಳೆಸುವ ಕಲ್ಪನೆಯನ್ನು ಕಲಾಂ ನೀಡಿದರು.
- ಅಬ್ದುಲ್ ಕಲಾಂ ಅವರ ಆತ್ಮಚರಿತ್ರೆಯನ್ನು 13 ಭಾಷೆಗಳಿಗೆ ಅನುವಾದಿಸಲಾಗಿದೆ. ಇದನ್ನು ಮೊದಲು ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಯಿತು. ಆದರೆ ಪುಸ್ತಕದ ಯಶಸ್ಸು ಮತ್ತು ಅವರ ಜೀವನದ ಬಗ್ಗೆ ತಿಳಿದುಕೊಳ್ಳಲು ಜನರ ಬೇಡಿಕೆಯಾದ ಹಿನ್ನೆಲೆ ನಂತರ ಪುಸ್ತಕವನ್ನು ಫ್ರೆಂಚ್ ಮತ್ತು ಚೈನೀಸ್ ಸೇರಿದಂತೆ 13 ಭಾಷೆಗಳಿಗೆ ಅನುವಾದಿಸಲಾಯಿತು. ಅವರ ಜೀವನದ ಮೇಲೆ 6 ಜೀವನಚರಿತ್ರೆಗಳಿವೆ.
- ಡಾ. ಕಲಾಂ ಅವರು 2015ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಶಿಲ್ಲಾಂಗ್‌ನಲ್ಲಿ ಉಪನ್ಯಾಸ ನೀಡುತ್ತಿದ್ದಾಗ ನಿಧನರಾದರು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದರು.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:11 am, Sat, 15 October 22