ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಬೇಕು ಅಥವಾ ಬೇಡ ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣದ ಮೂಲಕ ಟಿವಿ9 ಕನ್ನಡ ಡಿಜಿಟಲ್ ಜನರ ಮುಂದೆ ಇಟ್ಟಾಗ, ಸಾವಿರಾರೂ ಜನ ಈ ಪ್ರಶ್ನೆಗೆ ಕಮೆಂಟ್ ಮಾಡಿದ್ದಾರೆ. ಹಿಂದೂ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಎಂಬುದು ಹೆಚ್ಚು ಹೆಚ್ಚಾಗಿ ಸದ್ದು ಮಾಡುತ್ತಿದೆ. ಹಲವಾರು ಹಿಂದೂ ಪರ ಸಂಘಟನೆಗಳು ಈಗಾಗಲೇ ಎಲ್ಲ ದೇವಾಲಯಗಳಲ್ಲಿ ವಸ್ತ್ರ ಸಂಹಿತೆಯನ್ನು ಜಾರಿ ಮಾಡಬೇಕು ಎಂದಿದೆ. ಈ ಕುರಿತು ಅನೇಕ ದೇವಾಲಯಗಳ ಕಮಿಟಿಗಳು ಈ ಕಾನೂನನ್ನು ಜಾರಿ ಮಾಡಿದೆ. ದೇವಾಲಯಗಳಲ್ಲಿ ಬೇಕಾಬಿಟ್ಟು ಬರುತ್ತಿರುವುದಕ್ಕೆ ಮತ್ತು ದೇವಾಲಯದ ಭಕ್ತಿಯ ವಾತವರಣವನ್ನು ಹಿಂದಿನ ರೀತಿಯಲ್ಲಿ ಉಳಿಯುಂತೆ ಮಾಡಲು ಸಂಘಟನೆಗಳು ಮತ್ತು ದೇವಾಲಯಗಳ ಆಡಳಿತ ಮಂಡಳಿಗಳು ಈ ಕ್ರಮವನ್ನು ರಾಜ್ಯದ ದೇವಾಲಯಗಳಲ್ಲಿ ತಂದಿದೆ. ಹಾಗಾಗಿ ಈ ಬಗ್ಗೆ ಸರ್ಕಾರವು ಯೋಚನೆಯನ್ನು ಮಾಡಬೇಕು ಎಂಬ ಒತ್ತಾಯವು ಇದೆ. ಈ ಬಗ್ಗೆ ಸರ್ಕಾರಕ್ಕೆ ರಾಜ್ಯದ ಹಿಂದೂ ಸಂಘಟನೆಗಳನ್ನು ಆಗ್ರಹಿಸಿದೆ.
ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಬೇಕು ಅಥವಾ ಬೇಡ ಎಂಬ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಏನು ಮತ್ತು ಈ ಬಗ್ಗೆ ಸಾರ್ವಜನಿಕರು ಏನು ಹೇಳುಬಹುದು ಎಂಬ ಪ್ರಶ್ನೆಯನ್ನು ಇಟ್ಟುಕೊಂಡು? ಟಿವಿ9 ಕನ್ನಡ ಡಿಜಿಟಲ್ ಒಂದು ಸಮೀಕ್ಷೆಯನ್ನು ಮಾಡಿತ್ತು. ಈ ಸಮೀಕ್ಷೆಯನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಲಾಗಿತ್ತು. ಸಮೀಕ್ಷೆಯ ಕುರಿತು ಸಾವಿರಾರೂ ಜನ ಕಮೆಂಟ್ ಮಾಡಿ, ದೇವಾಲಯದಲ್ಲಿ ವಸ್ತ್ರ ಸಂಹಿತೆ ಬೇಕು ಅಥವಾ ಬೇಡ ಎನ್ನುವುದಕ್ಕೆ ಉತ್ತರವನ್ನು ನೀಡಿದ್ದಾರೆ.
ಟಿವಿ9 ಕನ್ನಡ ಡಿಜಿಟಲ್ ನಡೆಸಿದ ಸಮೀಕ್ಷೆಯಲ್ಲಿ ಸಾವಿರಾರೂ ಜನ ಸೋಶಿಯಲ್ ಮೀಡಿಯಾದ ಮೂಲಕ ಭಾಗವಹಿಸಿದರು. ಒಟ್ಟು ಸಾವಿರಕ್ಕೂ ಹೆಚ್ಚಿನ ಜನರು ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಬೇಕು ಎಂದಿದ್ದಾರೆ ಹಾಗೂ ಒಂದಿಷ್ಟು ಜನ ದೇವಾಲಯದಲ್ಲಿ ವಸ್ತ್ರ ಸಂಹಿತೆ ಬೇಡ ಎಂದಿದ್ದಾರೆ, ಅದರ ಅವ್ಯಶಕತೆ ಇಲ್ಲ ಎಂದಿದ್ದಾರೆ. ಟಿವಿ9 ಕನ್ನಡ ಟಿಜಿಟಲ್ ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 3 ಸಾವಿರಕ್ಕೂ ಹೆಚ್ಚಿನ ಜನ ಭಾಗವಹಿಸಿದ್ದರು. ಜೊತೆಗೆ ಒಂದಿಷ್ಟು ಕ್ರಮಗಳನ್ನು ಸರ್ಕಾರವೇ ದೇವಾಲಯಗಳಲ್ಲಿ ತರಬೇಕು ಎಂದಿದ್ದಾರೆ. ಮಹಿಳೆಯರಿಗೆ ಸೀರೆ ಮತ್ತು ಲಂಗ – ದಾವಣಿಯನ್ನು ಹಾಕಬೇಕು ಮತ್ತು ಪುರುಷರು ಪಂಚೆ – ಶರ್ಟ್ ಹಾಕುವಂತೆ ಕಡ್ಡಾಯ ಮಾಡಬೇಕು, ಜೊತೆಗೆ ಇದನ್ನು ಸರ್ಕಾರವೇ ಜಾರಿ ಮಾಡಬೇಕು ಎಂಬುದು ಈ ಸಮೀಕ್ಷೆಯಲ್ಲಿ ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಎಂಬುದು ಬೇಡ ಅದು ಅವರ ಸ್ವಾತಂತ್ರ್ಯ ಅದನ್ನು ಯಾರು ? ಕೇಳಬಾರದು ಎಂದು ಕಮೆಂಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಭಾಗವಹಿಸಿದ ಮಹಿಳೆಯರು ಮತ್ತು ಪುರುಷರು
ಸಾಮಾಜಿಕ ಜಾಲತಾಣಗಳು | ಬೇಕು | ಬೇಡ |
ಫೇಸ್ಬುಕ್ : | ಪುರುಷರು – 95 ಶೇಕಡಾ
ಮಹಿಳೆಯರು -2ಶೇಕಡಾ |
ಪುರುಷರು– 2ಶೇಕಡಾ
ಮಹಿಳೆಯರು -1ಶೇಕಡಾ |
ಇನ್ಸ್ಟಾಗ್ರಾಮ್ | ಪುರುಷರು – 80 ಶೇಕಡಾ
ಮಹಿಳೆಯರು -10 ಶೇಕಡಾ |
ಪುರುಷರು– 7 ಶೇಕಡಾ
ಮಹಿಳೆಯರು -3 ಶೇಕಡಾ |
ಟ್ವಿಟರ್ : | ಪುರುಷರು– 70 ಶೇಕಡಾ
ಮಹಿಳೆಯರು -30 ಶೇಕಡಾ |
ಪುರುಷರು–
ಮಹಿಳೆಯರು – |
ಕೂ : | ಪುರುಷರು– 60 ಶೇಕಡಾ
ಮಹಿಳೆಯರು -40 ಶೇಕಡಾ |
ಪುರುಷರು–
ಮಹಿಳೆಯರು – |
ಯೂಟ್ಯಬ್ | ಪುರುಷರು– 73 ಶೇಕಡಾ
ಮಹಿಳೆಯರು -10 ಶೇಕಡಾ |
ಪುರುಷರು– 10 ಶೇಕಡಾ
ಮಹಿಳೆಯರು -7 ಶೇಕಡಾ |
ಸಮೀಕ್ಷೆಯಲ್ಲಿ ಜನರ ಅಭಿಪ್ರಾಯ