Ayodhya Tour: ಅಯೋಧ್ಯೆ ತಲುಪುವುದರಿಂದ ಹಿಡಿದು ಶ್ರೀರಾಮನ ದರ್ಶನದವರೆಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ
ಅಯೋಧ್ಯೆಯಲ್ಲಿ ಶ್ರೀರಾಮನನ್ನು ಕಣ್ತುಂಬಿಸಿಕೊಳ್ಳಬೇಕು ಎನ್ನುವುದು ಲಕ್ಷಾಂತರ ಜನರ ಕನಸು. ನಿಮಗೂ ಆ ಕನಸಿದ್ದರೆ ಅಯೋಧ್ಯೆ ತಲುಪುವುದರಿಂದ ಹಿಡಿದು ಶ್ರೀರಾಮನ ದರ್ಶನದವರೆಗೆ ನೀವು ತಿಳಿದುಕೊಳ್ಳಬೇಕಾದ ಸಾಕಷ್ಟು ಮಾಹಿತಿಗಳು ಇಲ್ಲಿವೆ.
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜ.22ರಂದು ನಡೆಯಲಿರುವ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮನನ್ನು ಕಣ್ತುಂಬಿಸಿಕೊಳ್ಳಬೇಕು ಎನ್ನುವುದು ಲಕ್ಷಾಂತರ ಜನರ ಕನಸು. ಆದರೆ ನೀವು ಅಯೋಧ್ಯೆಗೆ ಹೋಗಬೇಕಾದರೆ ಹೇಗೆ ಹೋಗಬೇಕು? ದೇವರ ದರ್ಶನ ಹಾಗೂ ಪ್ರಸಾದ ಎಲ್ಲಿ ಪಡೆಯಬೇಕು? ಸುತ್ತಮುತ್ತಲು ಬೇರೆ ಯಾವ ಸ್ಥಳಗಳಿವೆ? ಈ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಹಲವು ಪ್ರಶ್ನೆಗಳಿದ್ದರೆ, ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ.
ಅಯೋಧ್ಯೆ ರೈಲು ನಿಲ್ದಾಣದಿಂದ ರಾಮಮಂದಿರ ಎಷ್ಟು ದೂರದಲ್ಲಿದೆ?
ನೀವು ರೈಲಿನಲ್ಲಿ ಅಯೋಧ್ಯೆಯನ್ನು ತಲುಪುತ್ತಿದ್ದರೆ, ರೈಲ್ವೆ ನಿಲ್ದಾಣದಿಂದ ಕೇವಲ ಐದು ಕಿಲೋಮೀಟರ್ ಪ್ರಯಾಣಿಸಿದ ನಂತರ ನೀವು ರಾಮ ಮಂದಿರವನ್ನು ತಲುಪುತ್ತೀರಿ. ಇಲ್ಲಿಗೆ ತಲುಪಲು ಹಲವು ಮಾರ್ಗಗಳು ಲಭ್ಯವಿರುತ್ತವೆ. ಇದಲ್ಲದೆ, ಲಕ್ನೋ ಮತ್ತು ದೆಹಲಿ ಸೇರಿದಂತೆ ಅನೇಕ ಪ್ರಮುಖ ನಗರಗಳಿಂದ ನೇರ ಬಸ್ ಸೇವೆಯ ಮೂಲಕ ಅಯೋಧ್ಯೆಯನ್ನು ತಲುಪಬಹುದು.
ವಿಮಾನದ ಮೂಲಕ ಅಯೋಧ್ಯೆಗೆ ತಲುಪುವುದು ಹೇಗೆ?
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆ ವಿಮಾನ ನಿಲ್ದಾಣ ಅಥವಾ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು. ರಾಮಮಂದಿರ ಮತ್ತು ವಿಮಾನ ನಿಲ್ದಾಣದ ನಡುವೆ ಸುಮಾರು 10 ಕಿಲೋಮೀಟರ್ ದೂರವಿದೆ. ಇಂಡಿಗೋದಿಂದ ಇಲ್ಲಿ ವಿಮಾನ ಸೇವೆ ಆರಂಭಿಸಲಾಗುತ್ತಿದೆ. ಪ್ರಸ್ತುತ ದೆಹಲಿ ಮತ್ತು ಅಹಮದಾಬಾದ್‌ನಿಂದ ಅಯೋಧ್ಯೆಗೆ ವಿಮಾನಗಳಿವೆ. ನೆರೆಯ ನಗರಗಳಾದ ಲಕ್ನೋ, ಗೋರಖ್‌ಪುರ ಮತ್ತು ವಾರಣಾಸಿಯ ವಿಮಾನ ನಿಲ್ದಾಣಗಳಲ್ಲಿ ಇಳಿಯುವ ಮೂಲಕ ನೀವು ಬಸ್ ಮತ್ತು ರೈಲಿನ ಮೂಲಕ ಅಯೋಧ್ಯೆಯನ್ನು ತಲುಪಬಹುದು.
ರಾಮ ಮಂದಿರಕ್ಕೆ ಭೇಟಿ ನೀಡುವುದು ಹೇಗೆ?
ಶ್ರೀರಾಮನ ಪ್ರತಿಮೆಯನ್ನು ದೇವಾಲಯದಿಂದ 30 ಅಡಿ ದೂರದಿಂದ ನೋಡಬಹುದು. ದೇವಾಲಯದ ಪೂರ್ವ ದಿಕ್ಕಿನಿಂದ ಭಕ್ತರು ದರ್ಶನಕ್ಕೆ ಬರುತ್ತಾರೆ. ಅವರು ಸಿಂಹದ್ವಾರದ ಮೂಲಕ ಚಲಿಸಿದ ತಕ್ಷಣ, ರಾಮ್ ಲಾಲ್ಲಾ ದರ್ಶನ ಪಡೆದು ಎಡಕ್ಕೆ ತಿರುಗಿ ಹೊರಗೆ ಹೋಗಬೇಕು. ಅಯೋಧ್ಯೆಯ ಕುಬೇರ್ ತಿಲಾ ದೇವಸ್ಥಾನ ಹೋಗಲು ಅನುಮತಿ ಪತ್ರವನ್ನು ಹೊಂದಿರಬೇಕು.
ರಾಮಮಂದಿರದಲ್ಲಿ ಪ್ರಸಾದ ಎಲ್ಲಿ ಸಿಗುತ್ತದೆ?
ದರ್ಶನ ಸ್ಥಳದಲ್ಲಿ ಭಕ್ತರಿಗೆ ಯಾವಯದೇ ಪ್ರಸಾದ ಸಿಗುವುದಿಲ್ಲ. ರಾಮಲಾಲ ದರ್ಶನ ಪಡೆದು ಹಿಂದಿರುಗುವಾಗ ದರ್ಶನ ಮಾರ್ಗದ ಬಳಿಯ ಉದ್ಯಾನವನದಿಂದ ಪ್ರಸಾದ ಸ್ವೀಕರಿಸಬಹುದು.
ರಾಮ ಮಂದಿರವನ್ನು ಹೊರತುಪಡಿಸಿ, ಹತ್ತಿರವಿರುವ ಬೇರೆ ಪ್ರಮುಖ ದೇವಾಲಯಗಳು ಯಾವುವು?
ನೀವು ಹನುಮಾನ್‌ಗರ್ಹಿ ದೇವಸ್ಥಾನ, ನಾಗೇಶ್ವರನಾಥ ದೇವಸ್ಥಾನ, ಕನಕ್ ಭವನ, , ಗುಪ್ತರ್ ಘಾಟ್ ಮತ್ತು ರಾಮ್‌ಕೋಟೆಗೆ ಭೇಟಿ ನೀಡಬಹುದು. ಹನುಮಾನ್‌ಗರ್ಹಿ ಮಹಾಬಲಿ ಹನುಮಾಂತನ ಪ್ರಸಿದ್ಧ ದೇವಾಲಯವಾಗಿದ್ದು ಇದನ್ನು 10 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಹನುಮಂತನು ಇಲ್ಲಿ ನೆಲೆಸಿದ್ದಾನೆ ಮತ್ತು ಅವನು ಅಯೋಧ್ಯೆಯನ್ನು ರಕ್ಷಿಸುತ್ತಾನೆ ಎಂಬ ಧಾರ್ಮಿಕ ನಂಬಿಕೆ ಇದೆ.
ಅಯೋಧ್ಯೆಯಲ್ಲಿ ಏನು ಖರೀದಿಸಬೇಕು?
ಯಾತ್ರಾ ನಗರವಾಗಿರುವುದರಿಂದ, ಅಯೋಧ್ಯೆಯಲ್ಲಿ ಮರ ಮತ್ತು ಅಮೃತಶಿಲೆಯಿಂದ ಮಾಡಿದ ರಾಮ, ಸೀತೆ ಮತ್ತು ಲಕ್ಷ್ಮಣನ ವಿಗ್ರಹಗಳನ್ನು ಹೆಚ್ಚು ಖರೀದಿಸಲಾಗುತ್ತದೆ. ಇದಲ್ಲದೆ, ನೀವು ಧಾರ್ಮಿಕ ಚಿಹ್ನೆಗಳು, ಕೀ ಚೈನ್‌ಗಳು ಮತ್ತು ರಾಮ ಮಂದಿರದ ಪೋಸ್ಟರ್‌ಗಳನ್ನು ಹೊಂದಿರುವ ಟೀ ಶರ್ಟ್‌ಗಳನ್ನು ಸಹ ಖರೀದಿಸಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ