
ನಗರಗಳಲ್ಲಿ ವಾಸಿಸುವರು ತಮ್ಮ ಮನೆಯಲ್ಲಿ ಹೆಚ್ಚಾಗಿ ನಾಯಿ ಬೆಕ್ಕುಗಳನ್ನೇ ಸಾಕುತ್ತಾರೆ. ಅಂತದ್ರಲ್ಲಿ ಇಲ್ಲೊಬ್ರು ಮಹಿಳೆ ಬೆಂಗಳೂರಿನಂತಹ (Bengaluru) ದೊಡ್ಡ ನಗರದಲ್ಲಿದ್ದುಕೊಂಡು ಮನೆಯಲ್ಲಿಯೇ ಹಸುವನ್ನು ಸಾಕುತ್ತಿದ್ದಾರೆ. ಉದ್ಯಮಿಯೂ ಆಗಿರುವ ರಂಜಿತಾ ಜಿ.ಹೆಚ್ (Ranjitha G.H) ಎಂಬವರು ತಮ್ಮ ಮನೆಯಲ್ಲಿ ವಿಶ್ವದ ಅತ್ಯಂತ ಕುಬ್ಜ ಹಸುಗಳಲ್ಲಿ ಒಂದಾದ ಪುಂಗನೂರು ಹಸುಗಳನ್ನು (Punganur Cow) ಮನೆ ಮಕ್ಕಳಂತೆ ಸಾಕುತ್ತಿದ್ದಾರೆ. ಪುಂಗನೂರು ಹಸು ಭಾರತದ ಅಪರೂಪದ ಮತ್ತು ಪ್ರಾಚೀನ ತಳಿಯ ಹಸುವಾಗಿದೆ. ವಿಶೇಷವೇನೆಂದರೆ, ಈ ಹಸುವನ್ನು ನಗರಗಳಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲೂ ಸುಲಭವಾಗಿ ಸಾಕಬಹುದು. ಇದೇ ಕಾರಣದಿಂದ ರಂಜಿತಾ ಎರಡು ಮುದ್ದಾದ ಹಸುವನ್ನು ಸಾಕುತ್ತಿದ್ದು, ಮನೆಯಲ್ಲಿ ಹಸುವೆಲ್ಲಾ ಬೇಡ, ನಾಯಿ ಮರಿಯನ್ನು ಸಾಕಿದ್ರೆ ಸಾಕು ಅನ್ನೋರಾ ಮಧ್ಯದಲ್ಲಿ ನಗರದಲ್ಲಿದ್ದುಕೊಂಡು ಮನೆಯಲ್ಲಿ ಹಸು ಸಾಕುತ್ತಿರುವ ಇವರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಪುಂಗನೂರು ಹಸು ಭಾರತದ ಅಪರೂಪದ ಮತ್ತು ಪ್ರಾಚೀನ ತಳಿಯ ಹಸುವಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಈ ಹಸುವಿನ ಮೂಲವಾಗಿದ್ದು, ಕೇವಲ ಇರಡುವರೆ ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಈ ಕುಬ್ಜ ಹಸುಗಳನ್ನು ಮನೆಯೊಳಗೂ ಸಾಕಬಹುದು. ಅಲ್ಲದೆ ಧಾರ್ಮಿಕವಾಗಿಯೂ ತುಂಬಾನೇ ಮಹತ್ವ ಪಡೆದಿರುವ ಈ ಹಸುಗಳನ್ನು ಮನೆಯಲ್ಲಿ ಸಾಕೋದು ಹಾಗೂ ನಿರ್ವಹಣೆ ತುಂಬಾನೇ ಸುಲಭ. ಇದರ ನಿರ್ವಹಣೆ ತುಂಬಾನೇ ಸುಲಭ ಅನ್ನೋ ಕಾರಣಕ್ಕೆ ಇಂದಿನ ಕಾಲದಲ್ಲಿ ನಾಯಿ ಬೆಕ್ಕುಗಳನ್ನು ಸಾಕೋದನ್ನೇ ಫ್ಯಾಶನ್ ಆಗಿಸಿಕೊಂಡಿರುವವ ಮಧ್ಯದಲ್ಲಿ ರಂಜಿತಾ ಮನೆಯಲ್ಲಿಯೇ ಪುಟ್ಟ ಗೋಶಾಲೆ ಸ್ಥಾಪಿಸಿ ಎರಡು ಪುಂಗನೂರು ಹಸುಗಳನ್ನು ಸಾಕುತ್ತಿದ್ದಾರೆ.
ಈ ಕುರಿತ ವಿಡಿಯೋವನ್ನು ರಂಜಿತಾ (ranjitha.gh) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ರಂಜಿತಾ ಈ ದೇಸಿ ಹಸುವಿನ ಹಾಲಿನ ಪ್ರಯೋಜನಗಳ ಬಗ್ಗೆ ವಿವರಿಸಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
ಇದನ್ನೂ ಓದಿ: ರೆಸ್ಟೋರೆಂಟ್‌ಗಳಲ್ಲಿ ಬಾಣಸಿಗರು ಉದ್ದನೆಯ ಬಿಳಿ ಟೋಪಿ ಧರಿಸೋದ್ಯಾಕೆ ಗೊತ್ತಾ?
ಈ ತಳಿಯ ಹಸುವಿನ ಹಾಲು ಕೂಡ ತುಂಬಾನೇ ಪ್ರಯೋಜನಕಾರಿ. ಅತ್ಯಂತ ಪೌಷ್ಟಿಕ ಮತ್ತು ಪವಿತ್ರವೆಂದು ಪರಿಗಣಿಸಲಾದ ಈ ಹಸುವಿನ ಹಾಲನ್ನೇ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಕ್ಷೀರಾಭಿಷೇಕಕ್ಕೆ ಬಳಸಲಾಗುತ್ತದೆ.
ಇದರ ಆರೋಗ್ಯ ಪ್ರಯೋಜನಗಳನ್ನು ನೋಡುವುದಾದರೆ, ಈ ಹಸುವಿನ ಹಾಲು ಅಧಿಕ ರೋಗನಿರೋಧಕ ಶಕ್ತಿಯನ್ನು ಹೊಂದಿದೆ, ಇದರಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಇತರೆ ಅಗತ್ಯ ಪೋಷಕಾಂಶಗಳಿವೆ. ಜೊತೆಗೆ ಇತರ ತಳಿಯ ಹಸುಗಳಲ್ಲಿ ಶೇ. ಮೂರರಿಂದ ನಾಲ್ಕರಷ್ಟು ಕೊಬ್ಬಿದ್ದರೆ, ಈ ಹಸುವಿನ ಹಾಲಿನಲ್ಲಿ ಶೇ. 8% ಕೊಬ್ಬಿನಾಂಶ ಕಂಡುಬರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:19 pm, Sun, 1 June 25