
ಸಮುದ್ರದ ಅಲೆಗಳ ಸದ್ದು, ತಂಪಾದ ಗಾಳಿ, ಬಿಳಿ ಮರಳಿನ ಮೇಲೆ ವಾಕಿಂಗ್, ಸೂರ್ಯಾಸ್ತದ ಸುಂದರ ದೃಶ್ಯಗಳು… ಬೀಚ್ ವೆಕೇಶನ್ ಎಂದರೆ ಮನಸ್ಸಿಗೆ ಒಂಥರಾ ರಿಫ್ರೆಶಿಂಗ್ ಅನುಭವ. ಗೋವಾ, ಕೇರಳ ಅಥವಾ ದೇಶದ ಬೇರೆ ಯಾವುದೇ ಬೀಚ್ ಡೆಸ್ಟಿನೇಶನ್‌ಗೆ ಹೋಗುವ ಪ್ಲಾನ್ ಮಾಡುತ್ತಿದ್ದರೆ, ಪ್ರವಾಸದ ಮಜಾ ಹೆಚ್ಚಿಸಲು ಪ್ಯಾಕಿಂಗ್ ಕೂಡ ಸರಿಯಾಗಿರಬೇಕು. ಬಟ್ಟೆ, ಟೂತ್‌ಬ್ರಶ್, ಚಾರ್ಜರ್‌ಗಳ ಜೊತೆಗೆ ಬೀಚ್‌ನಲ್ಲಿ ನಿಜವಾಗಿಯೂ ಉಪಯೋಗವಾಗುವ ಕೆಲವು ವಸ್ತುಗಳನ್ನು ಬ್ಯಾಗ್‌ನಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಅದು ಯಾವುದು, ಇದು ಏಕೆ ಮುಖ್ಯವಾಗುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಬೀಚ್‌ಗೆ ಹೋದಾಗ ಮೊಬೈಲ್, ಹಣ, ಚಾವಿ, ಹೆಡ್‌ಫೋನ್‌ಗಳಂತಹ ವಸ್ತುಗಳನ್ನು ನೀರು ಮತ್ತು ಮರಳಿನಿಂದ ರಕ್ಷಿಸುವುದು ಕಷ್ಟವಾಗಬಹುದು. ಹೀಗಾಗಿ ಎರಡು ಅಥವಾ ಮೂರು ಜಿಪ್‌ಲಾಕ್ ಬ್ಯಾಗ್‌ಗಳನ್ನು ಕೊಂಡೊಯ್ಯಿರಿ. ಸಣ್ಣ ವಸ್ತುಗಳನ್ನು ಸುರಕ್ಷಿತವಾಗಿ ಇಡಲು ಇವು ತುಂಬಾ ಉಪಯುಕ್ತವಾಗುತ್ತದೆ.
ಬೀಚ್ ಟ್ರಿಪ್‌ಗೆ ಸ್ಟೈಲಿಶ್ ಹ್ಯಾಟ್ ಮತ್ತು ಸನ್‌ಗ್ಲಾಸ್‌ಗಳು ಲುಕ್ ಹೆಚ್ಚಿಸುವುದಷ್ಟೇ ಅಲ್ಲ, ಬಿಸಿಲಿನಿಂದ ರಕ್ಷಣೆ ಪಡೆಯಲೂ ಸಹಾಯ ಮಾಡುತ್ತವೆ. ಅಗಲವಾದ ಬ್ರಿಮ್ ಇರುವ ಹ್ಯಾಟ್ ಮುಖ, ಕುತ್ತಿಗೆ ಮತ್ತು ತಲೆಯನ್ನು ಸೂರ್ಯನ ಬೆಳಕಿನಿಂದ ಕಾಪಾಡಲು ಸಹಾಯ ಮಾಡುತ್ತದೆ.
ಹೆಚ್ಚು ಬಿಸಿ ಇರುವ ಪ್ರದೇಶಕ್ಕೆ ಹೋಗುತ್ತಿದ್ದರೆ ಕಾಟನ್ ಅಥವಾ ಲಿನನ್ ಬಟ್ಟೆಗಳನ್ನು ಆಯ್ಕೆ ಮಾಡುವುದು ಆರಾಮದಾಯಕ. ಶಾರ್ಟ್ಸ್, ಟ್ಯಾಂಕ್ ಟಾಪ್‌ಗಳು, ಲೂಸ್ ಶರ್ಟ್‌ಗಳು, ಲಿನನ್ ಪ್ಯಾಂಟ್‌ಗಳು, ಮ್ಯಾಕ್ಸಿ ಡ್ರೆಸ್‌ಗಳು ಮತ್ತು ಕವರ್-ಅಪ್‌ಗಳನ್ನು ಪ್ಯಾಕ್ ಮಾಡಬಹುದು. ವಾಟರ್ ಆಕ್ಟಿವಿಟಿಗಳಲ್ಲಿ ಭಾಗವಹಿಸುವ ಪ್ಲಾನ್ ಇದ್ದರೆ ಸೂಕ್ತವಾದ ಸ್ವಿಮ್‌ವೇರ್ ಕೂಡ ತೆಗೆದುಕೊಂಡು ಹೋಗಿ. ಹೆಚ್ಚುವರಿ ಬಟ್ಟೆಗಳ ಒಂದು ಸೆಟ್ ಇಟ್ಟುಕೊಳ್ಳುವುದನ್ನು ಮರೆಯಬೇಡಿ.
ಬೀಚ್ ವೆಕೇಶನ್‌ನಲ್ಲಿ ಸನ್‌ಸ್ಕ್ರೀನ್ ನಿಮ್ಮ ಬ್ಯಾಗ್‌ನ ಪ್ರಮುಖ ವಸ್ತುಗಳಲ್ಲಿ ಒಂದಾಗಿರಬೇಕು. ಹೊರಗಡೆ ಹೆಚ್ಚು ಸಮಯ ಕಳೆಯುವಾಗ ಸೂರ್ಯನ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಸೂಕ್ತವಾದ ಸನ್‌ಸ್ಕ್ರೀನ್ ಬಳಸಿ. ಈಜಿದ ನಂತರ ಅಥವಾ ಬೆವರು ಹೆಚ್ಚಾದಾಗ ಹಚ್ಚುವುದು ಅಗತ್ಯವಾಗಬಹುದು. ಅಲೋವೆರಾ ಜೆಲ್ ಅಥವಾ ಮಾಯಿಶ್ಚರೈಸರ್ ಕೂಡ ಜೊತೆಯಲ್ಲಿದ್ದರೆ ಬಿಸಿಲಿನಿಂದ ಚರ್ಮಕ್ಕೆ ಉಂಟಾಗುವ ಒಣತನ ಅಥವಾ ಅಸ್ವಸ್ಥತೆಯ ಸಂದರ್ಭದಲ್ಲಿ ಉಪಯೋಗವಾಗಬಹುದು.
ಬೀಚ್‌ನಲ್ಲಿ ನಡೆಯಲು ಆರಾಮದಾಯಕವಾದ ಫ್ಲಾಟ್ ಸ್ಯಾಂಡಲ್ಸ್ ಅಥವಾ ಫ್ಲಿಪ್-ಫ್ಲಾಪ್ಸ್ ಸೂಕ್ತ. ಕೇವಲ ಫ್ಯಾಷನ್‌ಗಾಗಿ ಶೂಗಳನ್ನು ತೆಗೆದುಕೊಂಡು ಹೋಗಬೇಡಿ. ಹೆಚ್ಚು ವಾಕಿಂಗ್ ಮಾಡುವ ಪ್ಲಾನ್ ಇದ್ದರೆ ಆರಾಮದಾಯಕ ಸ್ನೀಕರ್ಸ್ ಕೂಡ ಬ್ಯಾಗ್‌ನಲ್ಲಿ ಇರಲಿ.
ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಿಗೆ ವಾಟರ್‌ಪ್ರೂಫ್ ಪೌಚ್, ಸಣ್ಣ ಟವೆಲ್, ಮರುಬಳಕೆ ಮಾಡಬಹುದಾದ ನೀರಿನ ಬಾಟಲಿ, ಪವರ್ ಬ್ಯಾಂಕ್, ವೈಯಕ್ತಿಕ ಔಷಧಿಗಳು ಮತ್ತು ಅಗತ್ಯವಾದ ವೈಯಕ್ತಿಕ ಆರೈಕೆ ವಸ್ತುಗಳನ್ನು ಪ್ಯಾಕ್ ಮಾಡಿಕೊಳ್ಳಿ.
ಬೀಚ್ ವೆಕೇಶನ್‌ನಲ್ಲಿ ಹೆಚ್ಚು ವಸ್ತುಗಳನ್ನು ತುಂಬಿಕೊಳ್ಳುವುದಕ್ಕಿಂತ, ನಿಜವಾಗಿಯೂ ಬೇಕಾಗುವ ವಸ್ತುಗಳನ್ನು ಸರಿಯಾಗಿ ಆಯ್ಕೆ ಮಾಡುವುದು ಮುಖ್ಯ. ಹೀಗೆ ಮುಂಚಿತವಾಗಿ ಪ್ಯಾಕಿಂಗ್ ಮಾಡಿಕೊಂಡರೆ ಪ್ರವಾಸದ ಸಮಯದಲ್ಲಿ ಅನಗತ್ಯ ಟೆನ್ಶನ್ ಕಡಿಮೆಯಾಗುತ್ತದೆ. ಆಗ ನೀವು ಬ್ಯಾಗ್ ಬಗ್ಗೆ ಯೋಚಿಸುವ ಬದಲು ಸಮುದ್ರದ ಅಲೆಗಳು, ಸುಂದರ ದೃಶ್ಯಗಳು ಮತ್ತು ನಿಮ್ಮ ವೆಕೇಶನ್‌ನ ಪ್ರತಿಯೊಂದು ಕ್ಷಣವನ್ನೂ ಎಂಜಾಯ್ ಮಾಡಬಹುದು. ಹಾಗಿದ್ರೆ ಇನ್ನೇಕೆ ತಡ ನಿಮ್ಮ ಬ್ಯಾಗ್ ಪ್ಯಾಕ್ ಮಾಡಿ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳಿ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:21 pm, Tue, 29 September 26