ದಪ್ಪನೆಯ ಹುಬ್ಬು ನಿಮ್ಮದಾಗಬೇಕಾ?; ಮನೆಯಲ್ಲೇ ಇರುವ ಈ ಪದಾರ್ಥ ಬಳಸಿ

|

Updated on: Jan 27, 2024 | 3:52 PM

ಮೊದಲೆಲ್ಲ ತೆಳುವಾದ ಕಾಮನಬಿಲ್ಲಿನಂತಹ ಹುಬ್ಬು ಬೇಕೆಂದು ಮಹಿಳೆಯರು ಇಷ್ಟಪಡುತ್ತಿದ್ದರು. ಹೀಗಾಗಿಯೇ ಕಡ್ಡಿಯಂತೆ ತೆಳ್ಳಗಿನ ಶೇಪ್​ನಲ್ಲಿ ಐಬ್ರೋ ಮಾಡಿಸಿಕೊಳ್ಳುತ್ತಿದ್ದರು. ಆದರೆ, ಈಗ ದಪ್ಪವಾದ ಹುಬ್ಬು ಮತ್ತೆ ಟ್ರೆಂಡ್ ಆಗಿದೆ. ನಿಮ್ಮ ಹುಬ್ಬು ಕೂಡ ದಪ್ಪವಾಗಿ, ದಟ್ಟವಾಗಿ ಬೆಳೆಯಬೇಕಾ? ಕೆಲವು ಮನೆಮದ್ದುಗಳು ಇಲ್ಲಿವೆ.

ದಪ್ಪನೆಯ ಹುಬ್ಬು ನಿಮ್ಮದಾಗಬೇಕಾ?; ಮನೆಯಲ್ಲೇ ಇರುವ ಈ ಪದಾರ್ಥ ಬಳಸಿ
ದಪ್ಪ ಹುಬ್ಬು
Follow us on

ನಿಮ್ಮ ಮುಖದ ಸೌಂದರ್ಯದಲ್ಲಿ ಹುಬ್ಬುಗಳು ಕೂಡ ಪ್ರಮುಖ ಪಾತ್ರ ವಹಿಸುತ್ತವೆ. ದಪ್ಪವಾದ ಹುಬ್ಬುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಈಗ ತೆಳುವಾದ ಹುಬ್ಬಿನ ಬದಲು ದಪ್ಪ ಹುಬ್ಬು ಬೇಕೆಂದು ಕೂದಲ ಕಸಿಗಾಗಿ ದುಬಾರಿ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವವರು ಕೂಡ ಇದ್ದಾರೆ. ಹೆಚ್ಚು ಹಣವನ್ನು ಖರ್ಚು ಮಾಡದೆಯೇ ನೀವು ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ದಪ್ಪವಾದ ಹುಬ್ಬುಗಳನ್ನು ಪಡೆಯಬಹುದು.

ಹರಳೆಣ್ಣೆ:

ಹರಳೆಣ್ಣೆಯಲ್ಲಿ ಕೊಬ್ಬಿನಾಮ್ಲ, ವಿಟಮಿನ್ ಮತ್ತು ಪ್ರೋಟೀನ್​ಗಳು ಸಮೃದ್ಧವಾಗಿದೆ. ಇದು ಕೂದಲ ಕಿರುಚೀಲಗಳನ್ನು ಉತ್ತೇಜಿಸಲು, ದಪ್ಪ ಮತ್ತು ಗಾಢವಾದ ಹುಬ್ಬುಗಳ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹತ್ತಿ ಸ್ವ್ಯಾಬ್ ಬಳಸಿ ನೀವು ಪ್ರತಿ ರಾತ್ರಿ ನಿಮ್ಮ ಹುಬ್ಬುಗಳಿಗೆ ಸ್ವಲ್ಪ ಪ್ರಮಾಣದ ಹರಳೆಣ್ಣೆಯನ್ನು ಹಚ್ಚಿಕೊಳ್ಳಬಹುದು.

ಕೊಬ್ಬರಿ ಎಣ್ಣೆ:

ದಪ್ಪ ಹುಬ್ಬುಗಳನ್ನು ಪಡೆಯಲು ಇನ್ನೊಂದು ವಿಧಾನವೆಂದರೆ ಅವುಗಳಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳಿ. ಲಾರಿಕ್ ಆಸಿಡ್ ಮತ್ತು ವಿಟಮಿನ್‌ಗಳನ್ನು ಒಳಗೊಂಡಂತೆ ಇದರ ಹೆಚ್ಚಿನ ಪೋಷಕಾಂಶವು ಕೂದಲು ಕಿರುಚೀಲಗಳನ್ನು ಪೋಷಿಸುತ್ತದೆ. ಹಾಗೇ, ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ನಿಮ್ಮ ಕೈಯಲ್ಲಿ ಬೆಚ್ಚಗಿನ ಕೊಬ್ಬರಿ ಎಣ್ಣೆಯ ಕೆಲವು ಹನಿಗಳನ್ನು ತೆಗೆದುಕೊಂಡು ಅದನ್ನು ನಿಮ್ಮ ಹುಬ್ಬುಗಳಿಗೆ ಹಚ್ಚಿಕೊಳ್ಳಿ.

ಇದನ್ನೂ ಓದಿ: ಒಣ ಚರ್ಮದವರು ಮುಖಕ್ಕೆ ಒಮ್ಮೆ ಈ ಫೇಸ್​ಪ್ಯಾಕ್ ಹಚ್ಚಿ ನೋಡಿ

ಅಲೋವೆರಾ:

ಅಲೋವೆರಾ ಅದರ ಗುಣಪಡಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ಹುಬ್ಬು ದಪ್ಪವಾಗಲು ಸಹ ಸಹಾಯ ಮಾಡುತ್ತದೆ. ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುವ ಅಲೋವೆರಾ ಕೂದಲು ಕಿರುಚೀಲಗಳನ್ನು ಪೋಷಿಸುತ್ತದೆ. ದಪ್ಪವಾದ ಹುಬ್ಬುಗಳ ಬೆಳವಣಿಗೆಗೆ ಕಾರಣವಾಗುತ್ತದೆ. ನೀವು ತಾಜಾ ಅಲೋವೆರಾ ಜೆಲ್ ಅನ್ನು ಹುಬ್ಬುಗಳಿಗೆ ಹಚ್ಚಬಹುದು. ಅದಾಗಿ 30 ನಿಮಿಷ ಬಿಟ್ಟು ನಂತರ ಹುಬ್ಬುಗಳನ್ನು ತೊಳೆಯಿರಿ.

ಈರುಳ್ಳಿ ರಸ:

ಈರುಳ್ಳಿಯ ರಸವು ದಪ್ಪವಾದ ಹುಬ್ಬುಗಳಿಗೆ ಸಹಾಯ ಮಾಡುತ್ತದೆ. ಈರುಳ್ಳಿಯಲ್ಲಿ ಸಲ್ಫರ್‌ ಅಂಶ ಸಮೃದ್ಧವಾಗಿದೆ. ಇದು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ನೀವು ಈರುಳ್ಳಿ ರಸವನ್ನು ಹುಬ್ಬುಗಳಿಗೆ ಹಚ್ಚಿ, 15-20 ನಿಮಿಷಗಳ ಕಾಲ ಬಿಡಿ. ನಂತರ ನೀರಿನಿಂದ ತೊಳೆದುಕೊಳ್ಳಿ.

ಮೆಂತ್ಯ:

ಮೆಂತ್ಯ ಬೀಜಗಳು ಪ್ರೋಟೀನ್ ಮತ್ತು ನಿಕೋಟಿನಿಕ್ ಆಮ್ಲವನ್ನು ಹೊಂದಿರುತ್ತವೆ. ಇದು ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಅವುಗಳನ್ನು ಪೇಸ್ಟ್ ಆಗಿ ಮಾಡಿಕೊಳ್ಳಿ. ಅದನ್ನು ನಿಮ್ಮ ಹುಬ್ಬುಗಳಿಗೆ ಹಚ್ಚಿ. ಒಣಗಿದ ನಂತರ ನೀರಿನಿಂದ ತೊಳೆದುಕೊಳ್ಳಿ.

ಇದನ್ನೂ ಓದಿ: ತ್ವಚೆಯ ಸೌಂದರ್ಯಕ್ಕೆ ಪಪ್ಪಾಯ ಹಣ್ಣು ಬಳಸಿ; ನಿಮ್ಮ ಚರ್ಮಕ್ಕೆ ಯಾವ ಫೇಸ್​ಪ್ಯಾಕ್ ಬೆಸ್ಟ್?

ರೋಸ್ಮರಿ ಎಣ್ಣೆ:

ರೋಸ್ಮರಿ ಎಣ್ಣೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಹುಬ್ಬುಗಳು ದಪ್ಪವಾಗುವಂತೆ ಮಾಡುತ್ತದೆ. ರೋಸ್ಮರಿ ಎಣ್ಣೆಯ ಕೆಲವು ಹನಿಗಳನ್ನು ಕೊಬ್ಬರಿ ಎಣ್ಣೆ ಅಥವಾ ಜೊಜೊಬಾ ಎಣ್ಣೆಯ ಜೊತೆ ಬೆರೆಸಿ. ಅದನ್ನು ನಿಮ್ಮ ಹುಬ್ಬುಗಳಿಗೆ ನಿಧಾನವಾಗಿ ಹಚ್ಚಿ, ಮಸಾಜ್ ಮಾಡಿ.

ಇದರ ಜೊತೆಗೆ, ನಿಮ್ಮ ಹುಬ್ಬುಗಳನ್ನು ಅತಿಯಾಗಿ ಕಿತ್ತುಕೊಳ್ಳಬೇಡಿ. ಅತಿಯಾದ ಬೆಳಕಿನಲ್ಲಿ ಅನಗತ್ಯ ಕೂದಲನ್ನು ತೆಗೆದುಹಾಕಬೇಡಿ. ಅದು ಅತಿಯಾಗಿ ಕೂದಲಿನ ಉದುರುವಿಕೆಗೆ ಕಾರಣವಾಗುತ್ತದೆ. ಹೆಚ್ಚು ಒತ್ತಡ ಕೂಡ ನಿಮ್ಮ ಕೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ನಿಮ್ಮ ಹುಬ್ಬುಗಳ ಮೇಲೆ ಮಸಾಜ್ ಮಾಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ