ತ್ವಚೆಯ ಸೌಂದರ್ಯಕ್ಕೆ ಪಪ್ಪಾಯ ಹಣ್ಣು ಬಳಸಿ; ನಿಮ್ಮ ಚರ್ಮಕ್ಕೆ ಯಾವ ಫೇಸ್​ಪ್ಯಾಕ್ ಬೆಸ್ಟ್?

ಪಪ್ಪಾಯ ಹಣ್ಣಿನ ಫೇಸ್​ಪ್ಯಾಕ್ ಮಾಡಿಕೊಳ್ಳುವುದರಿಂದ ಮುಖದ ತ್ವಚೆ ಕಾಂತಿಯುಕ್ತವಾಗುತ್ತದೆ, ಇದು ಚರ್ಮವನ್ನು ಮೃದುಗೊಳಿಸುತ್ತದೆ, ತ್ವಚೆಯ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಯಾವ ರೀತಿಯ ಚರ್ಮದವರು ಯಾವ ರೀತಿ ಪಪ್ಪಾಯಿ ಫೇಸ್​ಪ್ಯಾಕ್ ಮಾಡಿಕೊಳ್ಳಬೇಕು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ತ್ವಚೆಯ ಸೌಂದರ್ಯಕ್ಕೆ ಪಪ್ಪಾಯ ಹಣ್ಣು ಬಳಸಿ; ನಿಮ್ಮ ಚರ್ಮಕ್ಕೆ ಯಾವ ಫೇಸ್​ಪ್ಯಾಕ್ ಬೆಸ್ಟ್?
ಪಪ್ಪಾಯಿಯ ಫೇಸ್ ಪ್ಯಾಕ್ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 11, 2023 | 6:36 PM

ಪಪ್ಪಾಯ ಹಣ್ಣನ್ನು ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಪಪ್ಪಾಯ ಹಣ್ಣಿನಿಂದ ನಮ್ಮ ಸೌಂದರ್ಯಕ್ಕೆ ಮತ್ತು ಚರ್ಮಕ್ಕೆ ಏನೆಲ್ಲ ಪ್ರಯೋಜನಗಳಿವೆ ಎಂಬುದು ಗೊತ್ತಾ? ಪಪ್ಪಾಯ ಹಣ್ಣಿನ ಫೇಸ್​ಪ್ಯಾಕ್ ಮಾಡಿಕೊಳ್ಳುವುದರಿಂದ ಮುಖದ ತ್ವಚೆ ಕಾಂತಿಯುಕ್ತವಾಗುತ್ತದೆ, ಇದು ಚರ್ಮವನ್ನು ಮೃದುಗೊಳಿಸುತ್ತದೆ, ತ್ವಚೆಯ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ, ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ, ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಹಾಗಾದರೆ, ಯಾವ ರೀತಿಯ ಚರ್ಮದವರು ಯಾವ ರೀತಿ ಪಪ್ಪಾಯಿ ಫೇಸ್​ಪ್ಯಾಕ್ ಮಾಡಿಕೊಳ್ಳಬೇಕು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಪಪ್ಪಾಯಿಯು ವಿಶೇಷವಾಗಿ ತ್ವಚೆಯ ವಿಚಾರದಲ್ಲಿ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು, ಪಿಗ್ಮೆಂಟೇಶನ್ ಮಸುಕಾಗಲು ಸಹಾಯ ಮಾಡುತ್ತದೆ.

ಒಣ ಚರ್ಮದವರು ಈ ರೀತಿ ಮಾಡಿ:

ಪಪ್ಪಾಯಿ ಹಣ್ಣು ಮತ್ತು ಜೇನುತುಪ್ಪವನ್ನು ಮಿಕ್ಸ್​ ಮಾಡಿ ಫೇಸ್​ಪ್ಯಾಕ್ ಮಾಡಿಕೊಳ್ಳುವುದರಿಂದ ಒಣ ತ್ವಚೆಗೆ ಉತ್ತಮವಾದ ಮಾಯಿಶ್ಚರೈಸರ್ ಸಿಗುತ್ತದೆ. ಇವೆರಡೂ ನಿಮ್ಮ ಮುಖದ ಚರ್ಮವನ್ನು ಎಫ್ಫೋಲಿಯೇಟ್ ಮಾಡಿ ಮತ್ತು ಹೈಡ್ರೇಟ್ ಮಾಡುತ್ತದೆ. ಇದು ಮೃದುವಾದ, ನಯವಾದ, ಕಾಂತಿಯುತವಾದ ಚರ್ಮವನ್ನು ನೀಡುತ್ತದೆ.

ಇದನ್ನೂ ಓದಿ: ಹೊಳೆಯುವ ಸುಂದರ ತ್ವಚೆಗಾಗಿ ಮನೆಯಲ್ಲೇ ಸುಲಭವಾಗಿ ಈ ಫೇಸ್​ಪ್ಯಾಕ್ ಮಾಡಿಕೊಳ್ಳಿ

ಈ ಫೇಸ್​ಪ್ಯಾಕ್ ತಯಾರಿಸುವುದು ಹೇಗೆ?:

ಮಾಗಿದ ಪಪ್ಪಾಯಿ ಹಣ್ಣನ್ನು 1 ಕಪ್ ಹಿಸುಕಿಟ್ಟುಕೊಳ್ಳಿ. ಅದನ್ನು 1 ಚಮಚ ಜೇನುತುಪ್ಪ ಮತ್ತು ಎರಡು ಟೇಬಲ್ ಸ್ಪೂನ್ ತಾಜಾ ಹಾಲಿನೊಂದಿಗೆ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಂಡು, 15ರಿಂದ 20 ನಿಮಿಷಗಳ ಕಾಲ ಒಣಗಲು ಬಿಡಿ. ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಎಣ್ಣೆಯುಕ್ತ ಚರ್ಮದವರು ಹೀಗೆ ಮಾಡಿ:

ಎಣ್ಣೆಯುಕ್ತ ಚರ್ಮಕ್ಕೆ ಪಪ್ಪಾಯಿಯ ಫೇಸ್ ಪ್ಯಾಕ್ ಅಗತ್ಯವಿರುತ್ತದೆ. ಅದು ಚರ್ಮಕ್ಕೆ ಸರಿಯಾದ ಪ್ರಮಾಣದ ತೇವಾಂಶವನ್ನು ನೀಡುತ್ತದೆ, ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಈ ಫೇಸ್​ಪ್ಯಾಕ್​ನ ಸಂಪೂರ್ಣ ಅಂಶವು ಸಮತೋಲನವನ್ನು ಉಂಟುಮಾಡುತ್ತದೆ. ಎಣ್ಣೆಯುಕ್ತ ಚರ್ಮಕ್ಕಾಗಿ ಈ ಪಪ್ಪಾಯಿ ಫೇಸ್ ಪ್ಯಾಕ್ ಮಾಡಿಕೊಳ್ಳುವಾಗ ಪಪ್ಪಾಯಿಯೊಂದಿಗೆ ನಿಂಬೆ ರಸವನ್ನು ಸೇರಿಸಿಕೊಳ್ಳಿ.

ಇದನ್ನು ಹೇಗೆ ಮಾಡುವುದು?:

1 ಕಪ್ ಪಪ್ಪಾಯಿಯನ್ನು 2 ಚಮಚ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖದ ಮೇಲೆ 15 ನಿಮಿಷಗಳ ಕಾಲ ಹಚ್ಚಿಕೊಂಡು, ತಂಪಾದ ನೀರಿನಿಂದ ತೊಳೆಯಿರಿ.

ಇದನ್ನೂ ಓದಿ: Beauty Tips: ಫೇಸ್​ಪ್ಯಾಕ್ ಮಾಡಿಕೊಳ್ಳುವಾಗ ಈ ವಿಷಯಗಳನ್ನೆಂದೂ ಮರೆಯಬೇಡಿ

ಚರ್ಮದ ಹೊಳಪು ಹೆಚ್ಚಾಗಿ, ಟ್ಯಾನ್​ ಕಡಿಮೆಯಾಗಲು ಹೀಗೆ ಮಾಡಿ:

ಪಪ್ಪಾಯಿ ನಿಮ್ಮ ತ್ವಚೆಯನ್ನು ಹೊಳಪುಗೊಳಿಸುವ ಗುಣಗಳನ್ನು ಹೊಂದಿದ್ದು, ಟ್ಯಾನ್ ಲೈನ್‌ ಅನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಪಿಗ್ಮೆಂಟೇಶನ್ ಮತ್ತು ಹೊಳಪಿಗಾಗಿ ಪಪ್ಪಾಯಿ ಫೇಸ್ ಪ್ಯಾಕ್ ಮಾಡಲು, ನೀವು ಅದನ್ನು ಸ್ವಲ್ಪ ಟೊಮೆಟೊ ರಸದೊಂದಿಗೆ ಬೆರೆಸಬೇಕು.

ಇದನ್ನು ಹೇಗೆ ಮಾಡುವುದು?:

1 ಕಪ್ ಮಾಗಿದ ಪಪ್ಪಾಯಿಯನ್ನು ಒಂದು ಟೊಮ್ಯಾಟೊದ ತಿರುಳಿನೊಂದಿಗೆ ಮಿಶ್ರಣ ಮಾಡಿ. ಅದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಂಡು ಒಣಗುವವರೆಗೆ ಕಾಯಿರಿ. ನಂತರ ಮುಖ ತೊಳೆಯಿರಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್