ತುಳಸಿ ಎಲೆಯ ಆರೋಗ್ಯ ಪ್ರಯೋಜನಗಳು ಒಂದೆರಡಲ್ಲ, ಇಲ್ಲಿದೆ ನೋಡಿ

ಭಾರತೀಯ ಸಂಸ್ಕೃತಿಯಲ್ಲಿ ತುಳಸಿಗೆ ತನ್ನದೇ ಆದ ವೈಶಿಷ್ಯವಿದ್ದು, ಲಕ್ಷ್ಮಿ ದೇವಿಯ ಸಹೋದರಿಯಾಗಿರುವ ಈ ತುಳಸಿಯು ವಿಷ್ಣುವಿಗೆ ಅತ್ಯಂತ ಪ್ರಿಯವಾದವಳು ಎನ್ನುವ ನಂಬಿಕೆಯಿದೆ. ದೇವರ ಸ್ಥಾನದಲ್ಲಿಟ್ಟು ಪೂಜಿಸುವ ಈ ತುಳಸಿಯೂ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದ್ದು, ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಹಾಗಾದ್ರೆ ಈ ತುಳಸಿ ಎಲೆಯಿಂದ ಹಲವಾರು ರೋಗಗಳಿಗೆ ಮನೆ ಮದ್ದಿನ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು.

ತುಳಸಿ ಎಲೆಯ ಆರೋಗ್ಯ ಪ್ರಯೋಜನಗಳು ಒಂದೆರಡಲ್ಲ, ಇಲ್ಲಿದೆ ನೋಡಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 27, 2024 | 2:40 PM

ಹಿಂದೂ ಧರ್ಮದಲ್ಲಿ ತುಳಸಿಯನ್ನು ಲಕ್ಷ್ಮಿ ದೇವಿಗೆ ಹೋಲಿಸುವ ಮೂಲಕ ವಿಶೇಷ ಸ್ಥಾನವನ್ನು ನೀಡಲಾಗಿದೆ. ಆಯುರ್ವೇದದಲ್ಲಿ ವಿಶೇಷ ಔಷಧೀಯ ಮೂಲಿಕೆಯಾಗಿ ಬಳಸುವ ಈ ತುಳಸಿಯಲ್ಲಿ ಅಂಟಿ ಆಕ್ಸಿಡೆಂಟ್ಸ್​ ಅಂಶಗಳು ಹೇರಳವಾಗಿದೆ. ಹೀಗಾಗಿ ತುಳಸಿಯು ನಾನಾ ರೋಗಗಳನ್ನು ಶಮನ ಮಾಡುವ ಗುಣವನ್ನು ಹೊಂದಿದೆ. ನಮ್ಮ ಹಿರಿಯರು ಈ ತುಳಸಿ ಸಸ್ಯವನ್ನು ಬಳಸಿ ಹಲವಾರು ಮನೆ ಮದ್ದನ್ನು ತಯಾರಿಸಿ ಆರೋಗ್ಯ ಸಮಸ್ಯೆಗಳಿಗೆ ಔಷಧಿಯಾಗಿ ಇವತ್ತಿಗೂ ಬಳಸುತ್ತಿದ್ದಾರೆ.

ತುಳಸಿ ಎಲೆಯ ಮನೆಮದ್ದುಗಳು ಇಲ್ಲಿವೆ:

* ತುಳಸಿ ಎಲೆಯನ್ನು ಜಜ್ಜಿ ಒಂದು ಲೋಟ ನೀರಿನಲ್ಲಿ ಹಾಕಿ ಮೂರು ನಾಲ್ಕು ಘಂಟೆಗಳ ಬಳಿಕ ಕುಡಿದರೆ ಅಜೀರ್ಣ ಸಮಸ್ಯೆಯೂ ನಿವಾರಣೆಯಾಗುವುದು.

* ಅಸ್ತಮಾ ಅಥವಾ ಉಬ್ಬಸ ಸಮಸ್ಯೆಯಿರುವವರು ತುಳಸಿ ಎಲೆಗಳನ್ನು ಜಜ್ಜಿ ಒಂದು ಲೀಟರ್ ನೀರಿನಲ್ಲಿ ಚೆನ್ನಾಗಿ ಕುದಿಸಿ, ಈ ನೀರು ಕುಡಿಯುವುದು ಉತ್ತಮ.

* ಇಸುಬು ಅಥವಾ ಹುಳು ಕಡ್ಡಿಯ ಸಮಸ್ಯೆ ಇದ್ದವರು ತುಳಸಿ ಎಲೆಗೆ ಉಪ್ಪು ಬೆರೆಸಿ ಅದನ್ನು ಚೆನ್ನಾಗಿ ಅರೆದು, ಈ ಮಿಶ್ರಣವನ್ನು ಇಸುಬು ಇರುವ ಜಾಗಕ್ಕೆ ಲೇಪಿಸಿದರೆ ಚರ್ಮದ ಸಮಸ್ಯೆಯು ಕಡಿಮೆಯಾಗುವುದು.

* ತುಳಸಿ ಎಲೆಗಳನ್ನು ಬೆಳಿಗ್ಗೆ ಮತ್ತು ರಾತ್ರಿ ಆಹಾರ ಸೇವಿಸುವ ನಂತರ ಅಗಿದು ತಿಂದರೆ ಬಾಯಿಯಿಂದ ಹೊರ ಬರುವ ದುರ್ನಾತವು ಇಲ್ಲದಂತಾಗುತ್ತದೆ.

* ಕೀಲು ನೋವು ಸಮಸ್ಯೆಯಿದ್ದವರು ಇಪ್ಪತ್ತು ತುಳಸಿ ಎಲೆ, ಐದು ಕಾಳು ಮೆಣಸು ಎರಡನ್ನು ಸೇರಿಸಿ ಅರೆದು, ಅದಕ್ಕೆ ಒಂದು ಚಮಚ ತುಪ್ಪ ಸೇರಿಸಿ ಬೆಳೆಗ್ಗೆ ರಾತ್ರಿ ಸೇವಿಸಿದರೆ ಪರಿಣಾಮಕಾರಿ.

* 10 ಗ್ರಾಂ ತುಳಸಿ ಬೀಜದ ಪುಡಿಗೆ ಒಂದು ಚಮಚ ಬೆಣ್ಣೆ ಮತ್ತು ಸ್ವಲ್ಪ ಬೆಲ್ಲ ಸೇರಿಸಿ ದಿನಕ್ಕೆರಡು ಸಲ ತಿನ್ನುವುದರಿಂದ ಮೂಲವ್ಯಾಧಿ ಸಮಸ್ಯೆಯೂ ಶಮನವಾಗುತ್ತದೆ.

ಇದನ್ನೂ ಓದಿ: ಅಲೋವೆರಾ ಜ್ಯೂಸ್ ಕುಡಿಯುವ ಅಭ್ಯಾಸ ಬೆಳೆಸಿಕೊಂಡರೆ ಈ ರೋಗಗಳು ಮಾಯ

* ಜ್ವರ ಇದ್ದವರು ಒಂದು ಹಿಡಿಯಷ್ಟು ತುಳಸಿ ಎಲೆಯನ್ನು ಜಜ್ಜಿ ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಅದಕ್ಕೆಬೆಲ್ಲವನ್ನು ಸೇರಿಸಬೇಕು. ಇದನ್ನು ದಿನಕ್ಕೆ ಮೂರು ಬಾರಿ ನಾಲ್ಕು ಚಮಚದಂತೆ ಸೇವಿಸುವುದರಿಂದ ಜ್ವರವೂ ಕಡಿಮೆಯಾಗುತ್ತದೆ.

* ಗಂಟಲು ನೋವು ಬಾಧಿಸುತ್ತಿದ್ದರೆ, ತುಳಸಿ ಎಲೆ, ದೊಡ್ಡ ಪತ್ರೆ ಎಲೆಗಳನ್ನು ಅರೆದು, ಅರ್ಧ ಲೀಟರ್ ನೀರಿನಲ್ಲಿ ಕುದಿಸಬೇಕು. ಕುದಿಸಿದ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ದಿನಕ್ಕೆ ಮೂರು ಸಲ ಊಟಕ್ಕೂ ಮುನ್ನ ಕುಡಿಯುವುದರಿಂದ ಪರಿಣಾಮಕಾರಿಯಾಗಿದೆ.

* ಹೊಟ್ಟೆ ನೋವಿನಿಂದ ಬಳಲುತ್ತಿರುವವರು ತುಳಸಿ ರಸಕ್ಕೆ ಹಸಿಶುಂಠಿ ರಸ ಬೆರೆಸಿ ಬಿಸಿ ಮಾಡಿ, ದಿನಕ್ಕೆ ಎರಡು ಬಾರಿಯಂತೆ ನಾಲ್ಕು ಚಮಚದಷ್ಟು ಸೇವಿಸಿದರೆ ಉತ್ತಮ ಫಲಿತಾಂಶವು ಸಿಗುತ್ತದೆ.

* ತುಳಸಿ ಎಲೆ ಮತ್ತು ಬ್ರಾಹ್ಮೀ ಎಲೆಯನ್ನು ಅರೆದು ಇಸುಬು (ಹುಳುಕಡ್ಡಿ) ಇರುವ ಜಾಗಕ್ಕೆ ಲೇಪಿಸುವುದರಿಂದ ಗುಣಮುಖವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ