ಕಾಂತಿಯುತ ಚರ್ಮ ನಿಮ್ಮದಾಗಲು ದಿನಕ್ಕೆ ಎಷ್ಟು ನೀರು ಕುಡಿಯಬೇಕು?

ಕಾಂತಿಯುತ ಚರ್ಮಕ್ಕಾಗಿ ನೀವು ದಿನಕ್ಕೆ 8 ಲೋಟ ನೀರು ಕುಡಿಯಬೇಕು ಎಂಬ ಜನಪ್ರಿಯ ನಂಬಿಕೆ ಉತ್ತಮ ಮಾರ್ಗಸೂಚಿಯಾಗಿದೆ. ಆದರೆ, ಒಬ್ಬರಿಂದ ಒಬ್ಬರಿಗೆ ವೈಯಕ್ತಿಕ ಜಲಸಂಚಯನ ಅಗತ್ಯಗಳು ಬದಲಾಗುತ್ತವೆ. ಹಾಗಾದರೆ, ನಿಮ್ಮ ತ್ವಚೆಯ ಕಾಂತಿಗೆ ದಿನಕ್ಕೆ ಎಷ್ಟು ನೀರು ಸೇವಿಸಬೇಕು?

ಕಾಂತಿಯುತ ಚರ್ಮ ನಿಮ್ಮದಾಗಲು ದಿನಕ್ಕೆ ಎಷ್ಟು ನೀರು ಕುಡಿಯಬೇಕು?
ಸಾಂದರ್ಭಿಕ ಚಿತ್ರImage Credit source: iStock
Follow us
|

Updated on: Oct 22, 2023 | 5:42 PM

ನೀರು ನಮ್ಮ ದೇಹಕ್ಕೆ ಅಗತ್ಯವಾದ ಪ್ರಮುಖ ಅಂಶ. ಸಾಕಷ್ಟು ನೀರು ಕುಡಿಯುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ ಮತ್ತು ಚರ್ಮವೂ ಹೊಳಪಿನಿಂದ ಕೂಡಿರುತ್ತದೆ. ನಿಮ್ಮ ಮೈಬಣ್ಣವನ್ನು ಮತ್ತು ಮೈಕಾಂತಿಯನ್ನು ಹೆಚ್ಚಿಸಲು ನೀರು ಅತ್ಯಗತ್ಯ ಅಂಶವಾಗಿದೆ. ಆದರೆ, ಚರ್ಮದ ಕಾಂತಿ ಮತ್ತು ತ್ವಚೆಯನ್ನು ಹೈಡ್ರೇಟ್ ಮಾಡಲು ಎಷ್ಟು ನೀರು ಬೇಕೆಂಬ ಮಾಹಿತಿ ಇಲ್ಲಿದೆ. ಸಾಮಾನ್ಯವಾಗಿ ದಿನಕ್ಕೆ 2ರಿಂದ 4 ಲೀಟರ್​ವರೆಗೆ ನಮ್ಮ ದೇಹಕ್ಕೆ ನೀರು ಬೇಕಾಗುತ್ತದೆ ಎನ್ನಲಾಗುತ್ತದೆ. ನಿರ್ಜಲೀಕರಣವು ವಿವಿಧ ಚರ್ಮದ ಕಾರ್ಯಗಳನ್ನು ಅಡ್ಡಿಪಡಿಸುತ್ತದೆ. ಇದು ಶುಷ್ಕತೆ, ಫ್ಲಾಕಿನೆಸ್ ಮತ್ತು ಅಕಾಲಿಕ ವಯಸ್ಸಿಗೆ ಕಾರಣವಾಗುತ್ತದೆ.

ಅನೇಕ ಅಧ್ಯಯನಗಳು ಜಲಸಂಚಯನ ಮತ್ತು ಚರ್ಮದ ಆರೋಗ್ಯದ ನಡುವೆ ಪರಸ್ಪರ ಸಂಬಂಧವಿದೆ ಎಂದು ತಿಳಿಸಿದೆ. ಸಾಕಷ್ಟು ನೀರಿನ ಸೇವನೆಯು ನಿಮ್ಮ ಚರ್ಮವು ಮೃದುವಾಗಿ, ಸ್ವಚ್ಛವಾಗಿ ಮತ್ತು ತಾಜಾವಾಗಿರಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ನಿರ್ಜಲೀಕರಣವು ಹೆಚ್ಚಿದ ಬಾಯಾರಿಕೆ, ಗಾಢ ಹಳದಿ ಮೂತ್ರ, ಒಣಗಿದ ಬಾಯಿ, ಮತ್ತು ತಲೆತಿರುಗುವಿಕೆ ಮುಂತಾದ ಸಮಸ್ಯೆಗೆ ಕಾರಣವಾಗುತ್ತದೆ. ಇದಲ್ಲದೆ, ತೀವ್ರವಾದ ನಿರ್ಜಲೀಕರಣವು ತ್ವರಿತ ಹೃದಯ ಬಡಿತ, ಗುಳಿಬಿದ್ದ ಕಣ್ಣುಗಳು ಮತ್ತು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ರಾತ್ರಿ ಮಲಗುವಾಗ ನೀರು ಕುಡಿಯುತ್ತೀರಾ? ಇದರಿಂದ ಏನಾಗುತ್ತೆ?

ಕಾಂತಿಯುತ ಚರ್ಮಕ್ಕಾಗಿ ನೀವು ದಿನಕ್ಕೆ 8 ಲೋಟ ನೀರು ಕುಡಿಯಬೇಕು ಎಂಬ ಜನಪ್ರಿಯ ನಂಬಿಕೆ ಉತ್ತಮ ಮಾರ್ಗಸೂಚಿಯಾಗಿದೆ. ಆದರೆ, ಒಬ್ಬರಿಂದ ಒಬ್ಬರಿಗೆ ವೈಯಕ್ತಿಕ ಜಲಸಂಚಯನ ಅಗತ್ಯಗಳು ಬದಲಾಗುತ್ತವೆ. ವಯಸ್ಸು, ಲಿಂಗ, ಹವಾಮಾನ ಮತ್ತು ದೈಹಿಕ ಚಟುವಟಿಕೆಯ ಮಟ್ಟಗಳಂತಹ ಅಂಶಗಳ ಆಧಾರದ ಮೇಲೆ ನಾವು ಎಷ್ಟು ನೀರು ಕುಡಿಯಬೇಕೆಂಬುದು ಅವಲಂಬಿಸಿರುತ್ತದೆ. ನಿಮ್ಮ ದೇಹವನ್ನು ಹೈಡ್ರೀಕರಿಸಲು ದಿನಕ್ಕೆ 8 ಗ್ಲಾಸ್ ನೀರನ್ನು ಕುಡಿಯಲೇಬೇಕೆಂಬ ನಿಯಮಕ್ಕೆ ಕಟ್ಟುನಿಟ್ಟಾಗಿ ಅಂಟಿಕೊಳ್ಳಬೇಕಾಗಿಲ್ಲ ಎಂದು ಅಧ್ಯಯನಗಳು ಸೂಚಿಸುತ್ತವೆ. ನಿಮಗೆ ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯಿರಿ. ನಿಮ್ಮ ದೇಹಕ್ಕೆ ಯಾವಾಗ ನೀರು ಬೇಕೆನಿಸುತ್ತದೆಯೋ ಆಗ ಕುಡಿದರೆ ಸಾಕು.

ಇದನ್ನೂ ಓದಿ: ಒಣಗಿದ ಚರ್ಮಕ್ಕೆ ಹೊಳಪು ನೀಡಲು ಸೌತೆಕಾಯಿ ಫೇಸ್​ಪ್ಯಾಕ್ ಹಚ್ಚಿ ನೋಡಿ

“ದಿನಕ್ಕೆ ಎಂಟು ಗ್ಲಾಸ್” ನಿಯಮವು ಉತ್ತಮ ಆರಂಭದ ಹಂತವಾಗಿದ್ದರೂ ಎಲ್ಲರಿಗೂ ಇದು ಅನ್ವಯವಾಗುವುದಿಲ್ಲ. ಕೆಲವರ ದೇಹಕ್ಕೆ ನಾಲ್ಕೇ ಗ್ಲಾಸ್ ನೀರು ಸಾಕಾಗುತ್ತದೆ. ನಮ್ಮ ದೇಹಕ್ಕೆ ಬೇಕಾದಷ್ಟು ನೀರಿನ ಸೇವನೆಯು ತ್ವಚೆಯ ಕಾಂತಿ, ಸಮತೋಲಿತ ಆಹಾರ, ದೈಹಿಕ ಚಟುವಟಿಕೆಯೊಂದಿಗೆ ಸಂಯೋಜಿಸಲ್ಪಟ್ಟಿದೆ. ಸರಿಯಾದ ನಿದ್ರೆ ಮಾಡುವುದರಿಂದಲೂ ಸುಂದರವಾದ ಚರ್ಮವನ್ನು ಪಡೆಯಬಹುದು. ನೀರು ಅತ್ಯಗತ್ಯವಾಗಿದ್ದರೂ, ಕಾಂತಿಯುತ ಚರ್ಮಕ್ಕೆ ಇದು ಒಂದೇ ಪರಿಹಾರವಲ್ಲ ಎಂದು ಸಂಶೋಧನೆ ಹೇಳುತ್ತದೆ. ಸಮತೋಲಿತ ಆಹಾರ, ಸರಿಯಾದ ತ್ವಚೆಯ ದಿನಚರಿ ಮತ್ತು ಇತರ ಹಲವು ಅಂಶಗಳು ನಿಮ್ಮ ಚರ್ಮದ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ.

ನಿಮ್ಮ ಚರ್ಮವು ಎಣ್ಣೆಯುಕ್ತ, ಶುಷ್ಕ ಅಥವಾ ಎರಡರ ಸಂಯೋಜನೆಯೂ ಆಗಿರಬಹುದು. ಇದಕ್ಕೆ ತಕ್ಕಂತೆ ನಿಮ್ಮ ತ್ವಚೆಯ ಆರೈಕೆಯನ್ನು ರೂಢಿಸಿಕೊಳ್ಳಿ. ಯುವಿ ವಿಕಿರಣವು ವಯಸ್ಸಾದ ವೇಗವನ್ನು ಹೆಚ್ಚಿಸುತ್ತದೆ ಮತ್ತು ಚರ್ಮದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. UV ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಮರೆಯದಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ