AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navratri 2023: ಆಯುಧ ಪೂಜೆಯ ಹಿನ್ನೆಲೆಯೇನು? ಶುಭ ಮೂಹೂರ್ತ ಮತ್ತು ಮಹತ್ವದ ಬಗ್ಗೆ ತಿಳಿದುಕೊಳ್ಳಿ

ಐತಿಹಾಸಿಕವಾಗಿ ಆಯುಧ ಪೂಜೆಯು, ರಾಜ ಮಹಾರಾಜರ ಕಾಲದಿಂದಲೂ ಆಯುಧಗಳನ್ನು ಪೂಜಿಸಲು ಮೀಸಲಾಗಿರುವ ದಿನವಾಗಿತ್ತು. ಈ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ. ಆದರೆ, ಆಧುನಿಕ ರೂಪದಲ್ಲಿ ಜನರು ಕಾರು, ಮೋಟಾರ್ ಬೈಕ್‌, ಮತ್ತು ಸ್ಕೂಟರ್‌ ಗಳನ್ನು ಒಳಗೊಂಡಂತೆ ತಮ್ಮ ವಾಹನಗಳನ್ನು ಪೂಜಿಸುತ್ತಾರೆ. ಹಾಗಾದರೆ ಈ ದಿನದ ಹಿನ್ನೆಲೆಯೇನು? ಶುಭ ಮೂಹೂರ್ತ ಯಾವಾಗ? ತಿಳಿದುಕೊಳ್ಳಿ.

Navratri 2023: ಆಯುಧ ಪೂಜೆಯ ಹಿನ್ನೆಲೆಯೇನು? ಶುಭ ಮೂಹೂರ್ತ ಮತ್ತು ಮಹತ್ವದ ಬಗ್ಗೆ ತಿಳಿದುಕೊಳ್ಳಿ
Ayudha PujaImage Credit source: dribbble.com
ಪ್ರೀತಿ ಭಟ್​, ಗುಣವಂತೆ
| Edited By: |

Updated on: Oct 22, 2023 | 5:51 PM

Share

ಆಯುಧ ಪೂಜೆಯನ್ನು ನವರಾತ್ರಿ ಹಬ್ಬದ 9ನೇ ದಿನ ಅಂದರೆ ಮಹಾನವಮಿಯಂದು ಆಚರಿಸಲಾಗುತ್ತದೆ. ಆಯುಧ ಪೂಜೆಯನ್ನು ಶಸ್ತ್ರಪೂಜೆ ಮತ್ತು ಅಸ್ತ್ರಪೂಜೆ ಎಂದೂ ಕರೆಯುತ್ತಾರೆ. ಐತಿಹಾಸಿಕವಾಗಿ ಆಯುಧ ಪೂಜೆಯು, ರಾಜ ಮಹಾರಾಜರ ಕಾಲದಿಂದಲೂ ಆಯುಧಗಳನ್ನು ಪೂಜಿಸುವ ಮೀಸಲಾಗಿರುವ ದಿನವಾಗಿತ್ತು. ಈ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ. ಆದರೆ, ಆಧುನಿಕ ರೂಪದಲ್ಲಿ ಜನರು ಕಾರು, ಮೋಟಾರ್ ಬೈಕ್‌, ಮತ್ತು ಸ್ಕೂಟರ್‌ ಗಳನ್ನು ಒಳಗೊಂಡಂತೆ ತಮ್ಮ ವಾಹನಗಳನ್ನು ಪೂಜಿಸುತ್ತಾರೆ. ಹಾಗಾಗಿ ಆಯುಧ ಪೂಜೆಯ ಜೊತೆ ವಾಹನ ಪೂಜೆಯನ್ನು ಮಾಡಲಾಗುತ್ತದೆ. ಇನ್ನು ಕೆಲವರು ವಿಜಯ ದಶಮಿಯಂದು ಕೂಡ ವಾಹನ ಪೂಜೆ ಮಾಡುತ್ತಾರೆ. ಹಾಗಾದರೆ ಈ ದಿನದ ಹಿನ್ನೆಲೆಯೇನು? ಶುಭ ಮೂಹೂರ್ತ ಯಾವಾಗ? ತಿಳಿದುಕೊಳ್ಳಿ.

ಆಯುಧ ಪೂಜೆಯ ಹಿನ್ನೆಲೆಯೇನು?

ಆಶ್ವಿಜ ಅಥವಾ ಅಶ್ವಿನ ಮಾಸದ ಶುಕ್ಲಪಕ್ಷದ ನವಮಿಯ ದಿನ ಶಸ್ತ್ರಾಸ್ತ್ರ, ಹಯ, ಗಜ, ವಾಹನ ಹಾಗೂ ಯಂತ್ರಗಳ ಪೂಜೆಯನ್ನು ಮಾಡಬೇಕು ಎನ್ನಲಾಗುತ್ತದೆ. ಏಕೆಂದರೆ ಪಾಂಡವರು ತಮ್ಮ ಅಜ್ಞಾತ ವಾಸದ ಸಮಯದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನೀ ಮರದಲ್ಲಿ ಬಚ್ಚಿಟ್ಟಿರುತ್ತಾರೆ. ಅಜ್ಞಾತ ವಾಸ ಕಳೆದ ವಿಜಯ ದಶಮಿಯಂದು ಬನ್ನೀ ಮರದಲ್ಲಿ ಇಟ್ಟಿದ್ದ ಆಯುಧಗಳನ್ನು ತೆಗೆದು ಪೂಜಿಸಿ, ನಂತರ ವಿರಾಟ ರಾಜನ ಶತ್ರುಗಳಾದ ಕೌರವರ ಮೇಲೆ ವಿಜಯವನ್ನು ಸಾಧಿಸಿದರು ಎಂಬ ನಂಬಿಕೆ ಇದೆ. ಆದರೆ ಪೌರಾಣಿಕ ಹಿನ್ನೆಲೆಯ ಪ್ರಕಾರ, ಮೂರು ತ್ರಿಮೂರ್ತಿಗಳ ಶಕ್ತಿ ಪಡೆದ ದುರ್ಗೆಯು ಚಾಮುಂಡಿಯ ಅವತಾರವನ್ನು ತಾಳಿ ದುಷ್ಟನಾದ ಮಹಿಷಾಸುರನನ್ನು ಸಂಹಾರ ಮಾಡುತ್ತಾಳೆ. ಆ ಸಂದರ್ಭದಲ್ಲಿ ದೇವಿ ಉಪಯೋಗಿಸಿದ ಆಯುಧಗಳನ್ನು ಆಕೆ ಮತ್ತೆ ಬಳಸದೇಯೇ ಭೂ ಲೋಕದಲ್ಲಿ ಎಸೆದು ಹೋಗುತ್ತಾಳೆ. ನಂತರ ದೇವಿ ಎಸೆದ ಆ ಆಯುಧಗಳನ್ನು ಮಾನವ ಕುಲದವರು ತಂದು ಪೂಜಿಸಲು ಆರಂಭಿಸಿದರು ಇದೇ ಮುಂದೆ ಆಯುಧ ಪೂಜೆಯಾಗಿ ಆಚರಣೆಗೆ ಬಂತು ಎನ್ನಲಾಗುತ್ತದೆ.

ದುರ್ಗಾದೇವಿಯು ದುಷ್ಟ ಶಕ್ತಿಗಳ ವಧೆಗಾಗಿ ಅಷ್ಟ ಭುಜಗಳನ್ನು ಕೂಡಿದವಳಾಗಿ ಅವತರಿಸಿದ್ದಾಳೆ. ಹಾಗೂ ತನ್ನ ಪ್ರತಿಯೊಂದು ಕೈ ಗಳಲ್ಲೂ ವಿಭಿನ್ನ ಆಯುಧಗಳನ್ನು ಹಿಡಿದು ಕೊಂಡಿದ್ದಾಳೆ. ಹಾಗಾಗಿ ಅವಳು ಧರಿಸಿರುವ ಆಯುಧಗಳಾದ ಬಾಣ, ಗುರಾಣಿ,ಕತ್ತಿ, ಬಿಲ್ಲು, ಶೂಲ, ಶಂಖ, ಚಕ್ರ, ಗದೆಗಳನ್ನು ಮಹಾನವಮಿ ಯಂದು ಪೂಜಿಸಬೇಕು ಎನ್ನಲಾಗುತ್ತದೆ. ಹಿಂದಿನ ಕಾಲದಲ್ಲಿ ರಾಜರು ಆಳ್ವಿಕೆ ನೆಡೆಸಿದ ಆಯುಧಗಳು ಅಥವಾ ಪೂರ್ವಜರು ಪೂಜೆಗಿಡುವ ಶಸ್ತ್ರಾಸ್ತ್ರ ಗಳಿದ್ದಲ್ಲಿ ಅದನ್ನು ಈ ದಿನ ಪೂಜೆಗೆ ಇಡುವುದು ವಾಡಿಕೆ.

ಇದನ್ನೂ ಓದಿ: ಶೃಂಗೇರಿಯ ಶಾರದಾ ಪೀಠಕ್ಕೆ ಭಕ್ತರು ಸಲ್ಲಿಸಬೇಕಾದ ಪೂಜೆ ಮತ್ತು ಅದರ ಫಲಾಫಲಗಳೇನು?

ಆಯುಧ ಪೂಜಾ ಮುಹೂರ್ತ ಮತ್ತು ಪೂಜಾ ಸಮಯದಲ್ಲಿ ಹೇಳಬೇಕಾದ ಮಂತ್ರ:

2023 ರ ಆಯುಧ ಪೂಜಾ ಮುಹೂರ್ತ: ಅಕ್ಟೋಬರ್‌ 23 ರಂದು ಮಧ್ಯಾಹ್ನ 01.58 ರಿಂದ ಸಂಜೆ 04.43 ರವರೆಗೆ.

-ಸರ್ವಾಯುಧಾನಾಂ ಪ್ರಥಮಂ ನಿರ್ಮಿತಾಸಿ ಪಿನಾಕಿನಾ | ಶೂಲಾಯುಧಾನ್ ವಿನಿಷ್ಕೃತ್ಯ ಕೃತ್ವಾ ಮುಷ್ಠಿಗ್ರಹಂ ಶುಭಂ || ಛುರಿಕೆ ರಕ್ಷ ಮಾಂ ನಿತ್ಯಂ ಶಾಂತಿ ಯಚ್ಛ ನಮೋಸ್ತು ತೇ ||

-ರಕ್ಷಾಂಗಾನಿ ಗಜಾನ್ ರಕ್ಷ ರಕ್ಷ ವಾಜಿಧನಾನಿ ಚ | ಮಮ ದೇಹಂ ಸದಾ ರಕ್ಷ ಕಟ್ಟಾರಕ ನಮೋಸ್ತುತೇ ||

-ಪುಣ್ಯಸ್ತ್ವಂ ಶಂಖ ಪುಣ್ಯಾನಾಂ ಮಂಗಲಾನಾಂ ಚ ಮಂಗಲಂ | ವಿಷ್ಣುನಾ ವಿಧೃತೋ ನಿತ್ಯಮತಃ ಶಾಂತಿಂ ಪ್ರಯಚ್ಛ ಮೇ ||

ಆಧ್ಯಾತ್ಮಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: