AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಅರಮನೆಯಲ್ಲಿಂದು ಗತವೈಭವದ ಆಯುಧಪೂಜೆ, ಹೇಗೆಲ್ಲ ನಡೆಯಲಿದೆ? ಇಲ್ಲಿದೆ ಸಂಪೂರ್ಣ ವಿವರ

ದಸರಾ ಅಂದ್ರೆ ರಾಜ ಪರಂಪರೆ, ಗತಕಾಲದ ವೈಭವ.. ಸಾಂಸ್ಕೃತಿಕ ಗರಿಮೆಯ ಸಂಕೇತ.. ಮೈಸೂರು ಅರಮನೆಯಲ್ಲಿ ಇಂದು ನಡೆಯುತ್ತಿರುವ ಆಯುಧಪೂಜೆಯ ಆಚರಣೆಯೇ ಇದಕ್ಕೆ ಸಾಕ್ಷಿ.. ಇವತ್ತು ಅರಮನೆಯಲ್ಲಿ ಗತಕಾಲದ ವೈಭವ ಮತ್ತೊಮ್ಮೆ ಮರುಕಳಿಸಲಿದೆ. ಮೈಸೂರು ಅರಮನೆಯಲ್ಲಿಂದು ಆಯುಧಪೂಜೆ ಹೇಗೆಲ್ಲ ನಡೆಯಲಿದೆ? ಇಲ್ಲಿದೆ ಸಂಪೂರ್ಣ ವಿವರ

ಮೈಸೂರು ಅರಮನೆಯಲ್ಲಿಂದು ಗತವೈಭವದ ಆಯುಧಪೂಜೆ, ಹೇಗೆಲ್ಲ ನಡೆಯಲಿದೆ? ಇಲ್ಲಿದೆ ಸಂಪೂರ್ಣ ವಿವರ
ಮೈಸೂರು ಅರಮನೆ
Follow us
ರಾಮ್​, ಮೈಸೂರು
| Updated By: ರಮೇಶ್ ಬಿ. ಜವಳಗೇರಾ

Updated on: Oct 23, 2023 | 6:25 AM

ಮೈಸೂರು, (ಅಕ್ಟೋಬರ್ 23): ಇಂದು ನಾಡೆನೆಲ್ಲೆಡೆ ಆಯುಧಪೂಜೆಯ  (Ayudha Puja) ಸಂಭ್ರಮ. ನಾಳೆ (ಅಕ್ಟೋಬರ್ 24) ಮೈಸೂರಿನಲ್ಲಿ ತ್ರಿಬಲ್ ಧಮಾಕ. ಒಂದು ಕಡೆ ಮೈಸೂರು ಅರಮನೆಯಲ್ಲಿ ಗತಕಾಲದ ವೈಭವದ ಅನಾವರಣ ಮತ್ತೊಂದು ಕಡೆ ಲೋಹದ ಹಕ್ಕಿಗಳ ಕಲರವ ಜೋರಾಗಿರಲಿದೆ. ನಂತರ ಪಂಜಿನ‌ ಕವಾಯತು ಸಡಗರ. ಇದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಹೌದು..ಈಗಾಗಲೇ ಬೆಳಗ್ಗೆ 5 ಗಂಟೆ 30 ನಿಮಿಷಕ್ಕೆ ಚಂಡಿ‌ಹೋಮದೊಂದಿಗೆ ಮೈಸೂರು ಅರಮನೆಯಲ್ಲಿ ಪೂಜೆಗಳು ಆರಂಭಗೊಂಡಿವೆ. ಈಗಾಗಲೇ ಆನೆ ಬಾಗಿಲಿಗೆ ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಹಸು ಆಗಮನವಾಗಿದೆ.

ಅಷ್ಟೇ ಅಲ್ಲ ಬೆಳಗ್ಗೆ 6 ಗಂಟೆ 15 ನಿಮಿಷದ ವೇಳೆಗೆ ಖಾಸಾ ಆಯುಧಗಳನ್ನು ಅರಮನೆಯ ಕೋಡಿ ಸೋಮೇಶ್ವರ ದೇವಾಲಯಕ್ಕೆ ತರಲಾಗಿದೆ. ಕೆಲವೇ ಹೊತ್ತಲ್ಲಿ ಖಾಸಾ ಆಯುಧಗಳನ್ನು ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆಗೆ ವಾಪಸ್ ಕೊಂಡೊಯ್ಯಲಾಗುತ್ತದೆ. ನಂತರ ಕಲ್ಯಾಣಮಂಟಪಕ್ಕೆ ಆಯುಧಗಳನ್ನು ತೆಗೆದುಕೊಂಡು ಹೋಗಲಾಗುತ್ತೆ. ಹಾಗಿದ್ರೆ ಆಯುಧಪೂಜೆ ಅಂಗವಾಗಿ ಅರಮನೆಯಲ್ಲಿ ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ ಎನ್ನುವುದನ್ನು ನೋಡೋದಾದ್ರೆ.

ಬೆಳಗ್ಗೆ 9 ಗಂಟೆ 30 ನಿಮಿಷಕ್ಕೆ ಚಂಡಿಹೋಮ ಪೂರ್ಣಾಹುತಿ ಕಾರ್ಯಕ್ರಮ ಮುಕ್ತಾಯವಾಗಲಿದೆ. ನಂತರ ಬೆಳಗ್ಗೆ 11.45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟಣದ ಆನೆ, ಕುದುರೆ, ಪಟ್ಟದ ಹಸು ಆಗಮಿಸಲಿವೆ. ಮಧ್ಯಾಹ್ನ 12.20ರಿಂದ ಮೈಸೂರು ಅರಮನೆಯಲ್ಲಿ ಆಯುಧ‌ಪೂಜೆ ಶುರುವಾಗಲಿದೆ. ಮಧ್ಯಾಹ್ನ 12 ಗಂಟೆ 20 ನಿಮಿಷದಿಂದ ಮಧ್ಯಾಹ್ನ 12 ಗಂಟೆ 45 ನಿಮಿಷದವರೆಗೆ ಆಯುಧ ಪೂಜೆ ನಡೆಯಲಿದೆ. ಮೈಸೂರು ಅರಮನೆಯ ಕಲ್ಯಾಣ ಮಂಟಪದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಂಪ್ರದಾಯದಂತೆ ಆಯುಧಗಳಿಗೆ ಪೂಜೆ ಸಲ್ಲಿಸಲಿದ್ದಾರೆ. ಸಂಜೆ ಯದುವೀರರಿಂದ ಖಾಸಗಿ ದರ್ಬಾರ್ ನಡೆಯಲಿದೆ. ಖಾಸಗಿ ದರ್ಬಾರ್ ನಂತರ ಸಿಂಹ ವಿಸರ್ಜನೆ ಮಾಡಲಾಗುತ್ತೆ. ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ ಮಾಡಲಾಗುತ್ತೆ. ನಂತರ ಯದುವೀರರು ಅಂಬಾವಿಲಾಸದಲ್ಲಿ ದಪ್ತಾರ್ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂತಿಮವಾಗಿ ಮಹಾಸನ್ನಿಧಾನದಲ್ಲಿ ಅಮಲದೇವಿ ದರ್ಶನ ಪಡೆಯಲಿದ್ದಾರೆ. ಈ ಮೂಲಕ ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಮುಕ್ತಾಯಗೊಳ್ಳಲಿದೆ.

ಬನ್ನಿಮಂಟಪದಲ್ಲಿ ನಡೆಯಲಿದೆ ರೋಮಾಂಚಕ ಏರ್‌ಶೋ

ಇನ್ನು ಇವತ್ತು ಮೈಸೂರಿನಲ್ಲಿ ಲೋಹದ ಹಕ್ಕಿಗಳ ಕಲರವ ಜೋರಾಗಿರಲಿದೆ. ನಿನ್ನೆ ಏರ್ ಶೋ ರಿಹರ್ಸಲ್‌ ನಡೆದಿತ್ತು. ಇಂದು ಪೂರ್ಣ ಪ್ರಮಾಣದಲ್ಲಿ ವೈಮಾನಿಕ ಪ್ರದರ್ಶನ ನಡೆಯಲಿದೆ. ಬನ್ನಿಮಂಟಪ ಮೈದಾನದಲ್ಲಿ ಆಯೋಜಿಸಿರುವ ಏರ್ ಶೋಗೆ ಸಿಎಂ ಸಿದ್ದರಾಮಯ್ಯ ಸಾಕ್ಷಿಯಾಗಲಿದ್ದಾರೆ. ಭಾರತೀಯ ವಾಯುಪಡೆ ವತಿಯಿಂದ ಏರ್ ಶೋ ನಡೆಯುತ್ತಿದ್ದು, ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬನ್ನಿ ಮಂಟಪದಲ್ಲಿ ಯುದ್ದ ವಿಮಾನಗಳು ಪ್ರದರ್ಶನ ನಡೆಯಲಿದೆ. ಸೂರ್ಯ ಕಿರಣ್ ತಂಡ, ಏರ್ ಶೋಗೆ ಸಿದ್ದತೆ ನಡೆದಿದೆ. ತೇಜಸ್ ಸೇರಿದಂತೆ ಹಲವು ವಿಮಾನಗಳು ಕಸರತ್ತು ನಡೆಸಲಿವೆ. ಇದಾದ ನಂತರ ಅಲ್ಲೇ ಪಂಜಿನ ಕವಾಯತು ರಿಹರ್ಸಲ ಕೂಡ ನಡೆಯಲಿದೆ.

ಮುಖ್ಯಮಂತ್ರಿ ಇಂದಿನಿಂದ 3 ದಿನ ಮೈಸೂರು ಪ್ರವಾಸ

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಂಗಳೂರಿನಿಂದ ರಸ್ತೆ ಮೂಲಕ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಂಜೆ 4 ಗಂಟೆಗೆ ನಗರದ ಬನ್ನಿಮಂಟಪದದಲ್ಲಿ ನಡೆಯಲಿರುವ ವೈಮಾನಿಕ ಪ್ರದರ್ಶನ ವೀಕ್ಷಿಸಲಿದ್ದಾರೆ. ಇನ್ನು ನಾಳೆ (ಅಕ್ಟೋಬರ್ 24) ಬೆಳಗ್ಗೆ 8 ಗಂಟೆಗೆ ಸಿದ್ದರಾಮಯ್ಯ, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಲಿದ್ದಾರೆ. ತದ ನಂತರ ಬೆಳಗ್ಗೆ 9 ಗಂಟೆ 30ನಿಮಿಷಕ್ಕೆ ಚಾಮುಂಡಿಬೆಟ್ಟಕ್ಕೆ ತೆರಳಿ ನಾಡದೇವಿಗೆ ಪೂಜೆ ಸಲ್ಲಿಸಲಿದ್ದಾರೆ. ನಾಳೆ ಮಧ್ಯಾಹ್ನ 1.46ಕ್ಕೆ ಮೈಸೂರು ಅರಮನೆಯಲ್ಲಿ ನಂದಿಧ್ವಜ ಸ್ಥಂಭಕ್ಕೆ ಪೂಜೆ ಸಲ್ಲಿಸಲಿದ್ದು, ನಾಳೆ ಸಂಜೆ 4.40ಕ್ಕೆ ತಾಯಿ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆಯೊಂದಿಗೆ ವಿಜಯದಶಮಿ‌ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ನಾಳೆ ರಾತ್ರಿ 7.30ಕ್ಕೆ ಪಂಜಿನ ಕವಾಯತು ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ.

ಒಟ್ಟಾರೆ ಸಾಂಸ್ಕೃತಿಕ ಗರಿ ಮೈಸೂರಿನಲ್ಲಿ ಆಯುಧ ಪೂಜೆಯ ಜೊತೆಗೆ ಲೋಹದ ಹಕ್ಕಿಗಳ ಹಾರಾಟದ ಕಲರವ ಹಾಗೂ ಪಂಜಿನ ಕವಾಯತು ದಸರಾ ಸಂಭ್ರಮವನ್ನ ಇಮ್ಮಡಿಗೊಳಿಸಲಿದೆ.

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ