Navratri 2023: ಒಂಭತ್ತನೇ ಅವತಾರಿಣಿಯಾದ ಸಿದ್ಧಿಧಾತ್ರಿಯನ್ನು ಒಲಿಸಿಕೊಂಡರೆ ಸಿಗುವ ಫಲಗಳೇನು?
ನವರಾತ್ರಿ ಹಬ್ಬದ 9ನೇ ದಿನದಂದು ಅಂದರೆ ನವರಾತ್ರಿಯ ಕೊನೆಯ ದಿನದಂದು ಭಕ್ತರು ದೇವಿ ದುರ್ಗೆಯ ಒಂಬತ್ತು ಅಭಿವ್ಯಕ್ತಿಗಳಲ್ಲಿ ಒಂದಾದ ಸಿದ್ಧಿದಾತ್ರಿ ದೇವಿಯನ್ನು ಪೂಜಿಸುತ್ತಾರೆ. ಜೊತೆಗೆ ಮಹಾ ನವಮಿಯ ದಿನ ತಾಯಿ ಚಾಮುಂಡೇಶ್ವರಿಯನ್ನು ಮಹಿಷ ಮರ್ದಿನಿ ಎಂಬ ಹೆಸರಿನಿಂದಲೂ ಪೂಜಿಸಲಾಗುತ್ತದೆ.
ನವಮಿ ಅಥವಾ ಮಹಾ ನವಮಿಯಂದು, ದುರ್ಗೆಯು ಒಂಭತ್ತನೇ ಅವತಾರವಾದ ಸಿದ್ಧಿಧಾತ್ರಿಯ ರೂಪದಲ್ಲಿರುತ್ತಾಳೆ. ನವರಾತ್ರಿ ಹಬ್ಬದ 9 ದಿನದಂದು ಅಂದರೆ ನವರಾತ್ರಿಯ ಕೊನೆಯ ದಿನದಂದು ಭಕ್ತರು ದೇವಿ ದುರ್ಗೆಯ ಒಂಬತ್ತು ಅಭಿವ್ಯಕ್ತಿಗಳಲ್ಲಿ ಒಂದಾದ ಸಿದ್ಧಿದಾತ್ರಿ ದೇವಿಯನ್ನು ಪೂಜಿಸುತ್ತಾರೆ. ಜೊತೆಗೆ ಮಹಾ ನವಮಿಯ ದಿನ ತಾಯಿ ಚಾಮುಂಡೇಶ್ವರಿಯನ್ನು ಮಹಿಷ ಮರ್ದಿನಿ ಎಂಬ ಹೆಸರಿನಿಂದಲೂ ಪೂಜಿಸಲಾಗುತ್ತದೆ. ಪುರಾಣದ ಕತೆಗಳ ಪ್ರಕಾರ ತಾಯಿಯು ಮಹಿಷಾಸುರನನ್ನು ಮರ್ದನ ಮಾಡಿ ವಿಜಯ ಸಾಧಿಸುವ ಹಬ್ಬವೇ ವಿಜಯ ದಶಮಿ. ಅರ್ಥಾತ್ ಮಹಾ ನವಮಿ. ಒಂಭತ್ತು ದಿನಗಳ ಕಾಲ ಯುದ್ಧ ಮಾಡುವ ತಾಯಿಯು, ಕೊನೆಯ ದಿನದಂದು ಮಹಿಷನನ್ನು ಮರ್ಧನ ಮಾಡುತ್ತಾಳೆ.
ತಾಯಿ ಸಿದ್ಧಿದಾತ್ರಿಯು ಕೆಂಪು ಸೀರಿಯುಟ್ಟು ಸಿಂಹದ ಮೇಲೆ ಕುಳಿತಿರುತ್ತಾಳೆ. ಆಕೆಗೆ ನಾಲ್ಕು ಕೈಗಳಿವೆ. ಎಡ ಭಾಗದ ಒಂದು ಕೈನಲ್ಲಿ ಕಮಲ, ಮತ್ತೊಂದು ಕೈನಲ್ಲಿ ಶಂಕವಿದೆ. ಬಲಗೈನಲ್ಲಿ ಗಧೆ ಮತ್ತು ಚಕ್ರವಿದೆ. ಆಕೆಯು ಕಮಲದ ಹೂವಿನ ಕಡೆಗೆ ನೋಡುತ್ತಿರುತ್ತಾಳೆ. ಸಂಪೂರ್ಣವಾಗಿ ಅರಳಿದ ಕಮಲದ ಮೇಲೆ ಕುಳಿತಿರುವ, ಮಾತೃ ದೇವಿಯ ಈ ಅವತಾರವನ್ನು ನಿರಾಕಾರ ಆದಿಶಕ್ತಿ ಎಂದು ಶ್ಲಾಘಿಸಲಾಗುತ್ತದೆ, ಈಕೆಯನ್ನು ಶಿವನು ಸಹ ಪೂಜಿಸುತ್ತಾನೆ. “ಸಿದ್ಧಿ” ಎಂದರೆ ಪರಿಪೂರ್ಣತೆ “ದಾತ್ರಿ” ಎಂದರೆ “ಕೊಡುವವಳು” ಆದ್ದರಿಂದ ಆಕೆಯನ್ನು ಮಾತಾ ಸಿದ್ಧಿದಾತ್ರಿ ಎಂದು ಬಣ್ಣಿಸಲಾಗುತ್ತದೆ. ಹೀಗೆ ನವರಾತ್ರಿಯ ಒಂಭತ್ತೂ ದಿನಗಳಲ್ಲಿ ನವದುರ್ಗೆಯರನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಜಗತ್ತಿನಲ್ಲಿ ಯಾವಾಗ ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ ಅಥವಾ ಅವರನ್ನು ಹಿಂಸಿಸುತ್ತಾರೆಯೋ, ಆ ಸಂದರ್ಭದಲ್ಲಿ ದೇವಿಯು ಧರ್ಮಸಂಸ್ಥಾಪನೆಗಾಗಿ ಮತ್ತೆ ಅವತಾರ ತಾಳುತ್ತಾಳೆ ಎಂದು ನಂಬಲಾಗಿದೆ.
ಸಿದ್ಧಿದಾತ್ರಿ ದೇವಿಯ ಪೂಜಾ ಮಹತ್ವವೇನು?
ತಾಯಿಯ ಆರಾಧನೆಯು ನಮ್ಮ ಮನಸ್ಸಿನಲ್ಲಿರುವ ಅಜ್ಞಾನವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಪುರಾಣ ಗ್ರಂಥಗಳ ಪ್ರಕಾರ ಜಗತ್ತಿನ ಎಂಟು ಸಿದ್ಧಿಗಳೆಂದರೆ ಅನಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಕ್ಯಾಮ್ಯ, ಇನ್ಶಿತ್ವ, ವಶಿತ್ವ. ನವದುರ್ಗೆಗಳಲ್ಲಿ ತಾಯಿ ಸಿದ್ಧಿದಾತ್ರಿಯು ಈ ಎಲ್ಲ ಅದ್ಭುತ ಅಂಶಗಳನ್ನು ಹೊಂದಿದ್ದಾಳೆ. ಹಾಗಾಗಿ ತಾಯಿ ಸಿದ್ಧತಾತ್ರಿಯ ಕೃಪೆಯಿಂದ ಭಕ್ತರು ತಮ್ಮ ನಿರ್ವಾಣ ಚಕ್ರದಲ್ಲಿ ಇರುವ ಶಕ್ತಿಯನ್ನು ಪಡೆಯುತ್ತಾರೆ. ಇದೆಲ್ಲದರ ಜೊತೆಗೆ ಸಿದ್ಧಿದಾತ್ರಿ ದೇವಿಯನ್ನು ಕೇತು ಗ್ರಹವನ್ನು ಆಳುವ ದೇವತೆ ಎಂದು ಪರಿಗಣಿಸಲಾಗುತ್ತದೆ. ಸಿದ್ಧಿದಾತ್ರಿ ದೇವಿಯ ಪೂಜೆ ಮಾಡುವುದರಿಂದ ಜಾತಕದಲ್ಲಿರುವ ಕೇತುವಿನ ಕೆಟ್ಟ ಪರಿಣಾಮಗಳನ್ನು ನಿವಾರಣೆ ಸಹಾಯ ಮಾಡುತ್ತದೆ. ನಕಾರಾತ್ಮಕ ಆಲೋಚನೆಗಳನ್ನು ಧನಾತ್ಮಕವಾಗಿ ಬದಲಿಸುವ ಶಕ್ತಿಯು ಆಕೆಗಿದೆ ಎನ್ನುವ ನಂಬಿಕೆಯಿದೆ.
ಇದನ್ನೂ ಓದಿ: ನವರಾತ್ರಿಯ ಅಷ್ಟಮಿ, ನವಮಿಯಂದು ಕನ್ಯಾ ಪೂಜೆ ಮಾಡಲು ಕಾರಣವೇನು?
ಸಿದ್ಧಿದಾತ್ರಿ ಆಶೀರ್ವಾದ ಕೋರುವ ಪೂಜಾ ಮಂತ್ರಗಳು:
– ಓಂ ದೇವಿ ಸಿದ್ಧಿಧಾತ್ರಿಯೈ ನಮಃ
– ಸಿದ್ಧಗಂಧರ್ವಯಕ್ಷಾದ್ಯೈರಸುರೈರಮರೈರಪಿ ಸೇವ್ಯಮಾನಾ ಸದಾ ಭೂಯಾತ್ಸಿದ್ಧಿದಾ ಸಿದ್ಧಿದಾಯಿನೀ
– ಯಾ ದೇವಿ ಸರ್ವಭುತೇಶ್ವರ ಸಿದ್ಧಿಧಾತ್ರಿ ರೂಪನೇ ಸಂಹಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
-ವಂದೇ ವಾಂಛಿತ ಮನೋರಥಾರ್ಥ ಚಂದ್ರಾರ್ಘಕೃತ ಶೇಖರಮ್ ಕಮಲಸ್ಥಿತಾಂ ಚತುರ್ಭುಜಾ ಸಿದ್ಧಿದಾತ್ರೀ ಯಶಸ್ವನೀಮ್
-ಸ್ವರ್ಣಾವರ್ಣ ನಿರ್ವಾಣಚಕ್ರಸ್ಥಿತಾಂ ನವಮ್ ದುರ್ಗಾ ತ್ರಿನೇತ್ರಮ್ ಶಖ, ಚಕ್ರ, ಗದಾ, ಪದ, ಧರಂ ಸಿದ್ಧಿದಾತ್ರೀ ಭಜೇಮ್
– ಓಂ ದೇವಿ ಸಿದ್ಧಿದತ್ರ್ಯೈ ನಮಃ
– ಓಂ ದೇವಿ ಸಿದ್ಧಿಧಾತ್ರಿಯೈ ನಮಃ ಸಿದ್ಧ ಗಂಧರ್ವ ಯಕ್ಷದ್ಯರಸುರೈರಮಾರೈರಪಿ ಸೆವ್ಯಾಮಾನಾ ಸದಾಭುಯಾತ್ ಸಿದ್ಧಿದಾ ಸಿದ್ದಿದಾಯಿನಿ
– ಹ್ರೀಂ ಕ್ಲೀಂ ಏಂ ಸಿದ್ಧಯೇ ನಮಃ
ಆಧ್ಯಾತ್ಮಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: