Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysore Dasara 2023: ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ; 46 ಲೀ ಹಾಲು ನೀಡಿದ ಹಸು

ಹಾಲು ಕರೆಯುವ ಸ್ಪರ್ಧೆಯಲ್ಲಿ 34 ಲೀ 160 ಗ್ರಾಂ ಹಾಲು ನೀಡಿದ ಮೈಸೂರಿನ ದೇವರಾಜ ಮೊಹಲ್ಲಾದ ವಿನೋದ್ ಮಾಲೀಕತ್ವದ ಹಸು ತೃತೀಯ ಸ್ಥಾನ ಪಡೆದರೆ, 34 ಲೀ 70 ಗ್ರಾಂ ಹಾಲು ನೀಡಿದ ಆನೇಕಲ್ ತಾಲೂಕಿನ ಶ್ರೀನಿವಾಸ್ ಅವರ ಹಸು ನಾಲ್ಕನೇ ಸಮಾಧಾನಕರ ಬಹುಮಾನ ಪಡೆದುಕೊಂಡಿತು.

Mysore Dasara 2023: ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ; 46 ಲೀ ಹಾಲು ನೀಡಿದ ಹಸು
ಹಾಲು ಕರೆಯುವ ಸ್ಪರ್ಧೆ
Follow us
ವಿವೇಕ ಬಿರಾದಾರ
|

Updated on:Oct 23, 2023 | 7:23 AM

ಮೈಸೂರು ಅ.23: ಗುರುವಾರ ಮೈಸೂರಿನಲ್ಲಿ ದಸರಾ (Mysore Dasara) ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ (Milking Competition) ಹಸುವೊಂದು ಎರಡು ಬಾರಿ ಹಾಲು (Milk) ಕರೆಯುವ ಅವಧಿಯಲ್ಲಿ ಒಟ್ಟು 46 ಲೀ 600 ಗ್ರಾಂ ಹಾಲು ನೀಡಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯದ ಯೋಗೇಶ್ ಎಂಬುವರು ಹಸುವಿನ ಮಾಲೀಕ. ದ್ವಿತೀಯ ಸ್ಥಾನವನ್ನು ಮಂಡ್ಯ ಜಿಲ್ಲೆಯ ದುದ್ದ ಗ್ರಾಮದ ಎಸ್.ಗೋಪಾಲಕೃಷ್ಣ ಎಂಬುವವರ ಹಸು ಪಡೆದುಕೊಂಡಿದೆ. ಎರಡು ಹಾಲು ಕರೆಯುವ ಅವಧಿಯಲ್ಲಿ ಹಸು ಒಟ್ಟು 36 ಲೀ ಹಾಲು ನೀಡಿದೆ.

34 ಲೀ 160 ಗ್ರಾಂ ಹಾಲು ನೀಡಿದ ಮೈಸೂರಿನ ದೇವರಾಜ ಮೊಹಲ್ಲಾದ ವಿನೋದ್ ಮಾಲೀಕತ್ವದ ಹಸು ತೃತೀಯ ಸ್ಥಾನ ಪಡೆದರೆ, 34 ಲೀ 70 ಗ್ರಾಂ ಹಾಲು ನೀಡಿದ ಆನೇಕಲ್ ತಾಲೂಕಿನ ಶ್ರೀನಿವಾಸ್ ಅವರ ಹಸು ನಾಲ್ಕನೇ ಸಮಾಧಾನಕರ ಬಹುಮಾನ ಪಡೆದುಕೊಂಡಿತು.

ಮೈಸೂರಿನ ಜೆಕೆ ಮೈದಾನದಲ್ಲಿ ಶನಿವಾರ ನಡೆದ ದಸರಾ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರು, ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 40ಕ್ಕೂ ಹೆಚ್ಚು ಹಸುಗಳು ಭಾಗವಹಿಸಿದ್ದವು. ಹಸುಗಳು ಎರಡು ಬಾರಿ ಹಾಲು ನೀಡಿದವು. ಒಮ್ಮೆ ಬೆಳಿಗ್ಗೆ ಮತ್ತು ಸಂಜೆ. ಹಸುಗಳು ನೀಡುವ ಹಾಲಿನ ಸಂಚಯನವನ್ನು ಬಹುಮಾನ ನೀಡಲು ಪರಿಗಣಿಸಲಾಗಿದೆ.

ಇದನ್ನೂ ಓದಿ: ಮೈಸೂರು ಅರಮನೆಯಲ್ಲಿಂದು ಗತವೈಭವದ ಆಯುಧಪೂಜೆ, ಹೇಗೆಲ್ಲ ನಡೆಯಲಿದೆ? ಇಲ್ಲಿದೆ ಸಂಪೂರ್ಣ ವಿವರ

ಪ್ರಥಮ ಬಹುಮಾನ ವಿಜೇತರಿಗೆ 50,000 ರೂ. ಹಾಗೂ ಟ್ರೋಫಿ, ದ್ವಿತೀಯ ಮತ್ತು ತೃತೀಯ ಬಹುಮಾನ ವಿಜೇತರಿಗೆ ಕ್ರಮವಾಗಿ 40,000 ರೂ. ಮತ್ತು 30,000 ರೂ. ಹಾಗೂ ತಲಾ ಟ್ರೋಫಿ ನೀಡಲಾಯಿತು. ನಾಲ್ಕನೇ ಬಹುಮಾನ ವಿಜೇತರಿಗೆ 10,000 ರೂ. ನೀಡಲಾಯಿತು.

ಬಹುಮಾನ ವಿತರಿಸಿ ಪಶು ಸಂಗೋಪನೆ ಮತ್ತು ರೇಷ್ಮೆ ಕೃಷಿ ಸಚಿವ ಕೆ.ವೆಂಕಟೇಶ್, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವವರನ್ನು ಪ್ರೋತ್ಸಾಹಿಸಲು ಮುಂದಿನ ವರ್ಷದಿಂದ ನಗದು ಬಹುಮಾನವನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಲಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:22 am, Mon, 23 October 23