ಮೈಸೂರು ದಸರಾ ವಜ್ರಮುಷ್ಟಿ ಕಾಳಗಕ್ಕೆ ವೆಂಕಟೇಶ್ ಜಟ್ಟಿ ಆಯ್ಕೆ, ಏನಿದು ವಜ್ರಮುಷ್ಟಿ ಕಾಳಗ? ಇತಿಹಾಸ ತಿಳಿದುಕೊಳ್ಳಿ

Vajramushti Kalaga History: ನಾಳೆ (ಮಂಗಳವಾರ) ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಎಲ್ಲಾ ರೀತಿಯ ಸಿದ್ಧತೆ ನಡೆದಿದೆ. ಆದ್ರೆ, ಅರಮನೆಯಿಂದ ಅಂಬಾರಿ ಮೆರವಣಿಗೆ ಹೋಗಬೇಕಾದರೆ ವಜ್ರಮುಷ್ಟಿ ಕಾಳಗ ಅಥವಾ ಜಟ್ಟಿ ಕಾಳಗ ನಡೆಯಲೇಬೇಕು. ವಜ್ರಮುಷ್ಟಿ ಕಾಳಗ ಬಳಿಕವಷ್ಟೇ ಜಂಬೂಸವಾರಿ ಆರಂಭವಾಗಲಿದೆ. ಅಷ್ಟಕ್ಕೂ ಏನಿದು ವಜ್ರಮುಷ್ಟಿ ಕಾಳಗ? ಇದರ ಇತಿಹಾಸ ತಿಳಿದುಕೊಳ್ಳಿ.

ಮೈಸೂರು ದಸರಾ ವಜ್ರಮುಷ್ಟಿ ಕಾಳಗಕ್ಕೆ ವೆಂಕಟೇಶ್ ಜಟ್ಟಿ ಆಯ್ಕೆ, ಏನಿದು ವಜ್ರಮುಷ್ಟಿ ಕಾಳಗ? ಇತಿಹಾಸ ತಿಳಿದುಕೊಳ್ಳಿ
ವಜ್ರ ಮುಷ್ಟಿ ಕಾಳಗಕ್ಕೆ ವೆಂಕಟೇಶ್ ಜಟ್ಟಿ ಆಯ್ಕೆ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Oct 23, 2023 | 9:57 AM

ಮೈಸೂರು, (ಅಕ್ಟೋಬರ್ 23): ಮೈಸೂರು ದಸರಾ(Mysore Dasara) ವಜ್ರಮುಷ್ಟಿ ಕಾಳಗಕ್ಕೆ(vajramushti kalaga)  ಚಾಮರಾಜನಗರದ ವೆಂಕಟೇಶ್ ಜಟ್ಟಿ ಆಯ್ಕೆಯಾಗಿದ್ದಾರೆ. ಪುಟ್ಟರಂಗ ಜಟ್ಟಿ ಅವರಿಂದ ವೆಂಕಟೇಶ್ ಜಟ್ಟಿ ತರಬೇತಿ ಪಡೆಯುತ್ತಿದ್ದು, ನಾಳೆ ಅಂದರೆ ಜಂಬೂಸವಾರಿ ದಿನದಂದು ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ವಜ್ರಮುಷ್ಟಿ ಕಾಳಗ ನಡೆಯಲಿದೆ. ಚಾಮರಾಜನಗರದಲ್ಲಿ ಜಟ್ಟಿಗಳ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ಬಳಿಕ ಮೈಸೂರು ಅರಮನೆಗೆ ತೆರಳಲಿದ್ದಾರೆ. ಅರಮನೆ ಸಂಪ್ರದಾಯದಂತೆ ವಜ್ರಮುಷ್ಟಿ ಕಾಳಗದ ಬಳಿಕ ಯದುವೀರ್ ಒಡೆಯರ್ ಅವರು ಬನ್ನಿ ಪೂಜೆಗೆ ತೆರಳಲಿದ್ದಾರೆ. ಮೈಸೂರಿನ ರಾಜಾಶ್ರಯದಲ್ಲಿ ಬೆಳೆದುಬಂದಿರುವ ಈ ಕಾಳಗ ವಿಜಯದಶಮಿಯಂದು ಅಂಬಾರಿಯು ಅರಮನೆಯಿಂದ ಹೊರಡುವ ಮುನ್ನ ನಡೆಯುವ ಸಾಂಪ್ರದಾಯಕ ಕ್ರೀಡೆ. ಇತಿಹಾಸದ ಪ್ರಕಾರ ವಜ್ರಮುಷ್ಟಿ ಕಾಳಗ ಮುಗಿದ ನಂತರವಷ್ಟೇ ಅಂಬಾರಿ ಅರಮನೆಯಿಂದ ಹೊರಡಬೇಕು. ಹಾಗಾದ್ರೆ ಏನಿದು ಜಟ್ಟಿ ಕಾಳಗ ಅಥವಾ ವಜ್ರಮುಷ್ಟಿ ಕಾಳಗ? ಇತಿಹಾಸ ಇಲ್ಲಿದೆ ನೋಡಿ.

ಏನಿದು ವಜ್ರಮುಷ್ಟಿ ಕಾಳಗ?

ವಜ್ರಮುಷ್ಟಿ ಕಾಳಗ ಮೈಸೂರು ದಸರಾದ ಪ್ರಮುಖ ಕ್ರೀಡೆ,  ಮೈಸೂರಿನ ರಾಜಾಶ್ರಯದಲ್ಲಿ ಬೆಳೆದುಬಂದಿರುವ ಈ ಕಾಳಗ ವಿಜಯದಶಮಿಯಂದು ಅಂಬಾರಿಯು ಅರಮನೆಯಿಂದ ಹೊರಡುವ ಮುನ್ನ ನಡೆಯುವ ಸಾಂಪ್ರದಾಯಕ ಕ್ರೀಡೆ. ಇತಿಹಾಸದ ಪ್ರಕಾರ ವಜ್ರಮುಷ್ಟಿ ಕಾಳಗ ಮುಗಿದ ನಂತರವಷ್ಟೇ ಅಂಬಾರಿ ಅರಮನೆಯಿಂದ ಹೊರಡಬೇಕು. ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಪ್ರಕ್ರಿಯೆಗೆ ಅದರದ್ದೇ ಆದ ಘನತೆ, ಇತಿಹಾಸ ಇದೆ. ಈ ಕಾಳಗದಲ್ಲಿ ಭಾಗವಹಿಸುವವರದ್ದೂ ಒಂದು ಪ್ರತ್ಯೇಕ ಇತಿಹಾಸ ಇದೆ. ಈ ಕ್ರೀಡೆಯನ್ನು ಜಟ್ಟಿ ಕಾಳಗ ಎಂದೂ, ಈ ಕುಸ್ತಿ ಆಡುವವರನ್ನು ಜಟ್ಟಿಗಳು ಎಂದೂ ಕರೆಯಲಾಗುತ್ತದೆ.

ಇದನ್ನೂ ಓದಿ: ಮೈಸೂರು ಅರಮನೆಯಲ್ಲಿಂದು ಗತವೈಭವದ ಆಯುಧಪೂಜೆ, ಹೇಗೆಲ್ಲ ನಡೆಯಲಿದೆ? ಇಲ್ಲಿದೆ ಸಂಪೂರ್ಣ ವಿವರ

ಘಟಾನುಘಟಿಗಳಿಬ್ಬರು ವಜ್ರಮುಷ್ಟಿ ಹಿಡಿದು ಹತ್ತಿಪ್ಪತ್ತು ನಿಮಿಷಗಳು ಮಾಡುವ ರೋಚಕ ಕಾಳಗದ ದೃಶ್ಯ ನೋಡುಗರನ್ನು ರೋಮಾಂಚಕಗೊಳಿಸುತ್ತೆ. ರಾಜವಂಶಸ್ಥರು, ವೀಕ್ಷಕರು, ಅರಮನೆಯವರೆಲ್ಲರ ಎದುರು ಇಬ್ಬರು ಘಟಾನುಘಟಿಗಳು ತೊಡೆತಟ್ಟಿ ನಿಲ್ಲುತ್ತಾರೆ. ಕೈಯಲ್ಲಿ ವಜ್ರಮುಷ್ಟಿ ಹಿಡಿದು ಕುಸ್ತಿಗೆ ತಯಾರಾಗಿ ನಿಂತ ಅವರ ಮೇಲೆ ನೂರಾರು ಜೋಡಿ ಕಣ್ಣುಗಳು ನೆಟ್ಟಿರುತ್ತವೆ. ಇಂತಹ ಜಟ್ಟಿಗಳ ಪರಾಕ್ರಮ ಮೈಸೂರು ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ನಡೆಯುತ್ತದೆ.

ವ್ರತಧಾರಿಗಳಾಗಿ ವಜ್ರಮುಷ್ಟಿ ಕಾಳಗದ ದಿನ ಅರಮನೆ ಪ್ರವೇಶಿಸುವ ಜಟ್ಟಿಗಳಿಗೆ ಅರಮನೆಯ ಶ್ವೇತವರಾಹ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ, ಕೆಂಪುಮಣ್ಣು, ಮಟ್ಟಿ ಮಣ್ಣು, ಅರಿಶಿನ- ಕುಂಕುಮ, ಕಣ್ಣುಕಪ್ಪುಗಳನ್ನು ಬಳಿದು ನಂತರ ಕಾಳಗ ನಡೆಸುತ್ತಾರೆ. ಉಸ್ತಾದ್‌ ಗಳ ಉಪಸ್ಥಿತಿಯಲ್ಲಿ ಇಬ್ಬರೂ ಜಟ್ಟಿಗಳು ಆನೆ ದಂತದಿಂದ ಮಾಡಿದ ವಜ್ರಮುಷ್ಟಿ ಆಯುಧವನ್ನು ಕೈಗೆ ಧರಿಸಿ ಹಣೆಯಲ್ಲಿ ರಕ್ತ ಚಿಮ್ಮುವವರೆಗೆ ಕಾದಾಡುತ್ತಾರೆ. ಈ ಕಾಳಗ ಸುಮಾರು 10ರಿಂದ 20 ನಿಮಿಷಗಳವರೆಗೆ ನಡೆಯುತ್ತದೆ. ಇಲ್ಲಿ ಸೋಲು ಗೆಲುವು ಎಂಬುವುದಿಲ್ಲ. ಹಣೆಯಲ್ಲಿ ರಕ್ತ ಚಿಮ್ಮಬೇಕು ಅಷ್ಟೇ. ರಕ್ತ ಬಂದರೆ ಮಾತ್ರ ಕಾಳಗ ಸಂಪ್ರಾಪ್ತಿ ಆಗುತ್ತದೆ. ಆನಂತರ ದೇವರಿಗೆ ಪೂಜೆ ಸಲ್ಲಿಸಿ ಜಂಬೂಸವಾರಿ ಆರಂಭಿಸುವ ಕಲಾಪಗಳು ನಡೆಯುತ್ತವೆ.d ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯವನ್ನು ಇಂದಿಗೂ ಅರಮನೆಯಲ್ಲಿ ದಸರಾ ಸಮಯದಲ್ಲಿ ಚಾಚೂ ತಪ್ಪದೆ ಪಾಲಿಸಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:54 am, Mon, 23 October 23

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ