ಕೆಲವೊಮ್ಮೆ ನಿಮಗೆ ಇಷ್ಟವಿದ್ದೋ ಇಲ್ಲದೆಯೋ ನೀವು ಅವಧಿ ಮೀರಿದ ಮೇಕಪ್ ಉತ್ಪನ್ನವನ್ನು ಬಳಸಬೇಕಾಗುತ್ತದೆ. ಆಗ ನಿಮ್ಮ ಮೆಚ್ಚಿನ ಮಸ್ಕರಾ ಕೂಡ ತುರಿಕೆ ಉಂಟುಮಾಡಬಹುದು, ಕಣ್ಣುಗಳು ಉರಿಯಬಹುದು, ಕೆನ್ನೆಗೆ ಹಚ್ಚುವ ಕ್ರೀಂ ಕಜ್ಜಿಗಳನ್ನು ಉಂಟುಮಾಡಬಹುದು. ಹಾಗಾದರೆ, ಅವಧಿ ಮೀರಿದ ಮೇಕಪ್ ಉತ್ಪನ್ನಗಳನ್ನು ಬಳಸುವುದರಿಂದ ಏನೆಲ್ಲ ಸಮಸ್ಯೆಗಳು ಉಂಟಾಗುತ್ತವೆ? ಎಂಬ ಕುರಿತು ಮಾಹಿತಿ ಇಲ್ಲಿದೆ.
ಹೈದರಾಬಾದ್‌ನ ಕೇರ್ ಹಾಸ್ಪಿಟಲ್ಸ್‌ನ ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್ ಡಾ. ಸ್ವಪ್ನಾ ಪ್ರಿಯಾ ಈ ಬಗ್ಗೆ ಇಂಡಿಯನ್ ಎಕ್ಸ್ಪ್ರೆಸ್ಗೆ ಮಾಹಿತಿ ನೀಡಿದ್ದು, ಅವಧಿ ಮುಗಿದ ಮೇಕ್ಅಪ್ ನಿಮ್ಮ ದೇಹಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಎಚ್ಚರಿಸಿದ್ದಾರೆ. ಆರೋಗ್ಯಕರ ಚರ್ಮ ಮತ್ತು ಒಟ್ಟಾರೆ ಯೋಗಕ್ಷೇಮಕ್ಕಾಗಿ ನಿಮ್ಮ ಮೇಕಪ್ ಬ್ಯಾಗ್ ಅನ್ನು ನಿಯಮಿತವಾಗಿ ಪರಿಶೀಲಿಸುವುದು ಅಗತ್ಯ.
ಇದನ್ನೂ ಓದಿ: Ayurvedic Facepack: ಆಯುರ್ವೇದಿಕ್ ಫೇಸ್ಪ್ಯಾಕ್ನಿಂದ ಚರ್ಮದ ಕಾಂತಿ ಹೆಚ್ಚಿಸಿ
ನೀವು ಅವಧಿ ಮೀರಿದ ಮೇಕಪ್ ಅನ್ನು ಬಳಸಿದಾಗ ಏನಾಗುತ್ತದೆ?:
ಚರ್ಮದ ಕೆರಳಿಕೆ:
ಅವಧಿ ಮುಗಿದ ಬಳಿಕ ಮೇಕಪ್ ಉತ್ಪನ್ನದ ರಾಸಾಯನಿಕ ಸಂಯೋಜನೆಯು ಬದಲಾಗುತ್ತದೆ. ಇದು ಚರ್ಮದ ಕೆರಳಿಕೆ, ಕೆಂಪು ಮತ್ತು ಶುಷ್ಕತೆಯನ್ನು ಉಂಟುಮಾಡುತ್ತದೆ.
ಅಲರ್ಜಿಯ ಪ್ರತಿಕ್ರಿಯೆಗಳು:
ಅವಧಿ ಮೀರಿದ ಮೇಕ್ಅಪ್ ಅಲರ್ಜಿಯ ಪ್ರತಿಕ್ರಿಯೆಗಳನ್ನು ಪ್ರಚೋದಿಸಬಹುದು. ಊತ, ತುರಿಕೆ ಮತ್ತು ಸುಡುವಿಕೆಯಂತಹ ರೋಗಲಕ್ಷಣಗಳನ್ನು ಎಂದೂ ನಿರ್ಲಕ್ಷ್ಯ ಮಾಡಬಾರದು.
ಸೋಂಕುಗಳು:
ಮಸ್ಕರಾ ಮತ್ತು ಐಲೈನರ್‌ನಂತಹ ಕಣ್ಣಿನ ಉತ್ಪನ್ನಗಳು ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿಗೆ ಆಧಾರವಾಗಿವೆ. ವಿಶೇಷವಾಗಿ ಅವುಗಳ ಅವಧಿ ಮುಗಿಯತೊಡಗಿದಾಗ ಅವುಗಳಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಅವುಗಳನ್ನು ಬಳಸುವುದರಿಂದ ಕಾಂಜಂಕ್ಟಿವಿಟಿಸ್‌ನಂತಹ ಕಣ್ಣಿನ ಸೋಂಕಿನ ಅಪಾಯ ಉಂಟಾಗಬಹುದು.
ದೀರ್ಘಕಾಲದ ಚರ್ಮದ ಸಮಸ್ಯೆಗಳು:
ಅವಧಿ ಮೀರಿದ ಮೇಕ್ಅಪ್‌ಗೆ ಪದೇ ಪದೇ ಒಡ್ಡಿಕೊಳ್ಳುವುದರಿಂದ ಡರ್ಮಟೈಟಿಸ್ ಮತ್ತು ಅಕಾಲಿಕ ವಯಸ್ಸಾದಂತಹ ದೀರ್ಘಕಾಲದ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು.
ಗಂಭೀರವಾದ ಆರೋಗ್ಯ ಅಪಾಯಗಳು:
ಅಪರೂಪದ ಸಂದರ್ಭಗಳಲ್ಲಿ ಹಾನಿಕಾರಕ ಸೂಕ್ಷ್ಮಾಣುಜೀವಿಗಳ ಮಾಲಿನ್ಯವು ತೀವ್ರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದರಲ್ಲೂ ವಿಶೇಷವಾಗಿ ಕಣ್ಣುಗಳಂತಹ ಸೂಕ್ಷ್ಮ ಪ್ರದೇಶಗಳಿಗೆ ಹಚ್ಚಿದಾಗ ಸಮಸ್ಯೆ ಹೆಚ್ಚಾಗಬಹುದು.
ಇದನ್ನೂ ಓದಿ: Skin Care: ನಿಮ್ಮ ಚರ್ಮಕ್ಕೆ ಪ್ರತಿದಿನ ಮಾಯಿಶ್ಚರೈಸರ್ ಹಚ್ಚುವುದು ಒಳ್ಳೆಯದಾ?
ಸಮಸ್ಯೆಗಳನ್ನು ತಡೆಗಟ್ಟಲು ಸರಳ ಪರಿಹಾರಗಳು ಇಲ್ಲಿವೆ…
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:44 pm, Thu, 29 February 24