ಸಾಂದರ್ಭಿಕ ಚಿತ್ರ
ಮಹಿಳೆಯು ತಾಯಿಯಾಗುವ ಸಂದರ್ಭದಲ್ಲಿ ನಾನಾ ರೀತಿಯ ಬದಲಾವಣೆಗೆ ತಯಾರಾಗಿರಬೇಕಾಗುತ್ತದೆ. ಈ ವೇಳೆಯಲ್ಲಿ ತೂಕ ಹೆಚ್ಚಳ ಹಾಗೂ ಹಾರ್ಮೋನಿನ ಬದಲಾವಣೆಗಳು ಆಗುವುದು ಸಹಜ. ಆದರೆ ಮಗುವಿಗೆ ಜನ್ಮ ನೀಡಿದ ಬಳಿಕ ಹೊಟ್ಟೆಯು ಜೋತು ಬೀಳುವುದಲ್ಲದೆ, ಕೆಲವರಂತೂ ಬಲೂನಿನಂತೆ ಊದಿ ಕೊಳ್ಳುತ್ತಾರೆ. ದೇಹದ ಸೌಂದರ್ಯ ಹಾಳಾಯಿತಲ್ಲ ಎಂದು ಮಹಿಳೆಯರು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಸಹಜತೆಯನ್ನು ಒಪ್ಪಿಕೊಂಡು ಬದುಕುತ್ತಾರೆ.
- ಹೊಟ್ಟೆ ಕರಗಿಸಲು ಬಯಸುವವರು ಪ್ರತಿ ದಿನವೂ ಒಂದೊಂದು ಸೇಬನ್ನು ತಿನ್ನುವುದು ಒಳ್ಳೆಯ ಅಭ್ಯಾಸ. ಇದರಲ್ಲಿರುವ ನಾರಿನಾಂಶ ಅಧಿಕವಾಗಿದ್ದು ಕೊಬ್ಬನ್ನು ಕರಗಿಸುತ್ತದೆ.
- ಮೊಸರಿನಲ್ಲಿ ಪ್ರೋಟೀನ್ ಸಮೃದ್ಧವಾಗಿರುವ ಕಾರಣ ಇದು ಕೊಬ್ಬನ್ನು ಕರಗಿಸುತ್ತದೆ. ದೇಹಕ್ಕೆ ತಂಪೆನಿಸುವ ಮೊಸರು ಹೆಚ್ಚುವರಿ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಕಾರಿಯಾಗಿದೆ.
- ನಿಯಮಿತವಾಗಿ ಸಿರಿಧಾನ್ಯಗಳನ್ನು ಸೇವಿಸುವುದರಿಂದ ಬೊಜ್ಜು ಕಡಿಮೆ ಮಾಡುವುದಲ್ಲದೆ ದಪ್ಪ ಹೊಟ್ಟೆಯನ್ನು ನಿಯಂತ್ರಿಸುತ್ತದೆ.
- ಬಿಸಿ ನೀರು ಕುಡಿಯುವುದರಿಂದ ದೇಹದ ತೂಕವು ನಿಯಂತ್ರಿಸುವುದರೊಂದಿಗೆ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ.
- ಮಗುವಿನ ಜನ್ಮ ನೀಡಿದ ಬಳಿಕ ಹೊಟ್ಟೆಯ ಭಾಗದ ಕೊಬ್ಬು ಕರಗಿಸಲು ಗ್ರೀನ್ ಟೀ ಕುಡಿಯುವುದು ಪರಿಣಾಮಕಾರಿಯಾಗಿದೆ.
- ಎರಡು ಮೂರು ಲವಂಗ ಹಾಗೂ ಚಿಟಿಕೆಯಷ್ಟು ದಾಲ್ಚಿನ್ನಿ ಹುಡಿಯನ್ನು ನೀರಿಗೆ ಕುದಿಸಿ ಕುದಿಯುವುದರಿಂದ ದೇಹದ ತೂಕವು ಇಳಿಕೆ ಕಡಿಮೆಯಾಗಿ ಹೊಟ್ಟೆಯ ಕೊಬ್ಬು ಕರಗುತ್ತದೆ.
- ಒಂದು ಚಮಚ ಮೆಂತ್ಯ ಕಾಳನ್ನು ನೀರಿಗೆ ಹಾಕಿ ಕುದಿಸಿ ಕುಡಿಯುವುದು ಬೊಜ್ಜು ಕರಗುತ್ತದೆ.
- ನಿಯಮಿತವಾಗಿ ವ್ಯಾಯಾಮ ಹಾಗೂ ವಾಕ್ ಮಾಡುವುದರಿಂದ ಹೊಟ್ಟೆಯ ಭಾಗದ ಬೊಜ್ಜನ್ನು ಕರಗಿಸಬಹುದು.
ಈ ಮನೆ ಮದ್ದನ್ನು ಪ್ರಯತ್ನಿಸುವ ಮುನ್ನ ವೈದ್ಯರ ಸಲಹೆಗಳನ್ನು ಪಡೆಯುವುದು ಉತ್ತಮ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ