ತೂಕ ನಷ್ಟಕ್ಕೆ ನಿಮ್ಮ ಆಹಾರಕ್ರಮದಲ್ಲಿ ಹಸಿ ಬೆಳ್ಳುಳ್ಳಿಯನ್ನು ಈ ರೀತಿ ಸೇರಿಸಿಕೊಳ್ಳಿ

|

Updated on: Nov 23, 2023 | 2:09 PM

ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನವು ತೂಕ ನಷ್ಟಕ್ಕೆ ಬೆಳ್ಳುಳ್ಳಿ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಬಹಿರಂಗಪಡಿಸಿದೆ. ಬೆಳ್ಳುಳ್ಳಿ ದೇಹದಲ್ಲಿ ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ಉತ್ತೇಜಿಸುವ ಕೆಲವು ಸಂಯುಕ್ತಗಳನ್ನು ಹೊಂದಿರುತ್ತದೆ. ಆದ್ದರಿಂದ, ಹೊಟ್ಟೆಯ ಕೊಬ್ಬನ್ನು ನಿವಾರಿಸಲು ಬೆಳ್ಳುಳ್ಳಿ ತುಂಬಾ ಸಹಾಯಕವಾಗಿದೆ.

ತೂಕ ನಷ್ಟಕ್ಕೆ ನಿಮ್ಮ ಆಹಾರಕ್ರಮದಲ್ಲಿ ಹಸಿ ಬೆಳ್ಳುಳ್ಳಿಯನ್ನು ಈ ರೀತಿ ಸೇರಿಸಿಕೊಳ್ಳಿ
Raw garlic
Image Credit source: Pinterest
Follow us on

ಅನಗತ್ಯ ಕೊಬ್ಬನ್ನು ಕರಗಿಸಲು ನೀವು ನೈಸರ್ಗಿಕ ಮತ್ತು ಸುಲಭವಾದ ಮಾರ್ಗವನ್ನು ಹುಡುಕುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಬೆಳಗಿನ ಆಹಾರಕ್ರಮದಲ್ಲಿ ಹಸಿ ಬೆಳ್ಳುಳ್ಳಿಯನ್ನು ಸೇರಿಸಿ. ಬೆಳ್ಳುಳ್ಳಿ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುವ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನವು ತೂಕ ನಷ್ಟಕ್ಕೆ ಬೆಳ್ಳುಳ್ಳಿ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಬಹಿರಂಗಪಡಿಸಿದೆ. ಬೆಳ್ಳುಳ್ಳಿ ದೇಹದಲ್ಲಿ ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ಉತ್ತೇಜಿಸುವ ಕೆಲವು ಸಂಯುಕ್ತಗಳನ್ನು ಹೊಂದಿರುತ್ತದೆ. ಆದ್ದರಿಂದ, ಹೊಟ್ಟೆಯ ಕೊಬ್ಬನ್ನು ನಿವಾರಿಸಲು ಬೆಳ್ಳುಳ್ಳಿ ತುಂಬಾ ಸಹಾಯಕವಾಗಿದೆ.

ತೂಕ ನಷ್ಟಕ್ಕೆ ಹಸಿ ಬೆಳ್ಳುಳ್ಳಿಯನ್ನು ಹೇಗೆ ತಿನ್ನಬೇಕು?

ನಿಂಬೆ-ಬೆಳ್ಳುಳ್ಳಿ ನೀರು:

ಒಂದು ಲೋಟಕ್ಕೆ ಅರ್ಧ ನಿಂಬೆಹಣ್ಣಿನ ರಸವನ್ನು ಹಿಂಡಿ, ಅದಕ್ಕೆ ನುಣ್ಣಗೆ ಕತ್ತರಿಸಿದ ಹಸಿ ಬೆಳ್ಳುಳ್ಳಿ ಸೇರಿಸಿ ಮತ್ತು ಬೆಚ್ಚಗಿನ ನೀರು ಸೇರಿಸಿ. ನಿಂಬೆ ಹಾಗೂ ಬೆಳ್ಳುಳ್ಳಿಯ ರಸ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನಿಮ್ಮ ಜೀರ್ಣಕ್ರಿಯೆ ಸರಾಗವಾಗಿ ಆದರೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.

ಬೆಳ್ಳುಳ್ಳಿ ಚಹಾ:

ನುಣ್ಣಗೆ ಕತ್ತರಿಸಿದ ಹಸಿ ಬೆಳ್ಳುಳ್ಳಿಯನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ. ಇದಕ್ಕೆ ಶುಂಠಿಯನ್ನು ಸೇರಿಸಿಕೊಳ್ಳಬಹುದು. ಬಳಿಕ ಸೋಸಿಕೊಳ್ಳಿ,ಇದಕ್ಕೆ ಜೇನುತುಪ್ಪ ಸೇರಿಸಿ ಕುಡಿಯಿರಿ.

ಇದನ್ನೂ ಓದಿ: ಈ 4 ಕಾರಣಗಳಿಂದಾಗಿ ಚಳಿಗಾಲದಲ್ಲಿ ಹೆಚ್ಚು ನಿದ್ರೆ ಬರುತ್ತದೆ!

ಬೆಳ್ಳುಳ್ಳಿ ಆವಕಾಡೊ ಟೋಸ್ಟ್ :

ಬೆಳ್ಳುಳ್ಳಿಯಿಂದ ತುಂಬಿದ ಆವಕಾಡೊ ಟೋಸ್ಟ್‌ ಅನ್ನು ಸೇವಿಸುವುದು ತೂಕ ನಷ್ಟಕ್ಕೆ ತುಂಬಾ ಒಳ್ಳೆಯದು.ಟೋಸ್ಟ್ ಮೇಲೆ ಮಾಗಿದ ಆವಕಾಡೊವನ್ನು ಮ್ಯಾಶ್ ಮಾಡಿ ಮತ್ತು ಕೊಚ್ಚಿದ ಹಸಿ ಬೆಳ್ಳುಳ್ಳಿಯನ್ನು ಸೇರಿಸಿ. ಇದು ರುಚಿಯ ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಬೆಳ್ಳುಳ್ಳಿ ಮತ್ತು ಮೊಸರು :

ನೀವು ಖಾರದ ಉಪಹಾರವನ್ನು ಬಯಸಿದರೆ, ನೀವು ಮೊಸರಿಗೆ ಕೊಚ್ಚಿದ ಬೆಳ್ಳುಳ್ಳಿಯನ್ನು ಮಿಶ್ರಣ ಮಾಡಿ ಸೇವಿಸಬೇಕು. ಈ ಮಿಶ್ರಣವನ್ನು ನೀವು ಬೆಳಗ್ಗಿನ ಯಾವುದೇ ಉಪಹಾರದೊಂದಿಗೆ ಸವಿಯಬಹುದಾಗಿದೆ.

ಹಸಿ ಬೆಳ್ಳುಳ್ಳಿ ಗ್ಯಾಸ್ಟಿಕ್​ನಂತಹ ಸಮಸ್ಯೆಯನ್ನು ದೂರ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಆಲಿಸಿನ್ ಇರುತ್ತದೆ. ಇದು ಗಂಧಕವನ್ನು ಒಳಗೊಂಡಿರುವ ಸಂಯುಕ್ತವಾಗಿದ್ದು, ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಜೀವಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 1:54 pm, Thu, 23 November 23