ಚರ್ಮಕ್ಕೆ ಅಲೋವೆರಾ ಹಚ್ಚಿಕೊಳ್ಳುವುದರಿಂದ ಪ್ರಯೋಜನಗಳೇನು ಇಲ್ಲಿದೆ ಮಾಹಿತಿ
ಚರ್ಮದ ಕಾಂತಿಯನ್ನು ಹೆಚ್ಚಿಸಲು, ಚರ್ಮವನ್ನು ಆರೋಗ್ಯವಾಗಿಟ್ಟುಕೊಳ್ಳಲು ಅಲೋವೆರಾ ಹಚ್ಚಿಕೊಳ್ಳುವುದು ಬಹಳ ಒಳ್ಳೆಯದು.
ಚರ್ಮವನ್ನು ರಕ್ಷಣೆ ಮಾಡಿಕೊಳ್ಳಲು ಜನರು ಸಾಕಷ್ಟು ಹರಸಾಹಸ ಪಡುತ್ತಾರೆ. ಮುಖದ ಕಾಂತಿಯನ್ನು ಉಳಿಸಿಕೊಳ್ಳಲು ಕೆಮಿಕಲ್ ಮಿಶ್ರಿತ ಕ್ರೀಮ್ಗಳನ್ನು ಹಚ್ಚಿಕೊಂಡು ಮುಖವನ್ನು ಹಾಳು ಮಾಡಿಕೊಳ್ಳುತ್ತಾರೆ. ಆದರೆ ಚರ್ಮದ ಕಾಂತಿಯನ್ನು ಹೆಚ್ಚಿಸಲು, ಚರ್ಮವನ್ನು ಆರೋಗ್ಯವಾಗಿಟ್ಟುಕೊಳ್ಳಲು ಅಲೋವೆರಾ ಹಚ್ಚಿಕೊಳ್ಳುವುದು ಬಹಳ ಒಳ್ಳೆಯದು. ಅಲೋವೆರಾ ಒಂದು ವಿವಿಧೋದ್ದೇಶ ಸಸ್ಯವಾಗಿದ್ದು ಇದನ್ನು ಕಾಂತಿಯುತ, ನಯವಾದ ಚರ್ಮಕ್ಕಾಗಿ ಮತ್ತು ಔಷಧೀಯ ಉದ್ದೇಶಗಳಿಗಾಗಿಯೂ ಬಳಸಬಹುದಾಗಿದೆ. ಆದ್ದರಿಂದ ಅನೇಕ ಕಂಪನಿಗಳು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕಾಗಿ ಅಲೋವೆರಾ ಜೆಲ್ನ್ನು ತಯಾರಿಸುತ್ತವೆ.
ಉತ್ತಮ ಚರ್ಮಕ್ಕಾಗಿ, ಗಾಯಗಳು ಮತ್ತು ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ಮೊದಲಿನಿಂದ ಅಲೋವೆರಾ ಬಳಸಲಾಗುತ್ತಿದೆ. ಅಲೋವೇರಾದಿಂದ ಉರಿಯೂತ, ಬ್ಯಾಕ್ಟೀರಿಯಾ ರೋಗಗಳಿಂದ ತಡೆಗಟ್ಟಲು, ರೋಗ ನಿರೋಧಕ ಹೆಚ್ಚಿಸಲು ಅಲೊವೇರಾ ಬಳಸುತ್ತಾರೆ.
ನಿಮ್ಮ ಚರ್ಮವನ್ನು ಕಾಂತಿಯುತವಾಗಿಡಲು ಮತ್ತು ಆರೋಗ್ಯವಾಗಿಡಲು ಇಲ್ಲಿದೆ ಕೆಲವು ಸಲಹೆಗಳು
1. ನೈಸರ್ಗಿಕ ಅಲೋವೆರಾವನ್ನು ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮದ ಕಾಂತಿ ಹೆಚ್ಚಿಸುತ್ತದೆ.
2. ತೆಂಗಿನೆಣ್ಣೆಯೊಂದಿಗೆ ಅಲೋವೆರಾವನ್ನು ಮಿಶ್ರಣ ಮಾಡಿಕೊಂಡು ಸುಟ್ಟ ಗಾಯ ಮತ್ತು ಸುಟ್ಟ ಗುರುತು ಇದ್ದಲ್ಲಿ ಹಚ್ಚಿಕೊಂಡರೆ ಬೇಗ ಗುಣಮುಖವಾಗುತ್ತವೆ.
3. ಅಲೋವೆರಾ ಅಂಟಂಟಾಗಿರುವುದರಿಂದ, ಇದು ಚರ್ಮವನ್ನು ಹೈಡ್ರೀಕರಿಸುತ್ತದೆ. ಅಲೋವೆರಾ ಲೋಷನ್ಗಳನ್ನು ಬಳಸುವುದು ಉತ್ತಮ. ಆದರೆ ಲೋಷನ್ಗಳನ್ನು ಖರೀದಿಸುವ ಮುನ್ನ ಅದು ಅಸಲಿಯೋ ನಕಲಿಯೋ ಪರೀಕ್ಷಿಸಿ.
4. ಅಲೋವೆರಾವನ್ನು ಸರಿಯಾಗಿ ಸ್ಮ್ಯಾಶ್ ಮಾಡಿ ಐಸ್ ಟ್ರೇನಲ್ಲಿ ಇರಿಸಿ ಅಲೋವೆರಾ ಐಸ್ ಕ್ಯೂಬ್‌ಗಳಾಗಿ ಬಳಸಬಹದು. ನೀವು ಹೊರಗಡೆಯಿಂದ ಮನೆಗೆ ಹೋದಾಗ ಇದನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಬಹಳ ಒಳ್ಳೆಯದು. ಯಾವುದೇ ದದ್ದುಗಳು ಅಥವಾ ಕಡಿತಗಳು ಅಥವಾ ಸೋಂಕುಗಳ ಸಂದರ್ಭದಲ್ಲಿ ಇದನ್ನು ಮಕ್ಕಳಗೆ ಬಳಸಬಹುದು.
5. ಅಲೋವೆರಾ ಅನೇಕ ಚರ್ಮದ ಕಾಯಿಲೆಗಳನ್ನು ಎದುರಿಸಲು ಅಗತ್ಯವಾದ ನೈಸರ್ಗಿಕ ಘಟಕಾಂಶವಾಗಿದೆ. ತುರಿಕೆ ಹೋಗಲಾಡಿಸಲು, ಗುಳ್ಳೆಗಳನ್ನು ಗುಣಪಡಿಸುತ್ತದೆ.
ಮತ್ತಷ್ಟು ಜೀವನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ