Benefits Of Ginger: ಮಧುಮೇಹ ರೋಗಿಗಳಿಗೆ ಶುಂಠಿ ಸೇವನೆ ಸಹಕಾರಿ! ಇಲ್ಲಿದೆ ಶುಂಠಿಯ ಉಪಯುಕ್ತ ಮಾಹಿತಿ

ಶುಂಠಿಯೊಳಗೆ ಜಿಂಜರಾಲ್ ಎಂಬ ವಸ್ತು ಕಂಡುಬರುತ್ತದೆ. ನೀವು ಶುಂಠಿ ಚಹಾವನ್ನು ಸೇವಿಸಿದರೆ, ಅದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Benefits Of Ginger: ಮಧುಮೇಹ ರೋಗಿಗಳಿಗೆ ಶುಂಠಿ ಸೇವನೆ ಸಹಕಾರಿ! ಇಲ್ಲಿದೆ ಶುಂಠಿಯ ಉಪಯುಕ್ತ ಮಾಹಿತಿ
ಶುಂಠಿ
Updated By: ಗಂಗಾಧರ​ ಬ. ಸಾಬೋಜಿ

Updated on: Jul 23, 2022 | 7:00 AM

ಆಯುರ್ವೇದದ ಪ್ರಕಾರ ಶುಂಠಿ (Ginger) ಯನ್ನು ಔಷಧೀಯ ಗುಣ ಹೊಂದಿದೆ ಎಂದು ಪರಿಗಣಿಸಲಾಗಿದೆ. ಮಳೆಗಾಲ ಮತ್ತು ಶೀತ ವಾತಾವರಣದಲ್ಲಿ ಶುಂಠಿ ಚಹಾವನ್ನು ಕುಡಿಯುವುದರಿಂದ ಶೀತವನ್ನು ನಿವಾರಣೆ ಮಾಡುತ್ತದೆ. ಆದರೆ ಇದು ಮಧುಮೇಹ ರೋಗಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ವಾಸ್ತವವಾಗಿ, ಮಧುಮೇಹ ರೋಗಿಗಳಲ್ಲಿ ಇನ್ಸುಲಿನ್ ಕೊರತೆಯಿದ್ದು, ಇದು ಅವರ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಶುಂಠಿಯು ಕಡಿಮೆ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದೆ. ಜೊತೆಗೆ ಸತುವು ಸಮೃದ್ಧವಾಗಿದೆ. ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಹಾಗಾದರೆ ಶುಂಠಿಯ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಇದನ್ನೂ ಓದಿ: Stretch Marks: ಗರ್ಭಧಾರಣೆ ಹೊರತಾಗಿಯೂ ದೇಹದಲ್ಲಿ ಸ್ಟ್ರೆಚ್ ಮಾರ್ಕ್ಸ್​ ಮೂಡಲು ಕಾರಣಗಳು ಇಲ್ಲಿವೆ

ಶುಂಠಿಯ ಪ್ರಯೋಜನಗಳು:

ಶುಂಠಿಯೊಳಗೆ ಜಿಂಜರಾಲ್ ಎಂಬ ವಸ್ತು ಕಂಡುಬರುತ್ತದೆ. ನೀವು ಶುಂಠಿ ಚಹಾವನ್ನು ಸೇವಿಸಿದರೆ, ಅದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, ಟೈಪ್ 2 ಮಧುಮೇಹದಿಂದ ಬಳಲುತ್ತಿರುವವರಿಗೆ ಶುಂಠಿ ಪರಿಣಾಮಕಾರಿ ಎಂದು ಹೇಳಲಾಗಿದೆ.  ಶುಂಠಿಯ ಅಂಶಗಳು ಇನ್ಸುಲಿನ್ ಬಳಕೆಯಿಲ್ಲದೆ ಗ್ಲೂಕೋಸ್​ನ್ನು ನರ ಕೋಶಗಳಿಗೆ ಸಾಗಿಸುವ ಪ್ರಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದು ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಶುಂಠಿ ನೀರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದು, ಇದು ಸತುವಿನ ಉತ್ತಮ ಮೂಲವಾಗಿದೆ. ಇದು ದೇಹದಲ್ಲಿ ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Dancing Health Benefits: ಪ್ರತಿದಿನ 30 ನಿಮಿಷಗಳ ಕಾಲ ಡ್ಯಾನ್ಸ್​​ ಮಾಡಿ: ಈ ಕಾಯಿಲೆಗಳಿಂದ ಮುಕ್ತರಾಗಿ

ಶುಂಠಿಯ ಸೇವನೆಯು ಇನ್ಸುಲಿನ್ ಸಕ್ರಿಯಗೊಳಿಸುವಿಕೆಯನ್ನು ಹೆಚ್ಚಿಸಲು ಸಹ ಕೆಲಸ ಮಾಡುತ್ತದೆ. ಇದು ಯಕೃತ್ತು, ಮೂತ್ರಪಿಂಡಗಳನ್ನು ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿಡಲು ಸಹಕರಿಸುತ್ತದೆ. ಇದಲ್ಲದೆ, ಶುಂಠಿ ಚಹಾವು ಕೊಲೆಸ್ಟ್ರಾಲ್​ನ್ನು ಕಡಿಮೆ ಮಾಡಲು ಮತ್ತು ಮಧುಮೇಹದ ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಿಸಲು ಕೂಡ ಸಹಕಾರಿಯಾಗಿದೆ. ಇದರೊಂದಿಗೆ ಶುಂಠಿ ನೀರು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.