ಯುವಕರೇ ಸ್ಟೈಲಿಶ್ ಆಗಿ ಕಾಣಲು ಗಡ್ಡ ಬಿಟ್ಟಿದ್ದೀರಾ, ಇದರಿಂದ ಹಲವು ಆರೋಗ್ಯ ಲಾಭ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 11, 2024 | 5:43 PM

ಗಡ್ಡ ಪುರುಷತ್ವದ ಸಂಕೇತ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇತ್ತೀಚೆಗಿನ ದಿನಗಳಲ್ಲಿ ಗಡ್ಡ ಬಿಡುವುದು ಟ್ರೆಂಡ್ ಆಗಿದೆ. ಪುರುಷದ ಸೌಂದರ್ಯವನ್ನು ಇಮ್ಮಡಿಗೊಳಿಸುವ ಈ ಗಡ್ಡವು ಹೆಣ್ಣು ಮಕ್ಕಳನ್ನು ಮರಳು ಮಾಡುತ್ತದೆ. ಆದರೆ ಈ ಗಡ್ಡ ಬಿಡುವುದರಿಂದ ಹಲವಾರು ಆರೋಗ್ಯ ಲಾಭಗಳಿವೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ.

ಯುವಕರೇ ಸ್ಟೈಲಿಶ್ ಆಗಿ ಕಾಣಲು ಗಡ್ಡ ಬಿಟ್ಟಿದ್ದೀರಾ, ಇದರಿಂದ ಹಲವು ಆರೋಗ್ಯ ಲಾಭ
Follow us on

ಮದುವೆಯಾದ ಗಂಡಸರು ಗಡ್ಡ ಬಿಟ್ಟ ಕೂಡಲೇ ಏನಾದ್ರು ಸಿಹಿ ಸುದ್ದಿ ಉಂಟಾ ಎಂದು ಮನೆಯವರು ಕಾಲೆಳೆಯುವುದನ್ನು ನೋಡಿರುತ್ತೇವೆ. ಆದರೆ ಗಡ್ಡ ಬಿಡುವುದು ಟ್ರೆಂಡ್ ಆಗಿದ್ದು, ಫ್ರೆಂಚ್ ಸ್ಟೈಲ್, ಚಿನ್‌ಸ್ಟ್ರಿಪ್, ಗೌಟಿ, ಫುಲ್ ಬಿಯರ್ಡ್, ಸೊಲ್‌ಪ್ಯಾಚ್, ಬಲ್ಬೂ ಹೀಗೆ ನಾನಾ ರೀತಿಯ ಸ್ಟೈಲ್ ಗಳ ಪ್ರಯೋಗ ಆಗುತ್ತಲೇ ಇರುತ್ತದೆ. ಇದು, ಪುರುಷರನ್ನು ಸ್ಟೈಲಿಶ್ ಆಗಿ ಕಾಣುವಂತೆ ಮಾಡುವುದು ಮಾತ್ರವಲ್ಲದೇ, ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ.

  • ಗಡ್ಡ ಬಿಡುವುದರಿಂದ ಬೇಸಿಗೆಯಲ್ಲಿ ಸೂರ್ಯನ ನೇರ ಕಿರಣಗಳು ಮುಖದ ಮೇಲೆ ಬೀಳುವುದನ್ನು ತಪ್ಪಿಸುತ್ತದೆ. ಅದಲ್ಲದೆ ಸನ್ ಬರ್ನ್ ಹಾಗೂ ಟ್ಯಾನ್​​​ಗಳಿಂದ ತ್ವಚೆಯನ್ನು ರಕ್ಷಿಸುತ್ತದೆ.
  • ಮುಖದ ತುಂಬಾ ಕೂದಲುಗಳು ಇರುವುದರಿಂದ ಧೂಳು ತ್ವಚೆಗೆ ಅಂಟಿಕೊಳ್ಳುವುದನ್ನು ತಪ್ಪಿಸಿ ರಕ್ಷಣಾ ಪದರದಂತೆ ಕೆಲಸ ಮಾಡುತ್ತದೆ.
  • ಗಡ್ಡ ಬೆಳೆಸುವುದರಿಂದ ಮೊಡವೆಗಳ ಸಮಸ್ಯೆಯು ಕಾಡುವುದಿಲ್ಲ.. ತ್ವಚೆಯಲ್ಲಿ ತೇವಾಂಶವನ್ನು ಕಾಪಾಡಿ ಚರ್ಮವು ಒಣಗುವುದನ್ನು ತಪ್ಪಿಸುತ್ತದೆ.
  • ಗಡ್ಡ ಬಿಡುವುದರಿಂದ ಮುಖದ ಮೇಲೆ ಗಾಯಗಳಾಗುವುದಿಲ್ಲ. ಮುಖದ ಮೇಲೆ ಕಲೆಗಳು ಮೂಡದಂತೆ ನೋಡಿಕೊಳ್ಳುತ್ತದೆ.
  • ಗಡ್ಡವನ್ನು ಬೆಳೆಸುವುದರಿಂದ ಅಲರ್ಜಿಕಾರಕಗಳು ಮೂಗು ಹಾಗೂ ಬಾಯಿಯ ಮೂಲಕ ಪ್ರವೇಶಿಸುವುದಿಲ್ಲ. ಹೀಗಾದಾಗ ನೀವು ಕೂಡ ಆರೋಗ್ಯವಂತರಾಗಿರುತ್ತೀರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ