ಬೇಸಿಗೆಯಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ 8 ಹಣ್ಣುಗಳಿವು

ನಮ್ಮ ದೇಹದಲ್ಲಿ ಎಚ್‌ಡಿಎಲ್‌ಗಳು ಅಥವಾ ಉತ್ತಮ ಕೊಲೆಸ್ಟ್ರಾಲ್ ಬಹಳ ಕಡಿಮೆಯಿದ್ದರೆ ನಮ್ಮ ರಕ್ತದಲ್ಲಿ ಹೆಚ್ಚು ಕೊಲೆಸ್ಟ್ರಾಲ್ ಪರಿಚಲನೆಯಾಗುತ್ತದೆ. ನಮ್ಮ ದೇಹವು ಕೊಲೆಸ್ಟ್ರಾಲ್ ಸಹಾಯದಿಂದ ಜೀವಕೋಶಗಳನ್ನು ಉತ್ಪಾದಿಸುತ್ತದೆ. ದೇಹದ ಕಾರ್ಯನಿರ್ವಹಣೆಗೆ ಕೊಲೆಸ್ಟ್ರಾಲ್ ರಚನೆಯು ಬಹಳ ಅಗತ್ಯ. ಎಚ್​ಡಿಎಲ್​ ಮಟ್ಟವನ್ನು ಹೆಚ್ಚಿಸುವ ಬೇಸಿಗೆಯ ಹಣ್ಣುಗಳಿವು.

ಬೇಸಿಗೆಯಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ 8 ಹಣ್ಣುಗಳಿವು
ಕಿತ್ತಳೆImage Credit source: iStock
Follow us
ಸುಷ್ಮಾ ಚಕ್ರೆ
|

Updated on: Apr 11, 2024 | 4:53 PM

ನಮ್ಮ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂಬ ಎರಡು ರೀತಿಯ ಕೊಬ್ಬುಗಳಿರುತ್ತವೆ. ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಕೆಲವು ತರಕಾರಿ, ಹಣ್ಣುಗಳು ಸಹಾಯ ಮಾಡುತ್ತವೆ. ನಮ್ಮ ದೇಹದ ಉತ್ತಮ ಕೊಬ್ಬು ಅರ್ಥಾತ್ HDL ನಮ್ಮ ಲಿವರ್​ಗೆ ಕೊಲೆಸ್ಟ್ರಾಲ್ ಅನ್ನು ಸಾಗಿಸುತ್ತವೆ. ನಮ್ಮ ಲಿವರ್ ನಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ. ನಮ್ಮ ಲಿವರ್​ಗೆ ಕೊಲೆಸ್ಟ್ರಾಲ್ ಅನ್ನು ಸಾಗಿಸಲು ನಾವು ಸಾಕಷ್ಟು ಎಚ್‌ಡಿಎಲ್‌ಗಳನ್ನು ಹೊಂದಿರಬೇಕು. ಬೇಸಿಗೆಯಲ್ಲಿ ಈ ಎಚ್​ಡಿಎಲ್​ಗಳನ್ನು ಹೆಚ್ಚಿಸುವ ಹಣ್ಣುಗಳು ಇಲ್ಲಿವೆ.

ಬೆರಿ:

ಬೆರಿಗಳಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿದ್ದು, ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ನೈಸರ್ಗಿಕವಾಗಿ HDL ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Weight Loss: ಬೇಸಿಗೆಯಲ್ಲಿ ತೂಕ ಇಳಿಸಿಕೊಳ್ಳಲು ಈ 5 ಹಣ್ಣುಗಳನ್ನು ತಿನ್ನಿ

ಕಲ್ಲಂಗಡಿ:

ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಕಲ್ಲಂಗಡಿಯನ್ನು ಸಕ್ಕರೆ ತಿಂಡಿಗಳ ಬದಲು ಸೇವಿಸಬಹುದು.

ಕಿವಿ ಹಣ್ಣು:

ಕಿವಿ ಹಣ್ಣುಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟ ಸುಧಾರಿಸುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ.

ಅವಕಾಡೊ:

ಅವಕಾಡೊಗಳು ಹೃದಯಕ್ಕೆ ಆರೋಗ್ಯಕರ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅವಕಾಡೊಗಳು ಹೃದಯಕ್ಕೆ ಆರೋಗ್ಯಕರ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಅದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಿತ್ತಳೆ:

ಕಿತ್ತಳೆ ಹಣ್ಣಿನ ನಿಯಮಿತ ಸೇವನೆಯು HDL ಕೊಲೆಸ್ಟ್ರಾಲ್ ಅನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ತೂಕ ಇಳಿಸಲು ಸ್ವಿಮ್ಮಿಂಗ್ ಒಳ್ಳೆಯದಾ? ಸೈಕ್ಲಿಂಗ್ ಉತ್ತಮವಾ?

ಪಪ್ಪಾಯಿ:

ಪಪ್ಪಾಯಿ ಸಾಮಾನ್ಯ ಭಾರತೀಯ ಬೇಸಿಗೆ ಹಣ್ಣಾಗಿದ್ದು, ಇದು ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪೀಚ್:

ಪೀಚ್‌ ಹಣ್ಣುಗಳು ಮತ್ತೊಂದು ಬೇಸಿಗೆಯ ಹಣ್ಣಾಗಿದ್ದು, ಇದು ಎಚ್‌ಡಿಎಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವ ಪೋಷಕಾಂಶಗಳ ಉತ್ತಮ ಮೂಲವಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ