
ಹಲ್ಲಿಗಳ (lizards) ಕಾಟ ಇಲ್ಲದಿರುವ ಮನೆಯೇ ಇಲ್ಲ. ಮನೆಯ ಗೋಡೆಗಳ ಮೇಲೆ ಇವುಗಳ ಓಡಾಟ ಇದ್ದೇ ಇರುತ್ತದೆ. ಅನೇಕರು ಈ ಪುಟ್ಟ ಜೀವಿಯನ್ನು ಕಂಡು ಸಿಕ್ಕಾಪಟ್ಟೆ ಭಯಪಡುತ್ತಾರೆ. ಅದಕ್ಕಾಗಿಯೇ ಈ ಹಲ್ಲಿಗಳನ್ನು ಓಡಿಸಲು ಹಲವು ಸರ್ಕಸ್‌ಗಳನ್ನು ಮಾಡುತ್ತಾರೆ. ಆದ್ರೆ ಈ ರೀತಿ ಹಲ್ಲಿಗಳಲ್ಲಿಗೆ ಭಯ ಪಡುವ ಅಥವಾ ಅವುಗಳನ್ನು ಓಡಿಸುವ ಅವಶ್ಯಕತೆಯೇ ಇಲ್ಲ. ಅವುಗಳು ಮನೆಯಲ್ಲಿ ಇದ್ದರೆ ತುಂಬಾ ಒಳ್ಳೆಯಂದೆ. ಹೌದು ಅವು ನಿಮ್ಮ ಮನೆಯನ್ನು ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿಡಲು ಸಹಾಯ ಮಾಡುತ್ತವೆ. ಹಲ್ಲಿ ಮನೆಯಲ್ಲಿದ್ದರೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಕಂಡುಕೊಳ್ಳೋಣ ಬನ್ನಿ.
ಜನರು ಸಾಮಾನ್ಯವಾಗಿ ಹಲ್ಲಿಗಳು ಅಪಾಯಕಾರಿ, ಅವುಗಳಿಂದ ಆರೋಗ್ಯಕ್ಕೆ ತೊಂದರೆಗಳಾಗಬಹುದು ಎಂಬ ಭಯದಿಂದ ಅವುಗಳನ್ನು ಓಡಿಸಲು ಪ್ರಯತ್ನಿಸುತ್ತಾರೆ. ಆದರೆ ವಾಸ್ತವದಲ್ಲಿ, ಅವುಗಳಿಂದ ಮನೆಗೆ ತುಂಬಾನೇ ಪ್ರಯೋಜನಗಳಿವೆಯಂತೆ.
ಕೀಟ ನಿಯಂತ್ರಣ: ಹಲ್ಲಿಗಳು ಕೀಟಗಳನ್ನು ತಿನ್ನುವ ಮೂಲಕ ನೈಸರ್ಗಿಕವಾಗಿ ಅವುಗಳನ್ನು ನಿಯಂತ್ರಿಸುತ್ತವೆ. ನೊಣಗಳು, ಜಿರಳೆಗಳು ಮತ್ತು ಜೇಡಗಳು ಹಲ್ಲಿಗಳ ಪ್ರಾಥಮಿಕ ಆಹಾರವಾಗಿದ್ದು, ಮನೆಯಲ್ಲಿ ಓಡಾಡುವ ಈ ಜಿರಳೆ, ಕೀಟಗಳನ್ನು ತಿನ್ನುವ ಮೂಲಕ ಮನೆಯಲ್ಲಿ ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಜೊತೆಗೆ ಹಲ್ಲಿಗಳಿದ್ದರೆ ಕೀಟಗಳನ್ನು ಓಡಿಸಲು ಕೀಟ ನಾಶಕ ಸ್ಪ್ರೇಗಳನ್ನು ಬಳಸುವ ಅವಶ್ಯಕತೆಯೇ ಇರುವುದಿಲ್ಲ. ಕೀಟನಾಶಕ ಸಿಂಪಡಿಸುವಿಕೆಯು ಗಾಳಿಯನ್ನು ಕಲುಷಿತಗೊಳಿಸುವುದಲ್ಲದೆ, ಸಸ್ಯಗಳು ಮತ್ತು ಜೇನುನೊಣಗಳಂತಹ ಪ್ರಯೋಜನಕಾರಿ ಕೀಟಗಳಿಗೂ ಹಾನಿಕಾರಕವಾಗಬಹುದು. ಹಲ್ಲಿಗಳು ಇದನ್ನು ಹಾನಿಯಾಗದಂತೆ ತಡೆಯುತ್ತವೆ.
ಮನೆಯ ವಾತಾವರಣ ಆರೋಗ್ಯಕರವಾಗಿ ಎಂದರ್ಥ: ಮನೆಯಲ್ಲಿ ಹಲ್ಲಿಗಳಿದ್ದರೆ ನಿಮ್ಮ ಮನೆಯ ಪರಿಸರವು ಸಮತೋಲಿತ ಮತ್ತು ಆರೋಗ್ಯಕರವಾಗಿದೆ ಎಂಬುದ ಸಂಕೇತವಾಗಿದೆ. ಇವು ಮನೆಯ ನೈಸರ್ಗಿಕ ಕೀಟ ವ್ಯವಸ್ಥೆಯಾಗಿದ್ದು, ಮನೆಯೊಳಗೆ ಬರುವ ಕೀಟಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಅನಗತ್ಯ ಕೀಟಗಳಿಂದ ನಿಮ್ಮನ್ನು ರಕ್ಷಿಸುತ್ತವೆ. ಆದಾಗ್ಯೂ, ಅವು ನಿಮ್ಮ ಆಹಾರ ಅಥವಾ ಇತರ ವಸ್ತುಗಳ ಹತ್ತಿರ ಬರದಂತೆ ಎಚ್ಚರವಹಿಸಿ.
ಇದನ್ನೂ ಓದಿ: ಅಡುಗೆಗೆ ಮಾತ್ರವಲ್ಲ, ಗೃಹಪಯೋಗಿ ವಸ್ತುಗಳ ಸ್ವಚ್ಛತೆಗೂ ಬಳಸಬಹುದು ಉಪ್ಪು
ಸೊಳ್ಳೆಗಳ ಕಾಟದಿಂದ ಮುಕ್ತಿ ಒದಗಿಸುತ್ತವೆ: ಹಲ್ಲಿಗಳು ಸೊಳ್ಳೆಗಳನ್ನು ಬೇಟೆಯಾಡುವ ಅತ್ಯುತ್ತಮ ಜೀವಿಗಳಾಗಿವೆ. ಅವು ರೋಗಗಳನ್ನು ಹರಡುವ ಸೊಳ್ಳೆಗಳನ್ನು ತಿನ್ನುವ ಮೂಲಕ ನಿಮ್ಮ ಮನೆಯ ಆರೋಗ್ಯವನ್ನು ರಕ್ಷಿಸುತ್ತವೆ.
ಹೀಗೆ ಹಲ್ಲಿಗಳು ಕೀಟ, ನೋಣ, ಸೊಳ್ಳೆಗಳನ್ನು ನಿಮ್ಮ ಮನೆಯಿಂದ ದೂರವಿಡುವುದಲ್ಲದೆ, ಮನೆಯ ವಾತಾವರಣವನ್ನು ಸುರಕ್ಷಿತವಾಗಿ, ಸ್ವಚ್ಛವಾಗಿ ಮತ್ತು ಆರಾಮದಾಯಕವಾಗಿಡಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:54 pm, Wed, 14 January 26