AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆಗೆ ಮಾತ್ರವಲ್ಲ, ಗೃಹಪಯೋಗಿ ವಸ್ತುಗಳ ಸ್ವಚ್ಛತೆಗೂ ಬಳಸಬಹುದು ಉಪ್ಪು

ಆಹಾರದ ರುಚಿ ಹೆಚ್ಚಿಸಲು ಉಪ್ಪು ಬೇಕೇ ಬೇಕು. ಆದ್ರೆ ಉಪ್ಪು ರುಚಿ ಹೆಚ್ಚಿಸಲು ಮಾತ್ರಲ್ಲ ಗೃಹಪಯೋಗಿ ವಸ್ತುಗಳ ಸ್ವಚ್ಛತೆಗೂ ಸಹಕಾರಿ. ಹೌದು ಗೃಹೋಪಯೋಗಿ ವಸ್ತುಗಳಿಂದ ಕಲೆಗಳು, ತುಕ್ಕು ಮತ್ತು ಇತರ ಕಲೆಗಳನ್ನು ತೆಗೆದುಹಾಕುವಲ್ಲಿ ಇದು ತುಂಬಾ ಉಪಯುಕ್ತವಾಗಿದೆ ಈ ಅಗ್ಗದ ಉಪ್ಪು ಮನೆಯ ಕೆಲಸಗಳನ್ನು ಹೇಗೆ ಸುಲಭಗೊಳಿಸುತ್ತದೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ಅಡುಗೆಗೆ ಮಾತ್ರವಲ್ಲ, ಗೃಹಪಯೋಗಿ ವಸ್ತುಗಳ ಸ್ವಚ್ಛತೆಗೂ ಬಳಸಬಹುದು ಉಪ್ಪು
ಸಾಂದರ್ಭಿಕ ಚಿತ್ರ Image Credit source: Pinterest
ಮಾಲಾಶ್ರೀ ಅಂಚನ್​
|

Updated on: Jan 13, 2026 | 3:26 PM

Share

ಸಾಮಾನ್ಯವಾಗಿ ಮನೆ ಕ್ಲೀನ್‌ ಮಾಡಲು, ದುಬಾರಿ ಕ್ಲೀನರ್‌ಗಳನ್ನು ಬಳಸುತ್ತೇವೆ. ಇನ್ನೂ ಗೃಹಪಯೋಗಿ ವಸ್ತುಗಳ ಕಲೆ, ಕೊಳೆಗಳನ್ನು ತೆಗೆದುಹಾಕಲು ಹಲವಾರು ಸರ್ಕಸ್‌ಗಳನ್ನು ಮಾಡುತ್ತೇವೆ. ಇದರ ಬದಲು ಗೃಹಯಪಯೋಗಿ ವಸ್ತುಗಳನ್ನು ಸ್ವಚ್ಛಗೊಳಿಸಲು ಉಪ್ಪನ್ನು (Salt) ಬಳಸಬಹುದು. ಉಪ್ಪು ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ, ಸುಟ್ಟ ಪ್ಯಾನ್‌ಗಳು, ಕೊಳೆಯಾಗಿರುವ ಇಸ್ತ್ರಿ ಪೆಟ್ಟಿಗೆ, ಕಲೆ ಹಾಗೂ ತಳ ಹಿಡಿದಿರುವ ಪಾತ್ರೆಗಳನ್ನು ಸುಲಭವಾಗಿ ಸ್ವಚ್ಛಗೊಳಿಸುತ್ತದೆ. ಇದು ನೈಸರ್ಗಿಕ ಹಾಗೆಯೇ ಅಗ್ಗದ ಕ್ಲೀನರ್‌ ಆಗಿದ್ದು, ಗೃಹಪಯೋಗಿ ವಸ್ತುಗಳನ್ನು ಕ್ಲೀನ್‌ ಮಾಡಲು ಉಪ್ಪು ಹೇಗೆ ಸಹಕಾರಿ ಎಂಬುದನ್ನು ತಿಳಿಯಿರಿ.

ಗೃಹಪಯೋಗಿ ವಸ್ತುಗಳನ್ನು ಸ್ವಚ್ಛಗೊಳಿಸಲು ಸಹಕಾರಿ ಉಪ್ಪು:

ಚಾಕುಗಳ ಸ್ವಚ್ಛತೆ: ಸಾಮಾನ್ಯವಾಗಿ, ಚಾಕುಗಳು ಬಳಸಿದ ನಂತರ ತುಕ್ಕು ಹಿಡಿಯಬಹುದು. ಈ ತುಕ್ಕು ತೆಗೆದುಹಾಕಲು, ನೀವು ಉಪ್ಪನ್ನು ಬಳಸಬಹುದು. ಚಾಕುವಿನ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ, ಅದರ ಮೇಲೆ ವಿನೆಗರ್ ಸುರಿಯಿರಿ ಮತ್ತು  ಅದನ್ನು ಒಂದು ಬಟ್ಟೆಯಿಂದ ಮುಚ್ಚಿ ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಒರೆಸಿ. ನೀರಿನಿಂದ ತೊಳೆಯಿರಿ. ಇದು ತುಕ್ಕನ್ನು ಹೋಗಲಾಡಿಸುತ್ತದೆ.

ಬಿಳಿ ಬಟ್ಟೆಗಳ ಸ್ವಚ್ಛತೆ: ಬಿಳಿ ಶರ್ಟ್ ಅಥವಾ ಟಿ-ಶರ್ಟ್ ಹಳೆಯದಾಗಿ ಅಥವಾ ಮಸುಕಾಗಿ ಕಾಣಲು ಪ್ರಾರಂಭಿಸಿದರೆ,  ಅದನ್ನು ಬಕೆಟ್‌ನಲ್ಲಿ ಹಾಕಿ ನಂತರ ಸ್ವಲ್ಪ ಟೂತ್‌ಪೇಸ್ಟ್, 1 ಟೀಚಮಚ ಉಪ್ಪು, ಸ್ವಲ್ಪ ಡಿಟೆರ್ಜಂಟ್ ಲಿಕ್ವಿಡ್‌  ಮತ್ತು ಸ್ವಲ್ಪ ಬೆಚ್ಚಗಿನ ನೀರನ್ನು ಸೇರಿಸಿ. ಹತ್ತು ಹದಿನೈದು ನಿಮಿಷಗಳ ಕಾಲ ಹಾಗೆಯೇ ಬಿಡಿ. ಈಗ ಅದನ್ನು ನಿಮ್ಮ ಕೈಗಳಿಂದ ಸ್ಕ್ರಬ್ ಮಾಡಿ ನಂತರ ಶುದ್ಧ ನೀರಿನಿಂದ ತೊಳೆಯಿರಿ. ಇದು ಬಟ್ಟೆಗೆ ಹೊಳಪನ್ನು ನೀಡುತ್ತದೆ.

ಬಟ್ಟೆಗಳ ಮೇಲಿನ ಎಣ್ಣೆಯ ಕಲೆ ತೆಗೆದುಹಾಕುತ್ತದೆ: ನಿಮ್ಮ ಬಟ್ಟೆಗಳ ಮೇಲೆ ಎಣ್ಣೆಯ ಕಲೆ ಇದ್ದರೆ, ಅದನ್ನು ತೊಡೆದುಹಾಕಲು ನೀವು ಉಪ್ಪನ್ನು ಬಳಸಬಹುದು. ಎಣ್ಣೆ ಅಂಟಿದ ಜಾಗದ ಮೇಲೆ ಸ್ವಲ್ಪ ಉಪ್ಪು ಮತ್ತು ಡಿಟೆರ್ಜಂಟ್ ಲಿಕ್ವಿಡ್‌ ಹಾಕಿ, ಅದನ್ನು ಕೈಗಳಿಂದ ಉಜ್ಜಿದರೆ, ಎಣ್ಣೆಯ ಕಲೆ ಮಾಯವಾಗುತ್ತದೆ.

ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತದೆ: ಸುಟ್ಟ ಪ್ಯಾನ್‌ಗಳನ್ನು ಉಪ್ಪಿನಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು. ಅಡುಗೆ  ಪಾತ್ರೆಗಳು ತಳ ಹಿಡಿಯುತ್ತವೆ ಮತ್ತು ಅವುಗಳ ಮೇಲಿನ ಕಪ್ಪು ಲೇಪನವನ್ನು ತೆಗೆದುಹಾಕಲು ಕಷ್ಟವಾಗುತ್ತದೆ. ಹಾಗಿರುವಾಗ ಉಪ್ಪನ್ನು ಬಳಸಿ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು. ಇದಕ್ಕಾಗಿ ತಳ ಹಿಡಿದ ಪಾತ್ರೆಗೆ ಉಪ್ಪನ್ನು ಹಾಕಿ ಅದನ್ನು ನಿಂಬೆ ಹೋಳಿನಿಂದ ಉಜ್ಜಿಕೊಳ್ಳಿ. ಇದು ಕಲೆಯನ್ನು ಬಲು ಸುಲಭವಾಗಿ ತೆಗೆದುಹಾಕುತ್ತದೆ.

ಇದನ್ನೂ ಓದಿ: ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ನೆಲ ಒರೆಸುವ ನೀರಿಗೆ ಎರಡು ವಸ್ತುಗಳನ್ನು ಸೇರಿಸಿ

ಇಸ್ತ್ರಿ ಪೆಟ್ಟಿಗೆಗಳನ್ನು ಸ್ವಚ್ಛಗೊಳಿಸುತ್ತದೆ: ಪದೇ ಪದೇ ಉಪಯೋಗ ಮಾಡುವ ಕಾರಣ ಇಸ್ತ್ರಿ ಪೆಟ್ಟಿಗೆಗಳಲ್ಲಿ ಕಲೆಗಳು ಹಾಗೆಯೇ ಉಳಿದುಬಿಡುತ್ತದೆ. ಇದನ್ನು ತೆಗೆದುಹಾಕಲು ಉಪ್ಪನ್ನು ಬಳಸಬಹುದು. ಇದಕ್ಕಾಗಿ ಇಸ್ತ್ರಿ ಪೆಟ್ಟಿಗೆ ಕಬ್ಬಿಣದ ತಟ್ಟೆಯ ಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ ದಪ್ಪ ಬಟ್ಟೆಯಿಂದ ನಿಧಾನವಾಗಿ ಉಜ್ಜಿಕೊಳ್ಳಿ, ಇದು ನಿಮಿಷಗಳಲ್ಲಿ ಕಲೆ ತೆಗೆದುಹಾಕುತ್ತದೆ.

ಕಾಫಿ ಮಗ್‌ಗಳ ಕಲೆಯನ್ನು ತೆಗೆದುಹಾಕುತ್ತದೆ: ಕಾಫಿ ಅಥವಾ ಟೀ ಕುಡಿದ ನಂತರ, ಮಗ್‌ಗಳಲ್ಲಿ ಮೊಂಡುತನದ ಕಲೆಗಳು ಕಾಣಿಸಿಕೊಳ್ಳುತ್ತವೆ, ಇವುಗಳು ಅಷ್ಟು ಸುಲಭವಾಗಿ ಹೋಗುವುದಿಲ್ಲ. ಹೀಗಿರುವಾಗ ನೀವು ಉಪ್ಪನ್ನು ಬಳಸಬಹುದು.  ಮಗ್‌ನಲ್ಲಿ ಕಲೆಯಾದ ಜಾಗಕ್ಕೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ ಮತ್ತು ಸ್ಪಂಜು ಅಥವಾ ಬಟ್ಟೆಯಿಂದ ನಿಧಾನವಾಗಿ ಉಜ್ಜಿಕೊಳ್ಳಿ. ಉಪ್ಪಿನ ಅಪಘರ್ಷಕ ಕ್ರಿಯೆಯು ಕಲೆಗಳನ್ನು ಸಡಿಲಗೊಳಿಸುತ್ತದೆ ಮತ್ತು ಕಪ್ ಸ್ವಲ್ಪ ಸಮಯದೊಳಗೆ ಅದರ ಸ್ವಚ್ಛ, ಹೊಳೆಯುವ ಸ್ಥಿತಿಗೆ ಮರಳುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ!
ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ!
ಕಿಚ್ಚನ ಎದುರೇ ಗಿಲ್ಲಿ ಗಿಲ್ಲಿ ಎಂದು ಕೂಗಿದ ಫ್ಯಾನ್ಸ್
ಕಿಚ್ಚನ ಎದುರೇ ಗಿಲ್ಲಿ ಗಿಲ್ಲಿ ಎಂದು ಕೂಗಿದ ಫ್ಯಾನ್ಸ್
ಗೋವಾದಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ ವಿದೇಶಿ ಮಹಿಳೆ
ಗೋವಾದಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ ವಿದೇಶಿ ಮಹಿಳೆ
ಬಿಗ್ ಬಾಸ್​​ನಿಂದ ಬಂದ ರಾಶಿಕಾ ಶೆಟ್ಟಿಗೆ ಸರ್​​​ಪ್ರೈಸ್ ಪಾರ್ಟಿ; ಇಲ್ಲಿದೆ
ಬಿಗ್ ಬಾಸ್​​ನಿಂದ ಬಂದ ರಾಶಿಕಾ ಶೆಟ್ಟಿಗೆ ಸರ್​​​ಪ್ರೈಸ್ ಪಾರ್ಟಿ; ಇಲ್ಲಿದೆ
ಬುರ್ಖಾ ಹಾಕಿಕೊಂಡು ಓಡಾಡಿದ್ರೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಅತ್ಯಾಚಾರ ಆರೋಪಿ
ಬುರ್ಖಾ ಹಾಕಿಕೊಂಡು ಓಡಾಡಿದ್ರೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಅತ್ಯಾಚಾರ ಆರೋಪಿ
ಜನರ ಸಪೋರ್ಟ್ ಹೇಗಿದೆ ಎಂಬುದನ್ನು ಸ್ಪರ್ಧಿಗಳಿಗೆ ತೋರಿಸಿದ ಬಿಗ್ ಬಾಸ್ 
ಜನರ ಸಪೋರ್ಟ್ ಹೇಗಿದೆ ಎಂಬುದನ್ನು ಸ್ಪರ್ಧಿಗಳಿಗೆ ತೋರಿಸಿದ ಬಿಗ್ ಬಾಸ್