Chanakya Niti: ತಪ್ಪಿಯೂ ಇಂತಹ ಜನರನ್ನು ನಿಮ್ಮ ಮನೆಗೆ ಆಹ್ವಾನಿಸಬೇಡಿ
ಆಚಾರ್ಯ ಚಾಣಕ್ಯರು ಜೀವನಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ. ಈ ಸಲಹೆಗಳನ್ನು ಪಾಲಿಸುವ ಮೂಲಕ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ಅದೇ ರೀತಿ ಜೀವನದಲ್ಲಿ ಮುಂದಾಗುವ ಅಪಾಯಗಳನ್ನು ತಪ್ಪಿಸಲು ಈ ಒಂದಷ್ಟು ಜನರಿಂದ ಅಂತರ ಕಾಯ್ದುಕೊಳ್ಳಬೇಕು, ಅಂತಹ ಜನರನ್ನು ಎಂದಿಗೂ ಮನೆಗೆ ಆಹ್ವಾನಿಸಬಾರದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹಾಗಿದ್ರೆ ಯಾವ ರೀತಿಯ ಜನರನ್ನು ಮನೆಗೆ ಆಹ್ವಾನಿಸಬಾರದು ಎಂಬುದನ್ನು ನೋಡೋಣ ಬನ್ನಿ.

ಸಂಬಂಧಿಕರು, ಸ್ನೇಹಿತರನ್ನು ಮನೆಗೆ ಆಹ್ವಾನಿಸುವುದು ಸಾಮಾನ್ಯ. ಹಬ್ಬ ಹರಿದಿನಗಳು ಅಥವಾ ಇನ್ಯಾವುದೇ ಕಾರ್ಯಕ್ರಮ ಇರುವ ಸಂದರ್ಭದಲ್ಲಿ ಒಂದಷ್ಟು ಜನರನ್ನು ಮನೆಗೆ ಆಹ್ವಾನಿಸುತ್ತೇವೆ. ಈ ರೀತಿ ಎಲ್ಲರನ್ನೂ ಆಹ್ವಾನಿಸುವುದು ಸರಿಯಲ್ಲ, ಕೆಲವರು ತಮ್ಮೊಂದಿಗೆ ವಿನಾಶವನ್ನೇ ಹೊತ್ತು ತರುತ್ತಾರೆ. ಅಂತಹವರಿಂದ ಸಾಧ್ಯವಾದಷ್ಟು ದೂರವಿರಬೇಕು ಎಂದು ಆಚಾರ್ಯ ಚಾಣಕ್ಯರು (Acharya Chanakya) ಹೇಳಿದ್ದಾರೆ. ಹಾಗಿದ್ದರೆ ಮುಂದಾಗುವ ಅಪಾಯಗಳನ್ನು ತಪ್ಪಿಸಲು ಯಾವ ರೀತಿಯ ಜನರನ್ನು ಮನೆಗೆ ಆಹ್ವಾನಿಸಬಾರದು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.
ಇಂತಹ ಜನರನ್ನು ತಪ್ಪಿಯೂ ಮನೆಗೆ ಆಹ್ವಾನಿಸಬೇಡಿ:
ಸ್ವಾರ್ಥಿ ಜನರು: ನೀವು ಎಂದಿಗೂ ಸ್ವಾರ್ಥಿಗಳನ್ನು ನಿಮ್ಮ ಮನೆಗೆ ಆಹ್ವಾನಿಸಬಾರದು. ಅಂತಹ ಜನರು ನಿಮ್ಮ ಯೋಗಕ್ಷೇಮದ ಬಗ್ಗೆ ಎಂದಿಗೂ ಯೋಚಿಸುವುದಿಲ್ಲ. ಅವರ ಸಂಪೂರ್ಣ ಗಮನವು ಅವರ ಸ್ವಂತ ಹಿತಾಸಕ್ತಿಗಳು ಮತ್ತು ಸ್ವಾರ್ಥದ ಮೇಲೆ ಇರುತ್ತದೆ. ಅಂತಹವರಿಂದ ಅಪಾಯಗಳು ಎದುರಾಗುವ ಸಾಧ್ಯತೆ ಹೆಚ್ಚು ಎಂದು ಚಾಣಕ್ಯ ಹೇಳುತ್ತಾರೆ.
ಎರಡು ಮುಖದ ಜನರು: ಆಚಾರ್ಯ ಚಾಣಕ್ಯರ ಪ್ರಕಾರ, ಎರಡು ಮುಖದ ವ್ಯಕ್ತಿಯನ್ನು ನಿಮ್ಮ ಮನೆಗೆ ಆಹ್ವಾನಿಸುವ ಮೊದಲು ನೀವು ಎರಡು ಬಾರಿ ಯೋಚಿಸಬೇಕು. ಅಂತಹ ಜನರು ನಿಮ್ಮ ಮುಂದೆ ಒಂದು ಮಾತನಾಡುತ್ತಾರೆ, ನಿಮ್ಮ ಬೆನ್ನ ಹಿಂದೆ ನಿಮ್ಮ ಬಗ್ಗೆ ಕೆಟ್ಟದ್ದು ಮಾತನಾಡುತ್ತಾರೆ. ಇವರಿಂದ ನಿಮಗೆ ಅಪಾಯವೇ ಹೆಚ್ಚು. ಆದ್ದರಿಂದ ಇಂತಹ ಜನರಿಂದ ದೂರವಿರಿ.
ಇತರರ ನೋವಲ್ಲಿ ಆನಂದ ಪಡೆಯುವ ಜನರು: ಇತರರನ್ನು ನೋಯಿಸುವುದರಲ್ಲಿ ಸಂತೋಷವನ್ನು ಕಂಡುಕೊಳ್ಳುವ ಜನರನ್ನು ಎಂದಿಗೂ ಆಹ್ವಾನಿಸಬಾರದು. ಏಕೆಂದರೆ ಅವರ ಕೆಟ್ಟ ಮನಸ್ಥಿತಿಯಿಂದ ನಿಮಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹ ವ್ಯಕ್ತಿಗಳಿಂದ ನೀವು ಸಾಧ್ಯವಾದಷ್ಟು ಅಂತರವನ್ನು ಕಾಯ್ದುಕೊಳ್ಳಬೇಕು.
ಅಸೂಯೆ ಪಡುವ ಜನ: ಇನ್ನೊಬ್ಬರ ಏಳಿಗೆಯನ್ನು ಕಂಡು ಅಸೂಯೆ ಪಡುವ ಜನರು ಎಂದಿಗೂ ನಿಮಗೆ ಒಳ್ಳೆಯದನ್ನು ಬಯಸುವುದಿಲ್ಲ. ಅವರನ್ನು ನೀವು ಮನೆಗೆ ಆಹ್ವಾನಿಸಿದರೆ ಅವರು ನಿಮ್ಮ ಮನೆ ಹಾಗೂ ನಿಮ್ಮ ಯಶಸ್ಸಿನ ಬಗ್ಗೆ ಹೆಚ್ಚು ಅಸೂಯೆ ಪಡುತ್ತಾರೆ. ಅಂತಹ ವ್ಯಕ್ತಿಗಳಿಂದ ಸಾಧ್ಯವಾದಷ್ಟು ದೂರವಿರಬೇಕು ಎಂದು ಚಾಣಕ್ಯ ಹೇಳಿದ್ದಾರೆ.
ನಕಾರಾತ್ಮಕ ಜನ: ಯಾವಾಗಲೂ ನಕಾರಾತ್ಮಕವಾಗಿ ಮಾತನಾಡುವ ಜನರಿಂದ ದೂರವಿರಿ, ಏಕೆಂದರೆ ಅವರು ನಿಮ್ಮಲ್ಲೂ ನಕಾರಾತ್ಮಕತೆಯನ್ನು ತುಂಬಬಹುದು ಮತ್ತು ಅವರು ಮನೆಯ ಸಂತೋಷದ ವಾತಾವರಣವನ್ನೂ ಹಾಳು ಮಾಡಬಹುದು.
ಇದನ್ನೂ ಓದಿ: ಚಾಣಕ್ಯರ ಪ್ರಕಾರ ಶ್ರೀಮಂತರಾಗುವ ಮುನ್ನ ಜನರಲ್ಲಿ ಈ ಬದಲಾವಣೆಗಳು ಕಾಣಿಸುತ್ತವಂತೆ
ಸುಳ್ಳುಗಾರರು: ಸುಳ್ಳುಗಾರರನ್ನು ನಿಮ್ಮ ಮನೆಗೆ ಆಹ್ವಾನಿಸುವುದರಿಂದ ಸಮಸ್ಯೆಗಳು ಉಂಟಾಗುತ್ತವೆ ಮತ್ತು ನಿಮ್ಮ ಇದರಿಂದ ನಿಮ್ಮ ಖ್ಯಾತಿಗೂ ಹಾನಿಯಾಗುತ್ತದೆ ಎಂದು ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ.
ಅಪ್ರಾಮಾಣಿಕರು: ಅಪ್ರಾಮಾಣಿಕರು ಅಥವಾ ಭ್ರಷ್ಟ ವ್ಯಕ್ತಿಗಳನ್ನು ಸಹ ಆಹ್ವಾನಿಸಬಾರದು. ಇಂತಹ ಅನೈತಿಕ ವ್ಯಕ್ತಿಗಳನ್ನು ಮನೆಗೆ ಆಹ್ವಾನಿಸಿದರೆ ನಿಮ್ಮ ಗೌರವವೂ ಹಾಳಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




