Benefits of Rice: ರಾತ್ರಿ ಹೊತ್ತು ಅನ್ನ ತಿನ್ನಬೇಕೋ ಬೇಡವೋ..? ಹಾಗಾದರೆ ಅನ್ನ ಸೇವಿಸ ಬೇಕಾದ ಸಮಯ ಯಾವುದು..!

| Updated By: ಗಂಗಾಧರ​ ಬ. ಸಾಬೋಜಿ

Updated on: Jun 26, 2022 | 7:29 AM

Right Time to Eat Rice: ಅನ್ನವನ್ನು ಮಾಡುವುದು ಎಷ್ಟು ಮಿತವ್ಯಯವೋ, ಅಷ್ಟೇ ಆರೋಗ್ಯಕರವೂ ಆಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಸಾಮಾನ್ಯವಾಗಿ ರಾತ್ರಿ ಅನ್ನ ತಿನ್ನಬೇಕೋ, ಬೇಡವೋ ಎಂದು ಸಾಕಷ್ಟು ಅನುಮಾನಗಳು ಹುಟ್ಟಿಕೊಳ್ಳುತ್ತವೆ.

Benefits of Rice: ರಾತ್ರಿ ಹೊತ್ತು ಅನ್ನ ತಿನ್ನಬೇಕೋ ಬೇಡವೋ..? ಹಾಗಾದರೆ ಅನ್ನ ಸೇವಿಸ ಬೇಕಾದ ಸಮಯ ಯಾವುದು..!
ಅನ್ನ
Follow us on

ಅನ್ನದ ಬಗ್ಗೆ ಜನರಲ್ಲಿ ವಿಭಿನ್ನ ಗ್ರಹಿಕೆಗಳು ಪ್ರಚಲಿತದಲ್ಲಿವೆ. ಅನ್ನ (Rice) ವನ್ನು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಅಥವಾ ಹೊಟ್ಟೆ ಹೊರಬರುತ್ತದೆ ಎಂದು ಕೆಲವರು ಊಹಿಸುವುದರೊಂದಿಗೆ ನಂಬುವುದುಂಟು. ಆದರೆ ಕೆಲವರು ಅನ್ನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸುತ್ತಾರೆ. ಅನ್ನವನ್ನು ಮಾಡುವುದು ಎಷ್ಟು ಮಿತವ್ಯಯವೋ, ಅಷ್ಟೇ ಆರೋಗ್ಯಕರವೂ ಆಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಹೆಚ್ಚಿನ ಜನರು ಅದನ್ನು ತಿನ್ನಲು ಸರಿಯಾದ ಸಮಯ ಮತ್ತು ಪ್ರಮಾಣ ಗೊತ್ತಿಲ್ಲದಿರುವುದರಿಂದ ಬೊಜ್ಜು, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ರಾತ್ರಿ ಅನ್ನ ತಿನ್ನಬೇಕೋ, ಬೇಡವೋ ಎಂದು ಸಾಕಷ್ಟು ಅನುಮಾನಗಳು ಹುಟ್ಟಿಕೊಳ್ಳುತ್ತವೆ. Evogel.co.uk ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಸಮಸ್ಯೆ ಅನ್ನವನ್ನು ತಿನ್ನುವುದರಲ್ಲಿ ಅಲ್ಲ, ಆದರೆ ಅದನ್ನು ತಪ್ಪಾದ ಸಮಯದಲ್ಲಿ ತಿನ್ನುವುದರಲ್ಲಿದೆ ಎಂದು ಸಾಬೀತಾಗಿದೆ.

ಹಾಗಾದರೆ ಅನ್ನವನ್ನು ತಿನ್ನುವ ಸರಿಯಾದ ಸಮಯ ಯಾವುದು?

ಯಾವುದೇ ಆಹಾರವು ದೇಹಕ್ಕೆ ಉಪಯುಕ್ತವಾಗಲು ನಿರ್ದಿಷ್ಟ ಸಮಯವನ್ನು ಹೊಂದುವುದು ಅವಶ್ಯಕ. ಯಾವುದೇ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಸಮಯಕ್ಕೆ ಸೇವಿಸುವುದು ಉತ್ತಮ. ಇಲ್ಲವಾದರೆ ನಿಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು. ನೀವು ತೂಕವನ್ನು ಕಳೆದುಕೊಳ್ಳಬಯಸಿದ್ದರೆ ಅನ್ನ ತಿನ್ನಬೇಡಿ. ಇದರ ಹೊರತಾಗಿ, ನೀವು ಅನ್ನವನ್ನು ತಿನ್ನುತ್ತಿದ್ದರೂ, ರಾತ್ರಿಯಲ್ಲಿ ಬ್ರೌನ್ ರೈಸ್​ನ್ನು ಮಾತ್ರ ತಿನ್ನಿ, ಇದರಿಂದ ನೀವು ಕಾರ್ಬೋಹೈಡ್ರೇಟ್ಗಳ ಬದಲಿಗೆ ಫೈಬರ್​ನ್ನು ಅಂಶವನ್ನು ಪಡೆಯಬಹುದು. ಇದರೊಂದಿಗೆ, ಹೆಚ್ಚಿನ ಪ್ರಮಾಣದ ಪ್ರೋಟೀನ್​ನ್ನು ಸಹ ನೀವು ಪಡೆಯುತ್ತೀರಿ.

ಇದನ್ನೂ ಓದಿ: Spiritual: ಸೂರ್ಯನನ್ನು ಏಕೆ ಆರಾಧಿಸಬೇಕು? ಮಹತ್ವ, ಪೂಜಾ ವಿಧಿ, ಆರಾಧಿಸುವ ಕ್ರಮ ಹೀಗಿದೆ

1. ಅನ್ನವನ್ನು ತಿನ್ನಲು ಯಾವಾಗಲೂ ದಿನದ ಸಮಯವನ್ನು ಆರಿಸಿ.
2. ಅನ್ನ ನಮಗೆ ಶಕ್ತಿಯನ್ನು ನೀಡುತ್ತದೆ. ಹಗಲಿನಲ್ಲಿ ತಿನ್ನುವ ಅನ್ನವು ನಮಗೆ ಶಕ್ತಿ ನೀಡುತ್ತದೆ.
3. ಅನ್ನದಲ್ಲಿರುವ ಕಾರ್ಬೋಹೈಡ್ರೇಟ್‌ಗಳು ನಮಗೆ ಶಕ್ತಿ ನೀಡಲು ಕೆಲಸ ಮಾಡುತ್ತವೆ.
4. ದಿನದಲ್ಲಿ ತಿಂದ ಅನ್ನ ಸುಲಭವಾಗಿ ಜೀರ್ಣವಾಗುತ್ತದೆ.
5. ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆಯನ್ನು ಹೋಗಲಾಡಿಸಲು ಅನ್ನ ಕೂಡ ಪರಿಣಾಮಕಾರಿಯಾಗಿದೆ.
6. ಅನ್ನ ಚರ್ಮ ಮತ್ತು ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ.
7. ಅನ್ನ ಹೊಟ್ಟೆಗೆ ತುಂಬಾ ಪ್ರಯೋಜನಕಾರಿ. ಬೇಯಿಸಿದ ಅನ್ನ ಸುಲಭವಾಗಿ ಜೀರ್ಣವಾಗುತ್ತದೆ.

ಇದನ್ನೂ ಓದಿ: ‘ಸಲಾರ್ ಚಿತ್ರದಲ್ಲಿ ನಾನೂ ನಟಿಸುತ್ತಿದ್ದೇನೆ’; ಬ್ರೇಕಿಂಗ್ ನ್ಯೂಸ್ ನೀಡಿದ ನಟ ಪೃಥ್ವಿರಾಜ್​ ಸುಕುಮಾರನ್