Jackfruit: ಮಧುಮೇಹಿಗಳು ಹಲಸಿನ ಹಣ್ಣು ಸೇವನೆ ಮಾಡಬಹುದು, ಆದರೆ…

ಮಧುಮೇಹ-ಸ್ನೇಹಿ ಆಹಾರಗಳಲ್ಲಿ ಒಂದು ಹಲಸಿನ ಹಣ್ಣು, ಹೌದು  ಹಲಸಿನ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ, ರೈಬೋಫ್ಲಾವಿನ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ತಾಮ್ರ, ಮ್ಯಾಂಗನೀಸ್ ಮತ್ತು ಉತ್ಕರ್ಷಣ ನಿರೋಧಕಗಳು ತುಂಬಿವೆ. ಇದು 100 ಪ್ರಮಾಣದಲ್ಲಿ ಸುಮಾರು 50-60 ರ ಮಧ್ಯಮ ಗ್ಲೈಸೆಮಿಕ್ ಇಂಡೆಕ್ಸ್ (GI) ಅನ್ನು ಹೊಂದಿದೆ ಎಂದು ಮುಂಬೈನ ಅಪೋಲೋ ಸ್ಪೆಕ್ಟ್ರಾ ಆಸ್ಪತ್ರೆಯ ಆಹಾರ ತಜ್ಞ ಡಾ.ಜಿನಾಲ್ ಪಟೇಲ್ ಹೇಳಿದ್ದಾರೆ.

Jackfruit: ಮಧುಮೇಹಿಗಳು ಹಲಸಿನ ಹಣ್ಣು ಸೇವನೆ ಮಾಡಬಹುದು, ಆದರೆ...
Jackfruit
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 25, 2022 | 7:07 PM

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಭಾರತದಲ್ಲಿ 20 ಮತ್ತು 70 ವರ್ಷ ವಯಸ್ಸಿನ ಸುಮಾರು 8.7 ಶೇಕಡಾ ಜನರು ಮಧುಮೇಹ – ದೀರ್ಘಕಾಲದ ಚಯಾಪಚಯ ರೋಗದಿಂದ ಬಳಲುತ್ತಿದ್ದರೆ ಎಂದು ಹೇಳಲಾಗುತ್ತಿದೆ. ಇದೀಗ ಭಾರತಕ್ಕೆ ದೊಡ್ಡ ಸವಾಲು ಈ ಕಾರಣಕ್ಕೆ ಮಧುಮೇಹ ಕಾಯಿಲೆ ಸರಿಯಾದ ಚಿಕಿತ್ಸೆ ಸಿಗದೇ ಈ ರೋಗದಿಂದ ತುಂಬಾ ಆಂತಕ ಸೃಷ್ಟಿಯಾಗಿತ್ತು. ಒಂದು ವೇಳೆ ಇದನ್ನು ಹೀಗೆ ಬಿಟ್ಟರೆ ಕಣ್ಣುಗಳು, ಹೃದಯ, ಮೂತ್ರಪಿಂಡಗಳು ಮತ್ತು ದೇಹದ ಇತರ ಅನೇಕ ಭಾಗಗಳ ಮೇಲೆ ಪರಿಣಾಮ ಬೀರಬಹುದು. ಮಧುಮೇಹ ಅಥವಾ ಪೂರ್ವ-ಮಧುಮೇಹವನ್ನು ಹೊಂದಿರುವವರು ತಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಏಕೆಂದರೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರದಲ್ಲಿ ಬದಲಾವಣೆ ಅಗತ್ಯ ಎಂದು ವೈದ್ಯರ ಅಧ್ಯಯನ ಹೇಳುತ್ತದೆ. ಮಧುಮೇಹ-ಸ್ನೇಹಿ ಆಹಾರಗಳನ್ನು ಸೇವನೆ ಮಾಡುವುದು ಉತ್ತಮ.

ಮಧುಮೇಹ-ಸ್ನೇಹಿ ಆಹಾರಗಳಲ್ಲಿ ಒಂದು ಹಲಸಿನ ಹಣ್ಣು, ಹೌದು  ಹಲಸಿನ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ, ರೈಬೋಫ್ಲಾವಿನ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ತಾಮ್ರ, ಮ್ಯಾಂಗನೀಸ್ ಮತ್ತು ಉತ್ಕರ್ಷಣ ನಿರೋಧಕಗಳು ತುಂಬಿವೆ. ಇದು 100 ಪ್ರಮಾಣದಲ್ಲಿ ಸುಮಾರು 50-60 ರ ಮಧ್ಯಮ ಗ್ಲೈಸೆಮಿಕ್ ಇಂಡೆಕ್ಸ್ (GI) ಅನ್ನು ಹೊಂದಿದೆ ಎಂದು ಮುಂಬೈನ ಅಪೋಲೋ ಸ್ಪೆಕ್ಟ್ರಾ ಆಸ್ಪತ್ರೆಯ ಆಹಾರ ತಜ್ಞ ಡಾ.ಜಿನಾಲ್ ಪಟೇಲ್ ಹೇಳಿದ್ದಾರೆ. ಆದರೆ, ಮಧುಮೇಹಿಗಳು ಕಡಿಮೆ ಗ್ಲೈಸೆಮಿಕ್ ಲೋಡ್ ಅನ್ನು ಹೊಂದಿರುವ  ಹಲಸಿನ ಹಣ್ಣಗಳನ್ನು ಸೇವನೆ ಮಾಡಬೇಕು. ಇದು ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ.

ತಜ್ಞರು ಹೇಳುವಂತೆ ಮಧುಮೇಹ ರೋಗಿಳು ಇದನ್ನು   ಹೆಚ್ಚು ಸೇವನೆ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. “ಮಧುಮೇಹ ರೋಗಿಗಳು ಹಸಿ ಹಲಸಿನ ಹಣ್ಣನ್ನು ಮಿತವಾಗಿ ಸೇವಿಸಬೇಕು. ಇದರಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಇದೆ, ಇದು ದೇಹದ ದೈನಂದಿನ ಚಟುವಟಿಕೆಗಳನ್ನು ಪೂರೈಸಲು ನಿಮಗೆ ಸಹಾಯ ಮಾಡುತ್ತದೆ.  ಹಸಿ ಹಲಸು ಮಧುಮೇಹಿಗಳಿಗೆ ಉತ್ತಮ ಆಯ್ಕೆಯಾಗಿದೆ. ಇದು ಇತರ ಆಹಾಗಳಿಗಿಂತ  ಕಡಿಮೆ ಸಕ್ಕರೆ ಅಂಶವನ್ನು ಹೊಂದಿದೆ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಆದರೆ, ಇದನ್ನು ಸೇವಿಸಿದ ನಂತರ ಸಕ್ಕರೆಯ ಮಟ್ಟವನ್ನು ಗಮನಿಸಬೇಕು ಎಂದಿದ್ದಾರೆ.

ಹಲಸಿನ ಹಣ್ಣ ಮಧುಮೇಹಿಗೆ ಉತ್ತಮ ಮತ್ತು ಇದನ್ನು ಹೇಗೆ ತಿನ್ನಬೇಕು , ಮಧುಮೇಹಿಗೆ ಇದು ಆರೋಗ್ಯ ಸ್ನೇಹಿ ಆಹಾರವೇ ಎಂದು ಹೇಳಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂಜೀವ್ ಕಪೂರ್ ಈ ಬಗ್ಗೆ ಒಂದು ಪೋಸ್ಟ್ ನ್ನು ಕೂಡ ಹಾಕಿಕೊಂಡಿದ್ದಾರೆ.

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: ಆಯುರ್ವೇದಕ್ಕೆ ಸಂಬಂಧಿಸಿದ ಈ ಮಿಥ್ಯಗಳಿಗೆ ಎಂದೂ ಕಿವಿಗೊಡಬೇಡಿ

ಹಲಸಿನ ಹಣ್ಣನ್ನು ಯಾರು ಸೇವಿಸಬಾರದು?

ಜಾಕ್‌ಫ್ರೂಟ್ ಕೆಲವರಲ್ಲಿ  ಉರಿಯೂತವನ್ನು ಮತ್ತು ಅಸ್ವಸ್ಥತೆಗಳನ್ನು ಉಂಟುಮಾಡಬಹುದು.  ನಿಮಗೆ ಯಾವುದೇ ಅಲರ್ಜಿ ಇದ್ದರೆ ನೀವು ಹಲಸಿನ ಹಣ್ಣನ್ನು ಸೇವನೆ ಮಾಡವಾರದು,  ಎಂದು ಡಾ ಜಿನಾಲ್ ಸಲಹೆ ನೀಡಿದರು. ಇದಲ್ಲದೆ, ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಗಳನ್ನು ಹೊಂದಿರುವವರು ಹಲಸಿನ ಹಣ್ಣನ್ನು ತಿನ್ನಬಾರದು. ಏಕೆಂದರೆ ಇದು ರಕ್ತದಲ್ಲಿ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ.

ಯಾವುದೇ ಶಸ್ತ್ರಚಿಕಿತ್ಸೆಯ ಮೊದಲು ಮತ್ತು ನಂತರ ಹಲಸಿನ ಹಣ್ಣನ್ನು ಸೇವಿಸಬಾರದು. ಇದು ಮಾತ್ರವಲ್ಲದೆ ನೀವು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಅಥವಾ ತೀವ್ರವಾದ ಮೂತ್ರಪಿಂಡ ವೈಫಲ್ಯದಂತಹ ಮೂತ್ರಪಿಂಡದ ಸಮಸ್ಯೆಗಳನ್ನು ಹೊಂದಿದ್ದರೆ ಇದನ್ನು ತಿನ್ನಬಾರದು, ಏಕೆಂದರೆ ಹಲಸಿನ ಹಣ್ಣಿನಲ್ಲಿರುವ ಪೊಟ್ಯಾಸಿಯಮ್ ರಕ್ತದಲ್ಲಿ ಪೊಟ್ಯಾಸಿಯಮ್ ಅನ್ನು ನಿರ್ಮಿಸಲು ಕಾರಣವಾಗುತ್ತದೆ, ಇದು ಹೈಪರ್‌ಕೆಲೆಮಿಯಾ ಎಂಬ ಸ್ಥಿತಿಗೆ ಕಾರಣವಾಗುತ್ತದೆ.

Published On - 7:07 pm, Sat, 25 June 22

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ