Ayurveda: ಆಯುರ್ವೇದಕ್ಕೆ ಸಂಬಂಧಿಸಿದ ಈ ಮಿಥ್ಯಗಳಿಗೆ ಎಂದೂ ಕಿವಿಗೊಡಬೇಡಿ
ಆರೋಗ್ಯಕ್ಕಾಗಿ ಪ್ರಾಚೀನ ಔಷಧೀಯ ಪದ್ಧತಿ ಆಯುರ್ವೇದದಲ್ಲಿ ಜನರ ನಂಬಿಕೆ ಇಂದಿಗೂ ಮುಂದುವರೆದಿದೆ. ಆಯುರ್ವೇದದ ಉದ್ದೇಶವು ರೋಗವನ್ನು ತಡೆಗಟ್ಟುವುದು ಮತ್ತು ಮನಸ್ಸು, ಆತ್ಮ ಮತ್ತು ದೇಹದ ನಡುವೆ ಸಮತೋಲನವನ್ನು ಸಾಧಿಸುವುದು. ಆ
ಆರೋಗ್ಯಕ್ಕಾಗಿ ಪ್ರಾಚೀನ ಔಷಧೀಯ ಪದ್ಧತಿ ಆಯುರ್ವೇದದಲ್ಲಿ ಜನರ ನಂಬಿಕೆ ಇಂದಿಗೂ ಮುಂದುವರೆದಿದೆ. ಆಯುರ್ವೇದದ ಉದ್ದೇಶವು ರೋಗವನ್ನು ತಡೆಗಟ್ಟುವುದು ಮತ್ತು ಮನಸ್ಸು, ಆತ್ಮ ಮತ್ತು ದೇಹದ ನಡುವೆ ಸಮತೋಲನವನ್ನು ಸಾಧಿಸುವುದು. ಆಯುರ್ವೇದ ಗಿಡಮೂಲಿಕೆಗಳು ನೈಸರ್ಗಿಕ ಪದಾರ್ಥಗಳನ್ನು ಒಳಗೊಂಡಿರುತ್ತವೆ ಎಂದು ನಂಬಲಾಗಿದೆ, ಇದು ಯಾವುದೇ ರೀತಿಯಲ್ಲಿ ಹಾನಿಯಾಗುವುದಿಲ್ಲ. ಆಯುರ್ವೇದದ ಕುರಿತು ಹಲವು ಮಿಥ್ಯಗಳಿವೆ ಅವುಗಳನ್ನು ಅರಿಯಿರಿ.
ಆಯುರ್ವೇದ ತುಂಬಾ ನಿಧಾನ ಸಾಕಷ್ಟು ಮಂದಿ ಆಯುರ್ವೇದ ವಿಧಾನ ಅಥವಾ ಪರಿಣಾಮ ತುಂಬಾ ನಿಧಾನವೆಂದು ಹೇಳುತ್ತಾರೆ, ಆದರೆ ಈ ರೀತಿ ನಿಧಾನವಾಗಿ ದೇಹದಲ್ಲಿ ತನ್ನ ಕೆಲಸ ಆರಂಭಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ಹೈ ಫೀವರ್ ಅಥವಾ ಇನ್ಯಾವುದೇ ರೋಗವನ್ನು ತಡೆಗಟ್ಟುವ ಶಕ್ತಿ ಇರುತ್ತದೆ. ಆದರೆ ಆಯುರ್ವೇದವು ಕೇವಲ ರೋಗದ ಲಕ್ಷಣಗಳನ್ನು ಕಡಿಮೆಮಾಡುವುದಷ್ಟೇ ಅಲ್ಲದೆ ಆ ರೋಗವನ್ನು ಬಿಡದಿಂದಲೇ ತೊಡೆದುಹಾಕುತ್ತದೆ.
ಔಷಧಗಳ ಅಗತ್ಯವೇ ಇಲ್ಲ ಆಯುರ್ವೇದಲ್ಲಿ ಕೆಲವು ರೋಗಗಳನ್ನು ಆಹಾರ ಬದಲಾವಣೆಯಿಂದಲೂ ಗುಣಪಡಿಸಲಾಗುತ್ತದೆ ಹಾಗೆಂದ ಮಾತ್ರಕ್ಕೆ ಔಷಧಿಯ ಅಗತ್ಯವಿಲ್ಲವೆಂದೇನಿಲ್ಲ, ಸಾಕಷ್ಟು ರೋಗಗಳಲ್ಲಿ ಔಷಧಿಯನ್ನು ಕೂಡ ನೀಡಲಾಗುತ್ತದೆ.
ಆಯುರ್ವೇದವು ರಿಯಲ್ ಸೈನ್ಸ್ ಅಲ್ಲ ಸಾಕಷ್ಟು ಮಂದಿ ಆಯುರ್ವೇದವು ರಿಯಲ್ ಸೈನ್ಸ್ ಅಲ್ಲ ಎಂದು ಹೇಳುತ್ತಾರೆ, ಅದು ಗಣಿತದ ರೀತಿಯಲ್ಲಿ ಕೇವಲ ಲಾಜಿಕ್ಗಳನ್ನು ಮಾತ್ರ ಹೊಂದಿದೆ ಎಂದು ಹೇಳುತ್ತಾರೆ. ಆದರೆ ಇದು ಸುಳ್ಳು.
ಪ್ರಿಸ್ಕ್ರಿಪ್ಷನ್ ಅಗತ್ಯವಿಲ್ಲ ಆಯುರ್ವೇದ ಔಷಧಿಗಳನ್ನು ತೆಗೆದುಕೊಳ್ಳಲು ವೈದ್ಯರ ಪ್ರಿಸ್ಕ್ರಿಪ್ಷನ್ ಬೇಡ ಎಂದು ಕೆಲವರು ಹೇಳುತ್ತಾರೆ. ಆದರೆ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುವ ಮುನ್ನ ಪ್ರಿಸ್ಕ್ರಿಪ್ಷನ್ ಅಗತ್ಯವಿದೆ. ಇಲ್ಲವಾದರೆ ಅದನ್ನು ಸುರಕ್ಷಿತ ಎಂದು ಪರಿಗಣಿಸಲಾಗುವುದಿಲ್ಲ. ಔಷಧಗಳು ವಿಷವಾಗಿಯೂ ಪರಿಣಮಿಸಬಹುದು.
Published On - 4:31 pm, Fri, 24 June 22