Health Tips: ಕ್ರ್ಯಾನ್ಬೆರಿ ಜ್ಯೂಸ್ನಲ್ಲಿದೆ ಆರೋಗ್ಯದ ಗುಟ್ಟು, ಕೂದಲು ಉದುರುವಿಕೆ, ಮೂತ್ರದ ಸೋಂಕು ಪರಿಹಾರಕ್ಕೆ ಇದು ಪರಿಣಾಮಕಾರಿ
ಮೂತ್ರನಾಳದ ಸೋಂಕು, ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ಕ್ರ್ಯಾನ್ಬೆರಿ ಜ್ಯೂಸ್ ಪರಿಣಾಮಕಾರಿಯಾಗಿದೆ. ಅದಾಗ್ಯೂ ಕ್ರ್ಯಾನ್ಬೆರಿ ಜ್ಯೂಸ್ನ ಇನ್ನಿತರ ಆರೋಗ್ಯಕರ ಪ್ರಯೋಜನಗಳು ಇಲ್ಲಿವೆ ನೋಡಿ.
ಕಿತ್ತಳೆ ಅಥವಾ ಆಪಲ್ ಜ್ಯೂಸ್ನಂತೆ ಪ್ರಸಿದ್ಧವಾಗಿಲ್ಲದಿದ್ದರೂ ದೇಹವು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಕ್ರ್ಯಾನ್‌ಬೆರಿ ಜ್ಯೂಸ್ ಸಹಾಯಕವಾಗಲಿದೆ. ಮೂತ್ರನಾಳದ ಸೋಂಕನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದ್ದು, ಜನರು ಕ್ರ್ಯಾನ್ಬೆರಿ ರಸಕ್ಕೆ ಆದ್ಯತೆ ನೀಡುವ ಸಾಮಾನ್ಯ ಕಾರಣಗಳಲ್ಲಿ ಇದು ಒಂದಾಗಿದೆ. ಅದಾಗ್ಯೂ ಹಲವಾರು ಆರೋಗ್ಯಕರ ಪ್ರಯೋಜನಗಳು ಇವೆ. ಅವುಗಳು ಈ ಕೆಳಗಿನಂತಿವೆ.
ಇದನ್ನೂ ಓದಿ: ಹುಡುಗರೇ…ನೀವು ಹೀಗಿದ್ದರೆ ಹುಡುಗಿಯರಿಗೆ ಬಹಳ ಇಷ್ಟವಂತೆ! ಇಲ್ಲಿದೆ ನೋಡಿ ಸಲಹೆ
ಕ್ರ್ಯಾನ್ಬೆರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು
- ವಿವಿಧ ಅಪಾಯಗಳಿಂದ ಹೃದಯವನ್ನು ರಕ್ಷಿಸುವ ಅಪಧಮನಿಗಳು ಸೇರಿದಂತೆ ರಕ್ತನಾಳಗಳ ಕ್ಷೀಣತೆಗೆ ಉರಿಯೂತ ಕಾರಣವಾಗಿದೆ. ಈ ಉರಿಯೂತದಿಂದ ರಕ್ಷಿಸಲು, ಪ್ರಕ್ರಿಯೆಯನ್ನು ವಿಳಂಬಗೊಳಿಸಲು ಮತ್ತು ಹೃದ್ರೋಗದಿಂದ ರಕ್ಷಿಸಲು ಕ್ರ್ಯಾನ್‌ಬೆರಿ ಜ್ಯೂಸ್ ಸಹಾಯಕವಾಗಲಿದೆ. ಈ ಕ್ರ್ಯಾನ್ಬೆರಿ ಉರಿಯೂತ ಕಡಿಮೆ ಮಾಡುವ ಫೈಟೊನ್ಯೂಟ್ರಿಯೆಂಟ್ಗಳನ್ನು ಒಳಗೊಂಡಿದೆ.
- ಕ್ರ್ಯಾನ್‌ಬೆರಿ ಜ್ಯೂಸ್‌ನಲ್ಲಿ ವಿಟಮಿನ್ ಎ ಮತ್ತು ಸಿ ಹೇರಳವಾಗಿದ್ದು, ಈ ಪೋಷಕಾಂಶಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಅದನ್ನು ಹೆಚ್ಚು ಹೊಳೆಯುವಂತೆ ಮತ್ತು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ. ಕ್ರ್ಯಾನ್ಬೆರಿ ಜ್ಯೂಸ್ ಸೇವನೆಯಿಂದ ಕೂದಲು ಉದುರುವಿಕೆ ಮತ್ತು ಕೂದಲಿಗೆ ಸಂಬಂಧಿಸಿದ ಇತರ ಸಮಸ್ಯೆಗಳ ಚಿಕಿತ್ಸೆಗೆ ಸಹಾಯಕವಾಗಿದೆ. ಇದನ್ನು ದೀರ್ಘಕಾಲದವರೆಗೆ ಬಳಸಿದರೆ ಕೂದಲು ಉದುರುವಿಕೆ ಸಮಸ್ಯೆಯಿಂದ ಪಾರಾಗಬಹುದು.
- ಕ್ರ್ಯಾನ್‌ಬೆರಿ ಜ್ಯೂಸ್ ಕೇವಲ ರುಚಿಕರವಾದ ಪಾನೀಯ ಮಾತ್ರವಲ್ಲ, ಇದು ಆಂತರಿಕ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ. ಕ್ರ್ಯಾನ್‌ಬೆರಿ ಜ್ಯೂಸ್ ಪಿಸಿಓಎಸ್ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರಿಗೆ ಹಾರ್ಮೋನ್ ಆರೋಗ್ಯದ ದೃಷ್ಟಿಯಿಂದ ಪ್ರಯೋಜನಕಾರಿಯಾಗಿದೆ. ಕ್ರ್ಯಾನ್‌ಬೆರಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಬಂಜೆತನ, ಅತಿಯಾದ ಕೂದಲು ಬೆಳವಣಿಗೆ, ಮೊಡವೆ ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
- ಕ್ರ್ಯಾನ್‌ಬೆರಿ ಜ್ಯೂಸ್‌ನಲ್ಲಿ ಮೆಲಟೋನಿನ್ ಮಟ್ಟ ಹೆಚ್ಚಾಗಿದೆ. ಸ್ಲೀಪ್ ಹಾರ್ಮೋನ್ ಎಂದು ಕರೆಯಲ್ಪಡುವ ಮೆಲಟೋನಿನ್ ಉತ್ತಮವಾಗಿ ನಿದ್ರಿಸಲು ಜನರಿಗೆ ಸಹಾಯ ಮಾಡುತ್ತದೆ. ನಿದ್ರಾ ಸಮಸ್ಯೆಯಿಂದ ಬಳಲುತ್ತಿರುವ ಕೆಲವು ಜನರು ಮಲಗುವ ಮುನ್ನ ಕ್ರ್ಯಾನ್ಬೆರಿ ಜ್ಯೂಸ್ ಮೊರೆಹೋಗುತ್ತಾರೆ.
- ಕ್ರ್ಯಾನ್ಬೆರಿ ಜ್ಯೂಸ್ ಮೂತ್ರದ ಸೋಂಕಿನ ಅಪಾಯವನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಿದೆ. ಕ್ರ್ಯಾನ್ಬೆರಿ ರಸವು ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಗಾಳಿಗುಳ್ಳೆಯ ಗೋಡೆಗಳಿಗೆ ಅಂಟಿಕೊಳ್ಳುವುದನ್ನು ತಡೆಯಲು ಸಹಾಯಕವಾಗಿದೆ. ನಿಯಮಿತವಾಗಿ ಕ್ರ್ಯಾನ್ಬೆರಿ ಜ್ಯೂಸ್ ಸೇವಿಸಿದರೆ ಯುಟಿಐಗಳ ಅಪಾಯವು ಶೇ.30 ರಷ್ಟು ಕಡಿಮೆಯಾಗುತ್ತದೆ.
ಅದಾಗ್ಯೂ ಎಲ್ಲರಿಗೂ ಇದು ಪರಿಣಾಮಕಾರಿ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಇಂಥ ಸಮಸ್ಯೆಗಳು ಕಂಡುಬಂದಾಗ ವೈದ್ಯರೊಂದಿಗೆ ಸಮಾಲೋಚನೆ ನಡೆಸುವುದು ಕೂಡ ಮುಖ್ಯವಾಗಿದೆ. ಹೀಗಾಗಿ ಜ್ಯೂಸನ್ನೇ ಔಷಧಿಯನ್ನಾಗಿ ಮಾಡಿಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸಿ.
ಇದನ್ನೂ ಓದಿ: Relationship: ಹೀಗೆ ನಡೆದುಕೊಳ್ಳಿ, ನಿಮ್ಮ ಮಕ್ಕಳಿಗೆ ನಿಮ್ಮ ಮೇಲಿನ ಗೌರವ ಮತ್ತಷ್ಟು ಹೆಚ್ಚುತ್ತೆ