ಹುಡುಗರೇ…ನೀವು ಹೀಗಿದ್ದರೆ ಹುಡುಗಿಯರಿಗೆ ಬಹಳ ಇಷ್ಟವಂತೆ! ಇಲ್ಲಿದೆ ನೋಡಿ ಸಲಹೆ

ಹುಡುಗರೇ...ನೀವು ಹೀಗಿದ್ದರೆ ಹುಡುಗಿಯರಿಗೆ ಬಹಳ ಇಷ್ಟವಂತೆ! ಇಲ್ಲಿದೆ ನೋಡಿ ಸಲಹೆ
ಸಾಂದರ್ಭಿಕ ಚಿತ್ರ

ನಿಮ್ಮ ಜೀವನದಲ್ಲಿ ಒಂದು ಹುಡುಗಿ ನಿಮ್ಮ ಪ್ರೀತಿಯನ್ನು ಒಪ್ಪಿಕೊಳ್ಳಲು ಕೆಲವೊಂದು ಕಾರಣಗಳು ಬೇಕು ಏಕೆಂದರೆ ಹುಡುಗಿಯರು ತಮ್ಮ ಮನಸ್ಸಿನಲ್ಲಿ ಪ್ರೀತಿ ಇದ್ದರು ಅದನ್ನು ಮೊದಲು ವ್ಯಕ್ತಪಡಿಸುವುದಿಲ್ಲ. ಹುಡುಗರೇ ಮೊದಲು ಹೇಳಬೇಕು ಎಂಬ ಹಂಬಲ. ಅದಕ್ಕೆ ಅವಳು ನಿಮ್ಮ ಹಲವು ಗುಣಗಳನ್ನು ಮೆಚ್ಚಿಕೊಳ್ಳಬೇಕು ಮತ್ತು ನಿಮ್ಮ ಚಟುವಟಿಕೆಗಳಿಗೆ ಸೋಲಬೇಕು.

TV9kannada Web Team

| Edited By: ಅಕ್ಷಯ್​ ಕುಮಾರ್​​

Jun 23, 2022 | 5:42 PM

ಹುಡುಗರು ತಮ್ಮ ಜೀವನದಲ್ಲಿ  ಒಂದಲ್ಲ ಒಂದು ಹುಡುಗಿಯನ್ನು ಪ್ರೀತಿ ಮಾಡಿರುತ್ತಾರೆ. ಅದು ಕೆಲವರಿಗೆ ಲಕ್ಕಿ ಆಗಿರಬಹುದು ಇನ್ನೂ ಕೆಲವರಿಗೆ ಬ್ಯಾಡ್ ಲೈಫ್ ನ್ನು ಸೃಷ್ಟಿ ಮಾಡಿರಬಹುದು, ಆದರೆ ಪ್ರತಿ ಹುಡುಗರು ತಮ್ಮ ಹುಡುಗಿಯನ್ನು ಪ್ರೀತಿ ಮಾಡುವ ಮುನ್ನ ಅವಳನ್ನು ರಾಜಕುಮಾರಿಯಾಗಿ ನೋಡಬೇಕು ಎಂಬ ಕನಸು ಮತ್ತು ಅದೇ ರೀತಿ ನಡೆದುಕೊಳ್ಳಲು ಪ್ರಯತ್ನ ಪಡುತ್ತಾರೆ. ಆದರೆ ಇದನ್ನು ಯಾವ ರೀತಿಯಲ್ಲಿ ವ್ಯಕ್ತಪಡಿಸಬೇಕು ಎಂದು ತಿಳಿದಿರುವುದಿಲ್ಲ. ಹುಡುಗರು ತನ್ನ ಸ್ನೇಹಿತೆಯ ಜೊತೆಗೆ ಹೇಗೆ ನಡೆದುಕೊಳ್ಳಬೇಕು, ಏನು ಮಾಡಿದರೆ ಅವಳು ನನ್ನ ಇಷ್ಟಪಡುತ್ತಾಳೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು, ಏಕೆಂದರೆ ನಿಮ್ಮ ಜೀವನದಲ್ಲಿ ಒಂದು ಹುಡುಗಿ ನಿಮ್ಮ ಪ್ರೀತಿಯನ್ನು ಒಪ್ಪಿಕೊಳ್ಳಲು ಕೆಲವೊಂದು ಕಾರಣಗಳು ಬೇಕು ಏಕೆಂದರೆ ಹುಡುಗಿಯರು ತಮ್ಮ ಮನಸ್ಸಿನಲ್ಲಿ ಪ್ರೀತಿ ಇದ್ದರು ಅದನ್ನು ಮೊದಲು ವ್ಯಕ್ತಪಡಿಸುವುದಿಲ್ಲ. ಹುಡುಗರೇ ಮೊದಲು ಹೇಳಬೇಕು ಎಂಬ ಹಂಬಲ. ಅದಕ್ಕೆ ಅವಳು ನಿಮ್ಮ ಹಲವು ಗುಣಗಳನ್ನು ಮೆಚ್ಚಿಕೊಳ್ಳಬೇಕು ಮತ್ತು ನಿಮ್ಮ ಚಟುವಟಿಕೆಗಳಿಗೆ ಸೋಲಬೇಕು. ಅದಕ್ಕಾಗಿ ಹೀಗೆ ಮಾಡಿ.

ನಿಮ್ಮ ವರ್ತನೆ ಸವಿಯಾಗಿರಲಿ 

ಹೌದು ನಿಮ್ಮ ವರ್ತನೆಗಳು ಹೇಗೆ ಇರುತ್ತದೆ ಎಂಬುದನ್ನು ಪ್ರತಿ ಹುಡುಗಿಯು ಗಮನಿಸುತ್ತಾಳೆ. ಆ ವರ್ತನೆಯ ಮೇಲೆ ನಿಮ್ಮ ಪ್ರೀತಿ ನಿರ್ಧಾರವಾಗಬಹುದು ಮತ್ತು ಅವರು ನಿಮ್ಮ ಜೊತೆಗೆ ಮಾತನಾಡಬಹುದು. ನಿಮ್ಮ ವರ್ತನೆ ಮೃದುವಾಗಿದ್ದರೆ, ಮಾತ್ರ ನಿಮ್ಮ ಮತ್ತು ಅವರ ಸಂಬಂಧ ಉತ್ತಮವಾಗಿರುತ್ತದೆ. ಯಾವುದೇ ಸ್ಥಳ ಅಥವಾ ಒತ್ತಡ ಜಾಗದಲ್ಲಿ ಅವರೊಂದಿಗೆ ನೀವು ನಡೆದುಕೊಳ್ಳವ ರೀತಿ ನಿಮ್ಮನ್ನು ನಿರ್ಧಾರ ಮಾಡುತ್ತದೆ. ಇದರ ಜೊತೆಗೆ ಹುಡುಗಿಯ ಭಾವನೆಗಳನ್ನು ಸಮಾಧನದಿಂದ ಅರ್ಥ ಮಾಡಿಕೊಳ್ಳವ ತಾಳ್ಮೆ  ನಿಮ್ಮಲ್ಲಿರಬೇಕು. ನಿಮ್ಮ ಪ್ರತಿ ಮಾತಿನಿಂದ ಅವರಿಗೆ ಖುಷಿಯಾಗಬೇಕು. ನಿಮ್ಮ ಮಾತಿನಲ್ಲಿ ಗೊಂದಲಗಳು ಇರಬಾರದು.

ನಿಮ್ಮ ನೋಟ ಸೌಮ್ಯವಾಗಿರಬೇಕು 

ಹುಡುಗಿಯರನ್ನು ನೋಡುವ ನೋಟ ಸೌಮ್ಯವಾಗಿರಬೇಕು, ಏಕೆಂದರೆ ಆ ನೋಟವು ಕೂಡ ನಿಮ್ಮ ಪ್ರೀತಿಯನ್ನು ನಿರ್ಧಾರ ಮಾಡುತ್ತದೆ. ಹುಡುಗರ ನೋಟ ಖಡಕ್ ಅಥವಾ ಗಡಸುತನದಿಂದ ಇದ್ದರೆ ಹುಡುಗಿಯರು ನಿಮ್ಮ ನೋಟದಲ್ಲಿಯೇ ನಿಮ್ಮನ್ನು ನಿರ್ಧಾರ ಮಾಡುತ್ತಾರೆ. ಅದಕ್ಕಾಗಿ ನಿಮ್ಮ ನೋಟವು ಸೌಮ್ಯವಾಗಿದ್ದರೆ ನಿಮ್ಮ ಪ್ರೀತಿಗೆ ಒಳ್ಳೆಯದು. ನೀವು ಮಾತನಾಡುವಾಗ ನೋಡುವ ನೋಟ, ಅಥವಾ ಅವರನ್ನು ಆಶ್ಚರ್ಯದಿಂದ ನೋಡುವ ನೋಟ, ಅವರಿಗೆ ಏನು ಹೇಳಬೇಕು ಎಂದಾಗ ನೋಡುವ ನೋಟ ಇವುಗಳು ನಿಮ್ಮ ಪ್ರೀತಿಯನ್ನು ತಿಳಿಸುತ್ತದೆ.

ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕು

ಪ್ರತಿಯೊಬ್ಬ ಹುಡುಗರು ತನ್ನ ಹುಡುಗಿಯ ಬಗ್ಗೆ ಅನೇಕ ಕಲ್ಪನೆಯನ್ನು ಹೊಂದಿರುತ್ತಾರೆ. ಅದೇ ರೀತಿಯಲ್ಲಿ ಹುಡುಗಿಯರು ಕೂಡ ಹುಡುಗರ ಬಗ್ಗೆ ತಮ್ಮದೇ ಕಲ್ಪನೆ ಲೋಕವನ್ನು ಸೃಷ್ಟಿ ಮಾಡಿಕೊಂಡಿರುತ್ತಾರೆ. ಹುಡುಗಿಯರು ತಮ್ಮ ಹುಡುಗ ದೈಹಿಕವಾಗಿ ಉತ್ತಮ ದೇಹವನ್ನು ಹೊಂದಿರಬೇಕು ಅಂದರೆ ಜಿಮ್ ಬಾಡಿಯನ್ನು ಹೊಂದಿರಬೇಕು ಎಂಬ ಆಸೆ ಅವರಲ್ಲೂ ಇರುತ್ತದೆ. ತನ್ನ ಹುಡುಗ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕು ಎಂಬುದು ಅವರಲ್ಲಿ ಮನಸ್ಸಿನಲ್ಲೂ ಇರುತ್ತದೆ.

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿಹೀಗೆ ನಡೆದುಕೊಳ್ಳಿ, ನಿಮ್ಮ ಮಕ್ಕಳಿಗೆ ನಿಮ್ಮ ಮೇಲಿನ ಗೌರವ ಮತ್ತಷ್ಟು ಹೆಚ್ಚುತ್ತೆ

ಹುಡುಗಿಯರ ಜೊತೆಗೆ ಪೆದ್ದು ಪೆದ್ದಾಗಿ ನಡೆದುಕೊಳ್ಳಿ

ಹುಡುಗಿಯರ ಜೊತೆಗೆ ಇರುವಾಗ ಪೆದ್ದು ಪೆದ್ದಾಗಿ ನಡೆದುಕೊಳ್ಳಿ, ಆಗ ಹುಡುಗಿಯರು ನಿಮ್ಮನ್ನು ಹೆಚ್ಚು ಇಷ್ಟ ಪಡುತ್ತಾರೆ. ಪೆದ್ದು ಪೆದ್ದಾಗಿ ಮಾತನಾಡುವುದು ನಿಮ್ಮ ಪ್ರೀತಿಯ ಶಕ್ತಿಯನ್ನು ಹೆಚ್ಚಿಸುವುದು. ನಿಮ್ಮ ಮುಗ್ಧತೆ ಅವರನ್ನು ಇನ್ನೂ ಇಷ್ಟ ಆಗುವಂತೆ ಮಾಡುತ್ತದೆ. ಏಕೆಂದರೆ  ನಿಮ್ಮ ಮಾತುಗಳಿಂದ ಅವರನ್ನು ಮತ್ತಷ್ಟು ಪ್ರೀತಿಗೆ ಹತ್ತಿರ ಮಾಡುತ್ತದೆ.

ಒಳ್ಳೆಯ ಕುಕ್ಕ್  ಮಾಡುವ ಹುಡುಗರು ಇಷ್ಟ 

ಹುಡುಗಿಯರು ಒಳ್ಳೆಯ ಅಡುಗೆ ಮಾಡುವ ಹುಡುಗರನ್ನು ಇಷ್ಟ ಪಡುತ್ತಾರೆ. ಏಕೆಂದರೆ ತಾವು ಮಾಡುವ ಅಡುಗೆಗಿಂತ ತನ್ನ ಪ್ರೀತಿ ಪಾತ್ರರರು ಮಾಡುವ ಅಡುಗೆ ಇನ್ನಷ್ಟು ಚೆನ್ನಾಗಿರುತ್ತದೆ. ಈ ವಿಷಯ ಅವರಿಗೆ ತಿಳಿದರೆ ಅವರು ನಿಮ್ಮನ್ನು  ಇನ್ನಷ್ಟು ಇಷ್ಟ ಪಡುತ್ತಾರೆ , ಜೊತೆಗೆ ಅವರಿಗೆ ಈ ವಿಚಾರಗಳ ಬಗ್ಗೆ  ತಾನು ಕಲಿಯಬೇಕು ಎಂಬ ಆಸೆ ಹುಟ್ಟಿಕೊಳ್ಳಬಹುದು.

ನಿಮ್ಮ ಜೊತೆಗೆ ಇರುವಾಗ ಹೆಚ್ಚು ಕಾಳಜಿ ಮಾಡಿ 

ಒಂದು ಹುಡುಗಿ ತನ್ನ ರಕ್ಷಣೆ ಯಾರು ? ಮಾಡುತ್ತಾರೆ ಅವರನ್ನು ಹೆಚ್ಚು ನೆಚ್ಚಿಕೊಂಡಿರುತ್ತಾರೆ. ಇದು ಅವರನ್ನು ಪ್ರೀತಿ ಮಾಡುವವರಿಗೆ ಮಾತ್ರ ಗೊತ್ತಿರಬೇಕು. ಕಾಳಜಿ ಮಾಡುವ ಭರದಲ್ಲಿ ನಿಮ್ಮ ಕಾಳಜಿ ಅವರಿಗೆ ಹಿಂಸೆ ಆಗಬಾರದು, ನಿಮ್ಮ  ಕಾಳಜಿ ಅವರಿಗೆ ಇಷ್ಟಪಡುವಂತಿರಬೇಕು, ಕಾಳಜಿ ನೆಪದಲ್ಲಿ ಅವರ ಸ್ವಾತಂತ್ರಕ್ಕೆ ದಕ್ಕೆ ಆಗಬಾರದು. ಕಾಳಜಿಯುತವಾಗಿ ಮಾತನಾಡಿ, ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಿ. ಇದು ನಿಮ್ಮ ಪ್ರೀತಿಗೆ ಇನ್ನಷ್ಟು ಬೇರು ಆಗಬಹುದು.

ಆಕೆಯ ಪ್ರತಿ ಕೆಲಸದಲ್ಲಿ ನಿಮ್ಮ ಬೆಂಬಲ ಮತ್ತು ನಂಬಿಕೆ ಇರಲಿ 

ಹೌದು ನಿಮ್ಮ ಪ್ರೀತಿ ಎನ್ನುವುದು ಒಂದು ನಂಬಿಕೆ ಮತ್ತು ಬೆಂಬಲದಿಂದ ಹುಟ್ಟಬಹುದು. ಒಬ್ಬ ಹುಡುಗ ಒಂದು ಹುಡುಗಿಯ ಕೆಲಸಕ್ಕೆ ಬೆಂಬಲ ನೀಡಿದರೆ ಆಕೆ ನಿಮ್ಮನ್ನು ಇನ್ನಷ್ಟು ಪ್ರೀತಿ ಮಾಡುತ್ತಾಳೆ, ಏಕೆಂದರೆ ತನ್ನ ಕೆಲಸಕ್ಕೆ ಒಂದು ಆತ್ಮಸ್ಥೈರ್ಯ ಸಿಕ್ಕಿದೆ ಎಂಬ ನಂಬಿಕೆ ಆಕೆ ಇರುತ್ತದೆ. ಜೊತೆಗೆ ಅವಳ ಕೆಲಸದ ಬಗ್ಗೆ ನಂಬಿಕೆ ಇರಲಿ ಏಕೆಂದರೆ ಆ ನಂಬಿಕೆ ಅವರ ಮುಂದಿನ ಹೆಜ್ಜೆ ಸುಲಭವಾಗಿರುತ್ತದೆ.

ಆಕೆ ನಿಮ್ಮ ಜೊತೆಗೆ ಇದ್ದಾಗ ಗಾಡಿಯನ್ನು ನಿಧಾನವಾಗಿ ಚಲಿಸಿ 

ಅನೇಕ ಹುಡುಗರಿಗೆ ಬೈಕ್ ಸಿಕ್ಕರೇ ಸಾಕು ವೇಗವಾಗಿ ಹೋಗುವುದು ಹುಡುಗಿಯರ ಮುಂದೆ ಸ್ಟೈಲ್ ಮಾಡುವುದು ಇದೆಲ್ಲ ಅವರಿಗೆ ಇಷ್ಟ ಆಗುತ್ತದೆ ಎನ್ನುವುದು ಹುಡುಗರ ಕಲ್ಪನೆ, ಆದರೆ ಅದನ್ನು ಯಾವತ್ತೂ ಮಾಡಬೇಡಿ ಏಕೆಂದರೆ ಅವರಿಗೆ ಇದು ಕಿರಿಕಿರಿ ಅನ್ನಿಸುವುದು. ಇದರ ಜೊತೆಗೆ ನಿಮ್ಮಕೆ ನಿಮ್ಮ ಜೊತೆಗೆ ಇರುವಾಗ ನಿಧಾನವಾಗಿ ಗಾಡಿಯಲ್ಲಿ ಚಲಿಸಿ, ಏಕೆಂದರೆ ಅವರು ತುಂಬಾ ಮೃದ್ಧು ಸ್ವಭಾವ ಮತ್ತು ನಿಮ್ಮ ಜೊತೆಗೆ ಒಂದು ಒಳ್ಳೆಯ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada