Sign In

By signing in or creating an account, you agree with Associated Broadcasting Company's Terms & Conditions and Privacy Policy.

Black Stains: ಸುಟ್ಟು ಕರಕಲಾಗಿರುವ ಕುಕ್ಕರ್​ನಿಂದ ಕಪ್ಪು ಕಲೆಯನ್ನು ಹೋಗಲಾಡಿಸುವುದು ಹೇಗೆ?

ಹಲವಾರು ಬಾರಿ ಕುಕ್ಕರ್​ನಲ್ಲಿ ಆಹಾರದ ಜೊತೆ ನೀರು ಕಡಿಮೆ ಹಾಕಿದ್ದರೆ ಕುಕ್ಕರ್ ಸುಟ್ಟು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಆ ಸಮಯದಲ್ಲಿ ಕುಕ್ಕರ್​ ಅನ್ನು ಎಷ್ಟೇ ತೊಳೆದರೂ ಕಪ್ಪು ಕಲೆ ಹಾಗೂ ಆಹಾರಗಳು ಅದರಲ್ಲಿ ಸಿಲುಕಿಕೊಂಡುತ್ತವೆ. ಆ ಆಹಾರವನ್ನು ಸ್ವಚ್ಛಗೊಳಿಸುವುದು ಸವಾಲಿನ ಕೆಲಸ.

Black Stains: ಸುಟ್ಟು ಕರಕಲಾಗಿರುವ ಕುಕ್ಕರ್​ನಿಂದ ಕಪ್ಪು ಕಲೆಯನ್ನು ಹೋಗಲಾಡಿಸುವುದು ಹೇಗೆ?
Black StainsImage Credit source: herzindagi.com
Follow us
TV9 Web
| Updated By: ನಯನಾ ರಾಜೀವ್

Updated on: Jun 24, 2022 | 2:14 PM

ಹಲವಾರು ಬಾರಿ ಕುಕ್ಕರ್​ನಲ್ಲಿ ಆಹಾರದ ಜೊತೆ ನೀರು ಕಡಿಮೆ ಹಾಕಿದ್ದರೆ ಕುಕ್ಕರ್ ಸುಟ್ಟು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಆ ಸಮಯದಲ್ಲಿ ಕುಕ್ಕರ್​ ಅನ್ನು ಎಷ್ಟೇ ತೊಳೆದರೂ ಕಪ್ಪು ಕಲೆ ಹಾಗೂ ಆಹಾರಗಳು ಅದರಲ್ಲಿ ಸಿಲುಕಿಕೊಂಡುತ್ತವೆ. ಆ ಆಹಾರವನ್ನು ಸ್ವಚ್ಛಗೊಳಿಸುವುದು ಸವಾಲಿನ ಕೆಲಸ.

ಒಂದೊಮ್ಮೆ ಕುಕ್ಕರ್​ ಅನ್ನು ಹಾಗೆಯೇ ಬಳಕೆ ಮಾಡಿದರೆ, ಆಹಾರದ ರುಚಿಯೂ ಕೆಡುತ್ತದೆ ಮತ್ತು ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಇದೆ. ನೀವು ಡಿಶ್ವಾಶರ್ ಮತ್ತು ಸಾಮಾನ್ಯ ಸೋಪ್ನೊಂದಿಗೆ ಸುಟ್ಟ ಆಹಾರವನ್ನು ಸ್ವಚ್ಛಗೊಳಿಸಿದರೆ ಏನೂ ಪ್ರಯೋಜನವಿಲ್ಲ.

ಟ್ಯಾಟ್ರಿಕ್ ಆಮ್ಲ ಟ್ಯಾಟ್ರಿಕ್ ಆಮ್ಲವು ಪುಡಿ ರೂಪದಲ್ಲಿ ಕಂಡುಬರುತ್ತದೆ. ಇದನ್ನು ವೈನ್ ತಯಾರಿಸಲು ಬಳಸಲಾಗುತ್ತದೆ. ನೀವು ಅದರ ಸಹಾಯದಿಂದ ಕುಕ್ಕರ್​ನಲ್ಲಿ ಅಂಟಿಕೊಂಡಿರುವ ಆಹಾರವನ್ನು ಸುಲಭವಾಗಿ ತೆಗೆದುಹಾಕಬಹುದು. ಕುಕ್ಕರ್ ಅಲ್ಲಿ ಅರ್ಧದಷ್ಟು ನೀರಿನಿಂದ ತುಂಬಿಸಿ. ನಂತರ 2-3 ಸ್ಪೂನ್ ಟ್ಯಾಟ್ರಿಕ್ ಆಮ್ಲವನ್ನು ಹಾಕಿ ಗ್ಯಾಸ್ ಮೇಲೆ ಇಡಿ. ನೀರು ಕುದಿಯಲು ಬಿಡಿ. ಕೆಲವು ನಿಮಿಷಗಳ ನಂತರ ಕುಕ್ಕರ್ ಸಂಪೂರ್ಣವಾಗಿ ಸ್ವಚ್ಛವಅಗಿರುತ್ತದೆ. ಬಳಿಕ ಸಾಮಾನ್ಯ ಸೋಪಿನಿಂದ ತೊಳೆಯಿರಿ.

ಜೋಳದ ಹಿಟ್ಟು ಕುಕ್ಕರ್ ಅಲ್ಲಿ ಅರ್ಧದಷ್ಟು ನೀರಿನಿಂದ ತುಂಬಿಸಿ. ನಂತರ ಅದಕ್ಕೆ 4 ಚಮಚ ಕಾರ್ನ್ ಫ್ಲೋರ್ ಸೇರಿಸಿ. ಈಗ ಅದನ್ನು 10-15 ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಕುದಿಸಿ. ಪ್ರೆಶರ್ ಕುಕ್ಕರ್ ತಣ್ಣಗಾದಾಗ, ಅದನ್ನು ಡಿಶ್ ಸೋಪಿನಿಂದ ತೊಳೆಯಿರಿ.

ಉಪ್ಪಿನ ಬಳಕೆ ಉಪ್ಪನ್ನು ಊಟಕ್ಕೆ ಮಾತ್ರ ಬಳಸಲಾಗುವುದಿಲ್ಲ, ಆದರೆ ಅದರ ಸಹಾಯದಿಂದ ನೀವು ಶುಚಿತ್ವವನ್ನು ಕಾಪಾಡಬಹುದು. ಅಂಟಿಕೊಳ್ಳುವ ಆಹಾರವನ್ನು ತೆಗೆದುಹಾಕಲು ಕುಕ್ಕರ್ ಅಲ್ಲಿ ನೀರು ತುಂಬಿಸಿ. ನಂತರ ಉಪ್ಪು ಸೇರಿಸಿ. ಈಗ ಮುಚ್ಚಳವನ್ನು ಮುಚ್ಚಿ ಮತ್ತು 20-30 ನಿಮಿಷಗಳ ಕಾಲ ಕುದಿಸಿ. ಕುಕ್ಕರ್ ತಣ್ಣಗಾದಾಗ, ಅದನ್ನು ಸೋಪಿನಿಂದ ತೊಳೆಯಿರಿ.

ವಿನೆಗರ್​ ಸುಟ್ಟ ಆಹಾರವನ್ನು ಸ್ವಚ್ಛಗೊಳಿಸಲು ಇದು ಸುಲಭವಾದ ಮಾರ್ಗವಾಗಿದೆ. 1/4 ಕಪ್ ವಿನೆಗರ್ ಅನ್ನು ನೀರಿನಲ್ಲಿ ಕುದಿಸಿ. ನಂತರ ವಿನೆಗರ್ ಚೆಲ್ಲಿ, ಈಗ ಮತ್ತೆ ಅದಕ್ಕೆ 2 ಚಮಚ ಅಡುಗೆ ಸೋಡಾ ಸೇರಿಸಿ ಕುಕ್ಕರ್ ಅನ್ನು ಸ್ವಚ್ಛಗೊಳಿಸಿ. ಅಡುಗೆ ಸೋಡಾ ಮತ್ತು ವಿನೆಗರ್ ಅನ್ನು ಕುಕ್ಕರ್‌ನಲ್ಲಿ ಒಟ್ಟಿಗೆ ಕುದಿಸಬೇಡಿ, ಏಕೆಂದರೆ ಇದು ರಾಸಾಯನಿಕ ಕ್ರಿಯೆಗೆ ಕಾರಣವಾಗಬಹುದು.

ಕೋಕೊಕೋಲ ನೀವು ಕೋಕ್​ನೊಂದಿಗೆ ಸುಟ್ಟ ಆಹಾರವನ್ನು ಸಹ ಸ್ವಚ್ಛಗೊಳಿಸಬಹುದು. ಕುಕ್ಕರ್‌ನಲ್ಲಿ ಕೋಕ್ ಹಾಕಿ ಮತ್ತು ಅದನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಸ್ವಲ್ಪ ಸಮಯದ ಬಳಿಕ ಗುಳ್ಳೆಗಳು ಕಾಣುತ್ತವೆ ನಂತರ ಬೆಂಕಿ ಆಫ್ ಮಾಡಿ. ನಂತರ ಪ್ರೆಶರ್ ಕುಕ್ಕರ್ ಅನ್ನು ಯಾವುದೇ ಪಾತ್ರೆ ತೊಳೆಯುವ ಸೋಪಿನಿಂದ ಶುಚಿಗೊಳಿಸಿ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್