ತಾಜಾ ತ್ವಚೆ ಪಡೆಯಲು ಐಸ್ ಕ್ಯೂಬ್ ಮಸಾಜ್ ಬೆಸ್ಟ್, ಇದರಿಂದಾಗುವ ಲಾಭಗಳು ಅಧಿಕ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 26, 2024 | 5:59 PM

ಹೆಂಗಳೆಯರು ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಹೆಚ್ಚಾಗಿ ಖರೀದಿ ಮಾಡುತ್ತಾರೆ. ಜಾಹೀರಾತಿನಲ್ಲಿ ಕಾಣುವವರಂತೆ ತಾವು ಕೂಡ ಬೆಳ್ಳಗೆ ಹಾಕಿ ಮುಖವು ಗ್ಲೋ ಆಗಬೇಕು ಎಂದು ಬಯಸುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕ ಉತ್ಪನ್ನಗಳಿಗೆ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಸಾಧ್ಯವಾಗದೇ ಹೋಗಬಹುದು. ಆದರೆ ಅಡುಗೆ ಮನೆಯಲ್ಲಿರುವ ಇರುವ ಕೆಲವು ಪದಾರ್ಥಗಳಿಂದ ಮುಖದ ಸೌಂದರ್ಯವನ್ನು ಕಾಪಾಡುವುದು ಕಷ್ಟವೇನಲ್ಲ.

ತಾಜಾ ತ್ವಚೆ ಪಡೆಯಲು ಐಸ್ ಕ್ಯೂಬ್ ಮಸಾಜ್ ಬೆಸ್ಟ್, ಇದರಿಂದಾಗುವ ಲಾಭಗಳು ಅಧಿಕ
Follow us on

ಎಲ್ಲರಿಗೂ ಕೂಡ ತಾವು ಎಲ್ಲರ ಮುಂದೆ ಸುಂದರವಾಗಿ ಕಾಣಿಸಿಕೊಳ್ಳಬೇಕೆಂದು ಇರುತ್ತದೆ. ಸದಾ ಯಂಗ್ ಆಗಿರಬೇಕು ಎಂದುಕೊಳ್ಳುತ್ತಾರೆ. ಆದರೆ ಒತ್ತಡದ ಜೀವನಶೈಲಿ, ಆಹಾರ ಪದ್ಧತಿ ಸೇರಿದಂತೆ ಹೀಗೆ ನಾನಾ ಕಾರಣದಿಂದಾಗಿ ಸಹಜವಾಗಿಯೇ ತ್ವಚೆಯ ಸೌಂದರ್ಯವು ಕುಂದುತ್ತದೆ. ಹೀಗಾಗಿ ಮುಖದ ಕಾಂತಿ ಹೆಚ್ಚಿಸಲು ಪ್ರಯೋಗಗಳನ್ನು ಮಾಡುತ್ತಾರೆ. ಹೆಚ್ಚಿನವರು ಸೌಂದರ್ಯವರ್ಧಕಗಳ ಮೊರೆ ಹೋಗುತ್ತಾರೆ. ಆದರೆ ಮನೆಯಲ್ಲಿರುವ ಫ್ರಿಡ್ಜ್ ನಲ್ಲಿ ಐಸ್ ಕ್ಯೂಬ್ ಮುಖದ ಅಂದವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಐಸ್ ಕ್ಯೂಬ್ ಇದ್ದರೆ ಅದನ್ನು ಮುಖಕ್ಕೆ ಹಚ್ಚುತ್ತಿದ್ದರೆ ಮುಖದ ಹೊಳಪು ಹೆಚ್ಚು ಮಾಡಿಕೊಳ್ಳಬಹುದು.

* ಮುಖಕ್ಕೆ ಐಸ್ ಕ್ಯೂಬ್ ಹಚ್ಚುತ್ತಿದ್ದರೆ ಉರಿಯೂತವು ಕಡಿಮೆಯಾಗಿ ರಕ್ತ ಸಂಚಾರವು ಸರಾಗವಾಗುವುದಲ್ಲದೆ, ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.

* ಮೊಡವೆಗಳ ಮೇಲೆ ಐಸ್ ಕ್ಯೂಬ್ ನಿಂದ ಮಸಾಜ್ ಮಾಡುವುದರಿಂದ ಮುಖದ ಮೇಲಿನ ರಂಧ್ರಗಳನ್ನು ಕಡಿಮೆ ಮಾಡುತ್ತದೆ. ಅದಲ್ಲದೇ ಎಣ್ಣೆ ಅಂಶವನ್ನು ನಿವಾರಿಸಿ ಮೊಡವೆ ಸಮಸ್ಯೆಯನ್ನು ದೂರ ಮಾಡುತ್ತದೆ.

* ಮುಖಕ್ಕೆ ಐಸ್ ಕ್ಯೂಬನ್ನು ಉಜ್ಜುತ್ತಿದ್ದರೆ ಬಳಸುವ ಉತ್ಪನ್ನಗಳು ತ್ವಚೆಯ ಪದರಗಳನ್ನು ತಲುಪಲು ಸಹಾಯಕವಾಗಿದೆ.

* ಮುಖದ ಮೇಲೆ ಐಸ್ ಅನ್ನು ಅನ್ವಯಿಸುವುದರಿಂದ ಹಿಗ್ಗಿದ ರಕ್ತನಾಳಗಳನ್ನು ಕುಗ್ಗಿಸುತ್ತದೆ. ಕಣ್ಣಿನ ಸುತ್ತಲಿನ ಊತವನ್ನು ಕಡಿಮೆ ಮಾಡಿ, ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್ ಅನ್ನು ನಿವಾರಿಸುತ್ತದೆ.

* ಮಂಜುಗಡ್ಡೆಯಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ನಿಮ್ಮ ಚರ್ಮದ ರಂಧ್ರಗಳನ್ನು ಬಿಗಿಗೊಳಿಸಲು ಸುಕ್ಕುಗಳನ್ನು ಕಡಿಮೆಗೊಳಿಸಿ, ವಯಸ್ಸಾಗದಂತೆ ನೋಡಿಕೊಳ್ಳುತ್ತದೆ.

* ಚರ್ಮದ ಮೇಲೆ ದದ್ದುಗಳಿದ್ದರೆ, ಮಂಜುಗಡ್ಡೆಯನ್ನು ಅನ್ವಯಿಸುತ್ತಿದ್ದರೆ ಕಲೆಗಳು ಹಾಗೂ ದದ್ದುಗಳು ನಿವಾರಣೆಯಾಗುತ್ತದೆ.

* ಸೂಕ್ಷ್ಮವಾದ ಗೆರೆಗಳನ್ನು ದೂರ ಮಾಡಿ ಯೌವ್ವನವನ್ನು ಕಾಪಾಡುವುದಲ್ಲದೆ, ತ್ವಚೆಗೆ ಹೊಳಪನ್ನು ನೀಡುತ್ತದೆ.

ಇದನ್ನೂ ಓದಿ: ಮನೆಯಲ್ಲಿ ಈ ಪದಾರ್ಥಗಳಿದ್ದರೆ ಸಾಕು, ಆರೋಗ್ಯಕರ ರಾಗಿ ದೋಸೆ ಹಾಗೂ ತೆಂಗಿನಕಾಯಿ ಚಟ್ನಿ ಮಾಡುವುದು ಸುಲಭ

ಮುಖಕ್ಕೆ ಐಸ್ ಕ್ಯೂಬ್ ನಿಂದ ಮಸಾಜ್ ಹೀಗೆ ಮಾಡಿ

ಸದಾ ಯೌವ್ವನವಾಗಿರುವಂತೆ ಕಾಣಲು, ತ್ವಚೆಯ ಹೊಳಪು ಹೆಚ್ಚಾಗಲು ಸ್ವಚ್ಛವಾದ ಬಿಳಿ ಬಟ್ಟೆಯಲ್ಲಿ ನಾಲ್ಕೈದು ಐಸ್ ಕ್ಯೂಬ್ ಗಳನ್ನು ಹಾಕಿಕೊಂಡು ಎರಡು ಮೂರು ನಿಮಿಷಗಳ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡುವುದರಿಂದ ಪರಿಣಾಮಕಾರಿಯಾದ ಲಾಭವನ್ನು ಕಾಣಬಹುದಾಗಿದೆ. ಮುಖಕ್ಕೆ ಲೋಷನ್ ಬಳಸುವ ಮುನ್ನ ಐಸ್ ಕ್ಯೂಬ್ ನಿಂದ ಮಸಾಜ್ ಮಾಡುವುದರಿಂದ ತ್ವಚೆಯ ಸಮಸ್ಯೆಗಳು ದೂರವಾಗಿ ಹೊಳಪು ಹೆಚ್ಚಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ