
ಬೆಂಗಳೂರು, ಮೇ 10: ಮರಗಳನ್ನು (tree) ಕಡಿಯುವವರು ಒಂದೆಡೆಯಾದರೆ, ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಪರಿಸರ ಪ್ರೇಮಿಗಳು ಹಲವರಿದ್ದಾರೆ. ಹೌದು ಮನೆ ಸುತ್ತಮುತ್ತ ಬಗೆಬಗೆಯ ಗಿಡಮರಗಳನ್ನು ಬೆಳೆದು ಮಾದರಿಯಾದವರು ತುಂಬಾ ಜನ ಇದ್ದಾರೆ. ಅದೇ ರೀತಿ ಬೆಂಗಳೂರಿನ (Bengaluru) ಸುಮೇಶ್ ಮತ್ತು ಮೀತು ನಾಯಕ್ ದಂಪತಿ ಕೂಡಾ ಗಿಡ ಮರಗಳನ್ನು ಬೆಳೆಸಿ ಇಂದು ತಮ್ಮ ಮನೆಯನ್ನೇ ಮಿನಿ ಕಾಡನ್ನಾಗಿ (Mini Forest) ಮಾಡಿದ್ದಾರೆ. ಈ ದಂಪತಿ 1,500 ಚದರ ಅಡಿ ವಿಸ್ತೀರ್ಣದ ತಮ್ಮ ಮನೆಯಲ್ಲಿ ಸುಮಾರು 2 ಕ್ಕೂ ಹೆಚ್ಚು ಮರಗಳನ್ನು ನೆಟ್ಟಿದ್ದಾರೆ. ಅಷ್ಟೇ ಅಲ್ಲದೆ ಇವರ ಮನೆಯಲ್ಲಿ ಸುಮಾರು 49 ಕ್ಕೂ ಹೆಚ್ಚು ಜಾತಿಯ ಹಕ್ಕಿಗಳು ಮತ್ತು 30 ಕ್ಕೂ ಹೆಚ್ಚು ಬಗೆಯ ಚಿಟ್ಟೆಗಳಿಗೆ. ಒಟ್ಟಾರೆಯಾಗಿ ಗದ್ದಲದ ನಗರ ಜೀವನದ ನಡುವೆಯೂ ಈ ದಂಪತಿ ಮರಗಿಡಗಳು, ಪಕ್ಷಿಗಳೊಂದಿಗೆ ಬಹಳ ಸುಂದರ ಜೀವನವನ್ನು ಸಾಗಿಸುತ್ತಿದ್ದಾರೆ.
ಬೆಂಗಳೂರಿನ ಸುಮೇಶ್ ಮತ್ತು ಮೀತು ನಾಯಕ್ ವಾರಾಂತ್ಯದ ತೋಟಗಾರಿಕಾ ಹವ್ಯಾಸದೊಂದಿಗೆ ಗಿಡಗಳನ್ನು ಬೆಳೆಸಲು ಆರಂಭಿಸಿ, ಇಂದು ತಮ್ಮ ಮನೆಯಲ್ಲಿ ಮಿನಿ ಕಾಡನ್ನೇ ಸೃಷ್ಟಿಸಿದ್ದಾರೆ. ತಮ್ಮ 1,500 ಚದರ ಅಡಿ ವಿಸ್ತೀರ್ಣದ ಮನೆಯಲ್ಲಿ 2 ಸಾವಿರಕ್ಕೂ ಹೆಚ್ಚು ಗಿಡ ಮರಗಳು, ಸುಮಾರು 49 ಕ್ಕೂ ಹೆಚ್ಚು ಜಾತಿಯ ಹಕ್ಕಿಗಳು ಮತ್ತು 30 ಕ್ಕೂ ಹೆಚ್ಚು ಬಗೆಯ ಚಿಟ್ಟೆಗಳಿಗೆ. ಜೊತೆಗೆ ಮಾವು, ಪೇರಳೆ, ಹಲಸಿನ ಹಣ್ಣು, ಸ್ಟಾರ್‌ಫ್ರೂಟ್, ಚಿಕ್ಕು, ಮಲ್ಬೆರ್ರಿ, ಅವಕಾಡೊದಂತಹ ಸಾಕಷ್ಟು ಹಣ್ಣುಗಳನ್ನು ಕೂಡಾ ಬೆಳೆದಿದ್ದಾರೆ.
ಇದನ್ನೂ ಓದಿ: ತಾಯಂದಿರ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ವಿಶೇಷ ದಿನದ ಆಸಕ್ತಿದಾಯಕ ಕಥೆಯನ್ನು ತಿಳಿಯಿರಿ
ವಿಶೇಷ ಏನಪ್ಪಾ ಅಂದ್ರೆ ಸುಮೇಶ್ ದಂಪತಿ ಈ ಗಿಡ ಮರಗಳಿಗೆ ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸುವುದಿಲ್ಲ. ಬದಲಿಗೆ ಇವರು ಅಡುಗೆ ತ್ಯಾಜ್ಯ ಮತ್ತು ಒಣ ಎಲೆಗಳಿಂದ ತಯಾರಿಸಿದ ಸಾವಯವ ಗೊಬ್ಬರಗಳನ್ನೇ ತಮ್ಮ ಗಿಡಮರಗಳಿಗೆ ಹಾಕುತ್ತಾರೆ. ಮಿನಿ ಕಾಡಿನಂತಿರುವ ಇವರ ಮನೆ ಈ ಬಿರು ಬೇಸಿಗೆಯಲ್ಲಿಯೂ ಸಹ ಐದರಿಂದ ಆರು ಡಿಗ್ರಿ ಸೆಲ್ಸಿಯಸಗ ತಂಪಾಗಿರುತ್ತದೆ ಎನ್ನುತ್ತಾರೆ ಸುಮೇಶ್.
1500sqft_gardener ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತೋಟಗಾರಿಕೆಗೆ ಸಂಬಂಧಿಸಿದ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸುಮೇಶ್ ದಂಪತಿ ತೋಟಗಾರಿಕೆ ಹಾಗೂ ಮರಗಿಡಗಳನ್ನು ನೆಡಲು, ಪೋಷಿಸಲು ಇತರರನ್ನೂ ಪ್ರೇರೆಪಿಸುವಂತಹ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಯ ಸ್ಪೂರ್ತಿದಾಯಕ ಕಥೆಯನ್ನು thebetterindia ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ ಮಾಡಲಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ