ಮಾವು ಪ್ರಿಯರೇ… ನೀವು ತಪ್ಪದೇ ಹಳ್ಳಿ ಮನೆ ರೆಸ್ಟೋರೆಂಟ್‌ನ ಮ್ಯಾಂಗೋ ಮೇಳಕ್ಕೆ ವಿಸಿಟ್‌ ಮಾಡ್ಲೇಬೇಕು

ಮಾವಿನ ಹಣ್ಣಿನ ಸೀಸನ್ ಶುರುವಾಗಿದೆ. ಈಗಂತೂ ಮಾರುಕಟ್ಟೆ ಸಂಪೂರ್ಣವಾಗಿ ಮಾವಿನ ಹಣ್ಣಿನಿಂದಲೇ ತುಂಬಿದೆ. ಅದರಲ್ಲೂ ಮಾವು ಪ್ರಿಯರಂತೂ ತಾಜಾ ಮಾವಿನ ಹಣ್ಣನ್ನು ಸವಿಯುವುದರ ಜೊತೆಗೆ ಮಾವಿನ ಹಣ್ಣಿನ ವಿವಿಧ ಖಾದ್ಯಗಳನ್ನು ಸಹ ಈ ಸೀಸನ್‌ನಲ್ಲಿ ತಿನ್ನಲು ಬಯಸುತ್ತಾರೆ. ನಿಮಗೂ ಕೂಡ ಮಾವಿನ ಹಣ್ಣಿನ ವೆರೈಟಿ ವೆರೈಟಿ ಖಾದ್ಯಗಳನ್ನು ಸವಿಯೋ ಆಸೆನಾ. ಹಾಗಿದ್ರೆ ಮಲ್ಲೇಶ್ವರಂನ ಹಳ್ಳಿ ಮನೆ ರೆಸ್ಟೋರೆಂಟ್‌ನಲ್ಲಿ ನಡಿತಿರೋ ಮ್ಯಾಂಗೋ ಮೇಳಕ್ಕೆ ವಿಸಿಟ್‌ ಮಾಡಿ.

ಹಣ್ಣುಗಳ ರಾಜ  (king of fruits) ಮಾವಿನ ಹಣ್ಣು (Mango) ಅಂದ್ರೆ ಹೆಚ್ಚಿನವರಿಗೆ ಬಲು ಇಷ್ಟ. ಈ ರುಚಿಕರವಾದ ಹಣ್ಣನ್ನು ಸವಿಯಲೆಂದೇ ಮಾವಿನ ಹಣ್ಣಿನ ಸೀಸನ್‌ (Mango season) ಯಾವಾಗ ಬರುತ್ತಪ್ಪಾ ಎಂದು ಮಾವು ಪ್ರಿಯರು ಕಾಯ್ತಾನೇ ಇರ್ತಾರೆ. ಈ ವರ್ಷ ಈಗಾಗ್ಲೇ ಮಾವು ಸೀಸನ್‌ ಪ್ರಾರಂಭವಾಗಿದೆ. ಮಾರುಕಟ್ಟೆಯಲ್ಲಿ ಬಗೆಬಗೆಯ ಮಾವಿನ ಹಣ್ಣುಗಳು ಕಾಣಸಿಗುತ್ತಿವೆ. ಮಾವು ಪ್ರಿಯರಂತೂ ತಾಜಾ ಮಾವಿನ ಹಣ್ಣನ್ನು ತಿನ್ನುವುದರ ಜೊತೆಗೆ, ಮಾವಿನ ಹಣ್ಣಿನ ಕುಲ್ಫಿ, ಹೋಳಿಗೆ, ಕೇಸರಿಬಾತ್‌, ಪಾಯಸ, ಬರ್ಫಿ ಸೇರಿದಂತೆ ಬಗೆಬಗೆಯ ತಿನಿಸುಗಳನ್ನು ಸವಿಬೇಕು ಎಂದು ಬಯಸುತ್ತಾರೆ. ನಿಮಗೂ ಕೂಡಾ ಮಾವಿನ ಹಣ್ಣಿನ ವೆರೈಟಿ ಫುಡ್‌ಗಳನ್ನು ಸವಿಯಬೇಕು ಎಂದು ಆಸೆಯಾಗ್ತಿದೆಯೇ? ಹಾಗಿದ್ರೆ ಮಲ್ಲೇಶ್ವರಂನ (Malleshwaram)  ಹಳ್ಳಿಮನೆ ರೆಸ್ಟೋರೆಂಟ್‌ನಲ್ಲಿ (Halli Mane restaurant) ನಡಿತಿರೋ ಮ್ಯಾಂಗೋ ಮೇಳಕ್ಕೆ ತಪ್ಪದೆ ಭೇಟಿ ನೀಡಿ ಮತ್ತು ಬಗೆಬಗೆಯ ಮಾವಿನ ಹಣ್ಣಿನ ಖಾದ್ಯಗಳನ್ನು ಸವಿಯಿರಿ.

ಇದೀಗ ಮಾವಿನ ಹಣ್ಣಿನ ಸೀಸನ್‌ ಪ್ರಾರಂಭವಾಗಿರುವುದರಿಂದ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಹಳ್ಳಿ ಮನೆ ರೆಸ್ಟೋರೆಂಟ್‌ನಲ್ಲಿ ಮಾವು ಪ್ರಿಯರಿಗಾಗಿ ಮ್ಯಾಂಗೋ ಮೇ ಮೆನು ಕೂಡಾ ಆರಂಭವಾಗಿದೆ. ಈ ಕುರಿತ ವಿಡಿಯೋವನ್ನು ರಾಜೇಶ್‌ ಕೆ. ವರ್ಮಾ (RAJESH K VARMA) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ
ಏ.18 ಗುಡ್‌ ಫ್ರೈಡೆ; ಕ್ರೈಸ್ತ ಸಮುದಾಯಕ್ಕೆ ನಾಳೆ ಪವಿತ್ರ ಶುಕ್ರವಾರ
ಗರ್ಭಿಣಿಯರು ಮಿಕ್ಸರ್ ಗ್ರೈಂಡರ್ ಬಳಸೋದು ಅಪಾಯಕಾರಿಯೇ?
ಆರೋಗ್ಯಕ್ಕೂ ಹಿತ, ನಾಲಿಗೆಗೂ ರುಚಿ ಈ ಅತ್ತಿ ಕಾಯಿ ಚಟ್ನಿ
ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್​​ ಪಾತ್ರೆಗಳಲ್ಲಿ ಬಿಸಿ ಅನ್ನ ಸಂಗ್ರಹಿಸಬಾರದು

ವಿಡಿಯೋ ಇಲ್ಲಿದೆ ನೋಡಿ: 

ಮಲ್ಲೇಶ್ವರಂನಲ್ಲಿರುವ ಹಳ್ಳಿ ಮನೆ ರೆಸ್ಟೋರೆಂಟ್‌ ʼಮ್ಯಾಂಗೋ ಮೇ ಮೆನುʼ ಎಂಬ ಮ್ಯಾಂಗೋ ಮೇಳ ನಡಿತಿದ್ದು,  ಮ್ಯಾಂಗೋ ಜ್ಯೂಸ್‌, ಮಾವಿನ ಹಣ್ಣಿನ ಗೊಜ್ಜು, ಕಡುಬು, ರಸಾಯನ, ಮಾವಿನ ಹಣ್ಣಿನ ಹೋಳಿಗೆ, ಹಾಲುಬಾಯಿ, ಸೀಕರಣೆ, ಮಾವಿನ ಕಾಯಿಯ ವೆಜ್‌ ಮಸಾಲ, ಸಾರು, ಚಿತ್ರಾನ್ನ ಹೀಗೆ 20 ಕ್ಕೂ ಹೆಚ್ಚು ಬಗೆಯ ಮಾವಿನ ಹಣ್ಣಿನಿಂದ ತಯಾರಿಸಿದ ಖಾದ್ಯಗಳನ್ನು ಇಲ್ಲಿ ಬಡಿಸಲಾಗುತ್ತಿದೆ. ಏಪ್ರಿಲ್‌ 9 ಕ್ಕೆ ಈ ವಿಶೇಷ ಮ್ಯಾಂಗೋ ಮೇಳ ಆರಂಭವಾಗಿದ್ದು, 31 ರ ವರೆಗೆ ನಡೆಯಲಿದೆ.

ಇದನ್ನೂ ಓದಿ: ಗರ್ಭಿಣಿಯರು ಮಿಕ್ಸರ್ ಗ್ರೈಂಡರ್ ಬಳಸೋದು ಅಪಾಯಕಾರಿಯೇ? ಬಗ್ಗೆ ತಜ್ಞರು ಹೇಳುವುದು ಏನು?

ಮಧ್ಯಾಹ್ನ 12 ರಿಂದ 3.30 ರ ವರೆಗೆ ಹಾಗೂ ಸಂಜೆ 7 ರಿಂದ 9.30 ರ ವರೆಗೆ ಮ್ಯಾಂಗೋ ಥಾಲಿ ಲಭ್ಯವಿದ್ದು, ಅನ್‌ಲಿಮಿಟೆಡ್‌ ಊಟವನ್ನು ಸವಿಯಬಹುದು. ಊಟದ ಬೆಲೆ ವಯಸ್ಕರರಿಗೆ  400 ರೂ. ಮತ್ತು 12 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ 250 ರೂ. ಮಾವು ಪ್ರಿಯರೇ ನೀವಂತೂ ತಪ್ಪದೇ ಈ ರೆಸ್ಟೋರೆಂಟ್‌ಗೆ ಭೇಟಿ ನೀಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ