ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಬಿಸಿ ಅನ್ನ ಸಂಗ್ರಹಿಸಬಾರದು, ಯಾಕೆ ಗೊತ್ತಾ?
ಯಾವುದೇ ಕಾರಣಕ್ಕೂ ನೀವು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಅನ್ನವನ್ನು ಸಂಗ್ರಹ ಮಾಡಬೇಡಿ. ಇದು ದೇಹದ ಆರೋಗ್ಯಕ್ಕೆ ದೊಡ್ಡ ಮಟ್ಟದ ತೊಂದರೆಯನ್ನು ಉಂಟು ಮಾಡುತ್ತದೆ. ಬೇಯಿಸಿದ ಅನ್ನವನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಏಕೆ ಸಂಗ್ರಹಿಸಬಾರದು? ಯಾವ ಆಹಾರಗಳನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಬಾರದು, ಅಥವಾ ಯಾವ ಆಹಾರವನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಸಂಗ್ರಹಿಸಬಹುದು? ಅದಕ್ಕೂ ಮುನ್ನ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮ ಏನು ಇಲ್ಲಿದೆ ನೋಡಿ.

ಪ್ಲಾಸ್ಟಿಕ್ ( plastic) ಎನ್ನುವುದು ಎಷ್ಟು ಪರಿಣಾಮವನ್ನು ಉಂಟು ಮಾಡಿದೆ ಎಂದರೆ ಎಲ್ಲ ವಸ್ತುಗಳಿಗೂ ಪ್ಲಾಸ್ಟಿಕ್ ಬಳಕೆ ಇರುತ್ತದೆ. ಇತ್ತೀಚೆಗೆ ಕರ್ನಾಟಕದಲ್ಲಿ ಇಡ್ಲಿಗಳನ್ನು ಬೇಯಿಸಲು ಪ್ಲಾಸ್ಟಿಕ್ ಶೀಟ್ಗಳನ್ನು ಬಳಸುತ್ತಾರೆ. ಇದರಿಂದ ಕ್ಯಾನ್ಸರ್ (Cancer)ಬರುತ್ತದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿತ್ತು. ನಂತರ ಹೋಟೆಲ್ಗಳಲ್ಲಿ ಈ ಪ್ಲಾಸ್ಟಿಕ್ ಶೀಟ್ಗಳ ಬಳಕೆ ಮಾಡುವಂತಿಲ್ಲ ಎಂದು ಆದೇಶವನ್ನು ನೀಡಿತ್ತು. ಇದೆಲ್ಲ ಜನರ ಆರೋಗ್ಯ ಕಾಪಾಡಲು ಸರ್ಕಾರ ಮಾಡಿದ ನಿಮಯ. ಪ್ಲಾಸ್ಟಿಕ್ ನಿಷೇಧ ಮಾಡುವಂತೆ ಕೂಗು ಕೇಳಿ ಬರುತ್ತಿತ್ತು. ಆದರೆ ನಮ್ಮ ಮನೆಗಳಲ್ಲಿ ಬಿಸಿಯಾದ ಆಹಾರಗಳನ್ನು ಹಾಕುವುದು ಯಾವುದಕ್ಕೆ ಪ್ಲಾಸ್ಟಿಕ್ ಪಾತ್ರೆಗಳಿಗೆ ಇದು ಸರಿಯೇ? ಬಿಸಿ ಆಹಾರಗಳನ್ನು ಪ್ಲಾಸ್ಟಿಕ್ ಪಾತ್ರೆಗಳಿಗೆ ಹಾಕಬಾರದು. ಅದರಲ್ಲೂ ಬಿಸಿಯಾದ ಅನ್ನವನ್ನು ಪ್ಲಾಸ್ಟಿಕ್ ಪಾತ್ರೆಕ್ಕೆ ಹಾಕಬೇಡಿ. ನಾವು ಪ್ಲಾಸ್ಟಿಕ್ ಪಾತ್ರೆಗಳಿಗೆ ಹೊಂದಿಕೊಂಡಿರಬಹುದ, ಆದರೆ ಇದು ಆರೋಗ್ಯ ಒಳ್ಳೆಯದಲ್ಲ. ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಅನ್ನವನ್ನು ಸಂಗ್ರಹಿಸಿಕೊಂಡರೆ ಏನಾಗುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಬೇಯಿಸಿದ ಅನ್ನವನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಏಕೆ ಸಂಗ್ರಹಿಸಬಾರದು?
ಅನ್ನವನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಸಂಗ್ರಹ ಮಾಡಿಕೊಳ್ಳುವುದನ್ನು ತಪ್ಪಿಸಬೇಕು. ಈ ಬಗ್ಗೆ ಆಯುರ್ವೇದ ಆರೋಗ್ಯ ತರಬೇತುದಾರ ಡಿಂಪಲ್ ಜಂಗ್ಡಾ ಅವರು ಹೇಳಿರುವ ಪ್ರಕಾರ, ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಅನ್ನವನ್ನು ಸಂಗ್ರಹಿಸಿದರೆ ಅದು ವಿಷವಾಗಿ ಬದಲಾಗುತ್ತದೆ. ನಂತರ ನಮ್ಮ ದೇಹಕ್ಕೆ ದೊಡ್ಡ ಪ್ರಮಾಣದ ಪಟ್ಟು ನೀಡುತ್ತದೆ. ಪ್ಲಾಸ್ಟಿಕ್ ಪಾತ್ರೆಗಳ ಒಳಗೆ ತೇವಾಂಶ ಸಂಗ್ರಹವಾಗುವುದರಿಂದ ಇದು ಅಫ್ಲಾಟಾಕ್ಸಿನ್‌ಗಳು ಮತ್ತು ಮೈಕೋಟಾಕ್ಸಿನ್‌ಗಳ ಉತ್ಪಾದನೆಗೆ ಕಾರಣವಾಗಬಹುದು. ಇದರಿಂದ ಮೂತ್ರಪಿಂಡ ಮತ್ತು ಯಕೃತ್ತಿಗೆ ಹಾನಿ ಮಾಡುತ್ತದೆ. ಅದಕ್ಕೆ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಅನ್ನವನ್ನು ಹಾಕುವುದನ್ನು ನಿಲ್ಲಿಸಿ.
ಈ ಆಹಾರಗಳನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಸಂಗ್ರಹಿಸಬೇಡಿ:
ಸೊಪ್ಪು ಆಹಾರ: ಸೊಪ್ಪನ್ನು ಕತ್ತರಿಸಿ ಪ್ಲಾಸ್ಟಿಕ್ ಪಾತ್ರೆಯಲ್ಲಿ ಸಂಗ್ರಹಿಸಿದಾಗ, ಅವು ತೇವಾಂಶವನ್ನು ಕಳೆದುಕೊಳ್ಳುತ್ತವೆ. ಈ ತೇವಾಂಶದ ಶೇಖರಣೆಯು ವಿಷವಾಗಿ ಪರಿರ್ವತನೆ ಆಗುತ್ತದೆ. ಇದು ನಿಮ್ಮ ದೇಹಕ್ಕೆ ಹಾನಿಕಾರಕ.
ಬೇಯಿಸಿದ ಬೇಳೆ ಮತ್ತು ಬೀನ್ಸ್: ಬೇಯಿಸಿದ ಬೇಳೆ ಮತ್ತು ಬೀನ್ಸ್‌ಗಳನ್ನು ಫ್ರಿಡ್ಜ್‌ನಲ್ಲಿ ಕೆಲವು ದಿನಗಳವರೆಗೆ ಸಂಗ್ರಹಿಸುವ ಅಭ್ಯಾಸ ಇದ್ದರೆ ಇಂದೇ ಬಿಟ್ಟುಬಿಡಿ, ಇದು ಸ್ವಲ್ಪ ಕಾಲದವರೆಗೆ ಬಾಳಿಕೆ ಬರಬಹುದು ಎಂಬ ಕಲ್ಪನೆ ಇದ್ದರೆ, ಅದು ತಪ್ಪು. ಇದು ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನಷ್ಟಕ್ಕೆ ಕಾರಣವಾಗಬಹುದು. ಜತೆಗೆ ಹೀಗೆ ಮಾಡಿದ್ರೆ ಅದರ ಪೋಷಕಾಂಶ ಹೋಗಿ, ಕೇವಲ ಕ್ಯಾಲೊರಿಗಳನ್ನು ಸೇವನೆ ಮಾಡಿದಂತೆ ಆಗುತ್ತದೆ.
ವಿಟಮಿನ್ ಸಿ ಸಮೃದ್ಧ ಹಣ್ಣುಗಳು: ಕಿತ್ತಳೆ, ಬೆಲ್ ಪೆಪ್ಪರ್ ಮುಂತಾದ ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳು ಪ್ಲಾಸ್ಟಿಕ್ ಪಾತ್ರೆಯೊಳಗೆ ಹಾಕಬೇಡಿ, ಯಾಕೆ ಗೊತ್ತಾ? ಇವುಗಳನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಿದ್ರೆ ಅದಕ್ಕೆ ಗಾಳಿ ಹೋಗಲು ಜಾಗವಿಲ್ಲ, ಉಸಿರುಗಟ್ಟಿದಂತೆ ಅಗುತ್ತದೆ ಹಾಗೂ ಅದು ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತದೆ.
ಇದನ್ನೂ ಓದಿ: ಯುವ ಜನರೇ… ಮದುವೆ ವಿಷಯದಲ್ಲಿ ಅಮ್ಮನ ಈ ಮಾತುಗಳನ್ನು ಕೇಳಿ
ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಸಂಗ್ರಹಿಸುವ ಮೊದಲು ಈ ವಿಚಾರ ನೆನಪಿರಲಿ:
ಮತ್ತೆ ಬಿಸಿ ಮಾಡಬೇಡಿ: ಒಂದು ಬಾರಿ ಪ್ಲಾಸ್ಟಿಕ್ ಪಾತ್ರೆಯಲ್ಲಿ ಆಹಾರವನ್ನು ಹಾಕಿದ ನಂತರ ಮತ್ತೆ ಬಿಸಿ ಮಾಡಬೇಡಿ. ಮತ್ತೊಮ್ಮೆ ಬೇಯಿಸಿದರೆ ಅದು ಸುರಕ್ಷಿತ ಎಂದು ಅನ್ನಿಸಿದರು. ಹಾಗೆ ಮಾಡಬೇಡಿ. ಪ್ಲಾಸ್ಟಿಕ್ ಒಂದು ನಿರ್ದಿಷ್ಟ ರೀತಿಯ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ. ಇದು ಆಹಾರದ ಪೋಷಕಾಂಶವನ್ನು ಸೂರಿಕೆ ಮಾಡುತ್ತದೆ. ಈ ಬಗ್ಗೆ ಬೆಂಗಳೂರಿನ ಪೌಷ್ಟಿಕತಜ್ಞೆ ಡಾ. ಅಂಜು ಸೂದ್ ಹೇಳಿರುವ ಪ್ರಕಾರ, ಬಿಸಿ ಅಥವಾ ಬೇಯಿಸಿದ ಆಹಾರವನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಸಂಗ್ರಹಿಸುವುದು ಸೂಕ್ತವಲ್ಲ, ಆದರೆ ತಂಪಾದ ಮತ್ತು ಒಣ ಆಹಾರವನ್ನು ಸಂಗ್ರಹಿಸುವುದು ಉತ್ತಮ. ಆದರೆ ಅದು ಆ ಪ್ಲಾಸ್ಟಿಕ್ ಪಾತ್ರೆಯ ಸಾಮರ್ಥ್ಯದ ಮೇಲೆ ಇರುತ್ತದೆ ಎಂದು ಹೇಳಿದ್ದಾರೆ.
ಪ್ಲಾಸ್ಟಿಕ್ ಪಾತ್ರೆಯಲ್ಲಿ ಬಿಸಿನೀರು ಹಾಕಬೇಡಿ: ಪ್ಲಾಸ್ಟಿಕ್ಗೆ ಬಿಸಿ ಬಿದ್ದಾಗ ಅದು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಬಿಸಿನೀರು ಕೂಡ ಅದೇ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ