ಉತ್ತರ ಭಾರತೀಯ ಆಹಾರದಲ್ಲಿ ಬ್ರೆಡ್‌ಗಳು ಮುಖ್ಯ ಪಾತ್ರ ವಹಿಸಿವೆ. ನಾರ್ತ್ ಇಂಡಿಯನ್ ರೆಸ್ಟೋರೆಂಟ್ಗೆ ಹೋದರೆ ರೋಟಿ, ನಾನ್, ಕುಲ್ಚಾ ಬ್ರೆಡ್‌ಗಳನ್ನು ತಿನ್ನದೇ ಬರುವವರು ಬಹಳ ಕಡಿಮೆ. ಈ ಬ್ರೆಡ್ಗಳಿಗೆ ಸರಿಯಾದ ಕಾಂಬಿನೇಷನ್ ಇದ್ದರೆ ಅದರ ರುಚಿಯೇ ಬೇರೆ. ಭಾರತದ ಈ ರೋಟಿಗಳು ಜಗತ್ತಿನುದ್ದಕ್ಕೂ ತನ್ನ ರುಚಿಯನ್ನು ಪಸರಿಸಿದೆ. ಏಕೆಂದರೆ ಬೇರೆ ದೇಶಗಳ ರೋಟಿಗಳಿಗಿಂತ ಭಾರತದ ರೋಟಿಗಳು ವಿವಿಧ ರೂಪ, ಗಾತ್ರ, ರುಚಿಯನ್ನು ಹೊಂದಿರುತ್ತವೆ.
ಜಗತ್ತಿನ ಬೆಸ್ಟ್ ಬ್ರೆಡ್‌ಗಳ ಪಟ್ಟಿಯನ್ನು ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ ಟೇಸ್ಟ್ ಅಟ್ಲಾಸ್ ಬಿಡುಗಡೆ ಮಾಡಿದೆ. ವಿಶ್ವದ 50 ಅತ್ಯುತ್ತಮ ಬ್ರೆಡ್‌ಗಳ ಪೈಕಿ 5 ಭಾರತೀಯ ಬ್ರೆಡ್‌ಗಳು ಕಾಣಿಸಿಕೊಂಡಿರುವುದು ಹೆಮ್ಮೆಯ ಸಂಗತಿ.
ಇದನ್ನೂ ಓದಿ: ನೀವು ಈ ಅನಾರೋಗ್ಯದಿಂದ ಬಳಲುತ್ತಿದ್ದರೆ ರೋಟಿ ಬದಲು ಬಿಳಿ ಅನ್ನ ಸೇವಿಸಿ
ಬಟರ್ ಗಾರ್ಲಿಕ್ ನಾನ್ ಈ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಬಟರ್ ಗಾರ್ಲಿಕ್ ನಾನ್ ಅನ್ನು ಟೇಸ್ಟ್ ಅಟ್ಲಾಸ್ ಈ ಹಿಂದೆ ವಿಶ್ವದ 50 ಅತ್ಯುತ್ತಮ ಫ್ಲಾಟ್‌ಬ್ರೆಡ್‌ಗಳಲ್ಲಿ ಆಯ್ಕೆ ಮಾಡಿತ್ತು. ಆ ಪಟ್ಟಿಯಲ್ಲಿ ಇದು ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿತ್ತು. ಈ ಹಿಂದಿನ ಪಟ್ಟಿಯಲ್ಲಿ 4ನೇ ಅತ್ಯುತ್ತಮ ಫ್ಲಾಟ್‌ಬ್ರೆಡ್ ಎಂದು ಹೆಸರಿಸಲಾಗಿದ್ದ ಪ್ಲೇನ್ ನಾನ್ ಈ ಬಾರಿ 8ನೇ ಸ್ಥಾನ ಪಡೆದಿದೆ.
ಪರಾಟ ಕೂಡ ಈ ಎರಡೂ ಪಟ್ಟಿಗಳಲ್ಲಿ ಸ್ಥಾನವನ್ನು ಪಡೆದಿದೆ. ಉತ್ತರ ಭಾರತದ ಬಹುತೇಕ ಕಡೆ ಬೆಳಗಿನ ಉಪಾಹಾರಕ್ಕೆ ಪರಾಟ, ಆಲೂ ಪರಾಟವನ್ನು ಬಳಸಲಾಗುತ್ತದೆ. ಅಮೃತಸರಿ ಕುಲ್ಚಾ ಈ ಬಾರಿಯ ಪಟ್ಟಿಯಲ್ಲಿ 27ನೇ ಸ್ಥಾನದಲ್ಲಿದೆ.