ಕಾಫಿ ಟೀ ಜೊತೆಗೆ ಬೆಸ್ಟ್ ಕಾಂಬಿನೇಶನ್ ಚಿಕನ್ ಈರುಳ್ಳಿ ಪಕೋಡ, ಇಲ್ಲಿದೆ ಸಿಂಪಲ್ ರೆಸಿಪಿ

ಸಂಜೆಯ ಕಾಫಿ ಟೀಗೆ ಏನಾದ್ರೂ ಸ್ನಾಕ್ಸ್ ಇದ್ದರೆ ಅದರ ಮಜಾನೇ ಬೇರೆ. ಈ ಹವಾಮಾನ ಬದಲಾವಣೆಯಿಂದಾಗಿ ಸಂಜೆಯ ಹೊತ್ತಿನಲ್ಲಿ ಏನಾದರೂ ತಿನ್ನುವ ಬಯಕೆಯು ಸಹಜವಾಗಿಯೇ ಆಗುತ್ತದೆ. ಹೀಗಾಗಿ ಬಿಸಿ ಬಿಸಿಯಾಗಿ ಏನಾದರೂ ಮಾಡಿಕೊಂಡು ತಿಂದು ಬಿಟ್ಟರೆ, ಬಾಯಿಗೆ ಮಾತ್ರವಲ್ಲ ಮನಸ್ಸಿಗೂ ಆನಂದ. ಈ ಚಳಿಗಾಲದಲ್ಲಿ ಸಂಜೆ ಕಾಫಿ ಜೊತೆಗೆ ಏನಾದರೂ ತಿನ್ನೋಣ ಎಂದುಕೊಂಡವರು ಚಿಕನ್ ಈರುಳ್ಳಿ ಪಕೋಡವನ್ನು ಮಾಡಿ ಸವಿಯಬಹುದು. ಸಿಂಪಲ್ ರೆಸಿಪಿಯ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಕಾಫಿ ಟೀ ಜೊತೆಗೆ ಬೆಸ್ಟ್ ಕಾಂಬಿನೇಶನ್ ಚಿಕನ್ ಈರುಳ್ಳಿ ಪಕೋಡ, ಇಲ್ಲಿದೆ ಸಿಂಪಲ್ ರೆಸಿಪಿ
Edited By:

Updated on: Jan 16, 2024 | 1:44 PM

ಈರುಳ್ಳಿ ಪಕೋಡ ಅಥವಾ ಈರುಳ್ಳಿ ಪಕೋರವನ್ನು ಕೇಳಿರಬಹುದು. ಮಳೆಗಾಲವಿರಲಿ, ಚಳಿಗಾಲವಿರಲಿ ಈಗಾಗಲೇ ಈ ಈರುಳ್ಳಿ ಪಕೋಡವನ್ನು ಮನೆಯಲ್ಲಿ ಮಾಡಿ ಸವಿದಿದ್ದೀರಿ. ಆದರೆ ಸಂಜೆ ಕಾಫಿಗೆ ಬಿಸಿ ಬಿಸಿಯಾಗಿ ಏನಾದರೂ ತಿನ್ನುವ ಅನಿಸಿದರೆ ಚಿಕನ್ ಈರುಳ್ಳಿ ಪಕೋಡ ಟ್ರೈ ಮಾಡಬಹುದು. ಮನೆಯಲ್ಲಿಯೇ ಇರುವ ಸಾಮಗ್ರಿಗಳಿಂದ ಈ ಸಿಂಪಲ್ ಚಿಕನ್ ಈರುಳ್ಳಿ ಪಕೋಡವನ್ನು ಸುಲಭವಾಗಿ ಮಾಡಿ ಸವಿಯಬಹುದು.

ಬೇಕಾಗುವ ಸಾಮಾಗ್ರಿಗಳು:

200 ಗ್ರಾಂ ನಷ್ಟು ಚಿಕನ್ (ಬೋನ್‌ಲೆಸ್), 100 ಗ್ರಾಂನಷ್ಟು ಸಣ್ಣದಾಗಿ ಕತ್ತರಿಸಿದ ಈರುಳ್ಳಿ ರಿಂಗ್‌ಗಳು, ಕತ್ತರಿಸಿದ ನಾಲ್ಕು ಹಸಿಮೆಣಸು, 2 ಎಸಳು ಕೊತ್ತಂಬರಿ ಸೊಪ್ಪು, ಒಂದು ಕಪ್ ನಷ್ಟು ಕಡಲೆ ಹಿಟ್ಟು, ಒಂದು ಚಮಚ ಕಬಾಬ್ ಮಸಾಲಾ, ಅರ್ಧ ಚಮಚ ಫೆನ್ನಲ್ ಬೀಜಗಳು, ರುಚಿಗೆ ತಕ್ಕಷ್ಟು ಉಪ್ಪು, ಮೂರು ಕಪ್ ಎಣ್ಣೆ.

ಇದನ್ನೂ ಓದಿ: ಸಂಜೆ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕಾ? ಹಾಗಾದರೆ ಪಾಲಕ್ ಪಕೋಡ ಉತ್ತಮ 

ಚಿಕನ್ ಈರುಳ್ಳಿ ಪಕೋಡ ಮಾಡುವ ವಿಧಾನ:

* ಕಡಲೆಹಿಟ್ಟನ್ನು ನೀರು, ಉಪ್ಪು ಹಾಗೂ ಕಬಾಬ್ ಮಸಾಲಾದೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿಟ್ಟುಕೊಳ್ಳಬೇಕು.

* ಈ ಮಿಶ್ರಣಕ್ಕೆ ಹಸಿಮೆಣಸು, ಫೆನ್ನಲ್ ಬೀಜ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ.

* ಕೊನೆಯದಾಗಿ ಚಿಕನ್ ತುಂಡುಗಳು ಹಾಗೂ ಈರುಳ್ಳಿ ರಿಂಗ್ ಅನ್ನು ಕಡಲೆ ಹಿಟ್ಟಿಗೆ ಹಾಕಿ ಕಲಸಿಕೊಂಡು ಸ್ವಲ್ಪ ಹೊತ್ತು ಹಾಗೆ ಬಿಡಿ.

* ಇನ್ನೊಂದೆಡೆ ಸ್ಟವ್ ನಲ್ಲಿ ಬಾಣಲೆ ಇಟ್ಟು, ಅದಕ್ಕೆ ಎಣ್ಣೆ ಹಾಕಿ ಅದನ್ನು ಬಿಸಿಯಾಗಲು ಬಿಡಿ.

* ಎಣ್ಣೆ ಕಾದಂತೆ ಹಿಟ್ಟಿನಲ್ಲಿ ಮಿಕ್ಸ್ ಆಗಿರುವ ಚಿಕನ್ ತುಂಡುಗಳು ಮತ್ತು ಈರುಳ್ಳಿ ರಿಂಗ್ ಅನ್ನು ಎಣ್ಣೆಯಲ್ಲಿ ಬಿಡಿ.

* ಪಕೋಡಾವು ಚಿನ್ನ ಮಿಶ್ರಿತ ಕಂದು ಬಣ್ಣಕ್ಕೆ ತಿರುಗುವವರೆಗೆ ಎಣ್ಣೆಯಲ್ಲಿ ತಿವಿರಿ ಹಾಕುತ್ತಾ ಇರಿ. ಕಂದು ಬಣ್ಣಕ್ಕೆ ತಿರುಗಿದ ಬಳಿಕ ಎಣ್ಣೆಯಿಂದ ತೆಗೆದು, ಸಂಜೆಯ ಕಾಫಿ ಅಥವಾ ಟೀಯೊಂದಿಗೆ ಸವಿಯಿರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us